6

filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;

ಹೊಸ್ಸೂರಿನಲ್ಲಿ ಅಂಗನವಾಡಿಯತ್ತ ಸಮುದಾಯ ಪಾಲಕ-ಪೋಷಕರ ಸಭೆ

ಕರುನಾಡ ಬೆಳಗು ಸುದ್ದಿ

ವಿಜಯನಗರ, 3- ಹೊಸಪೇಟೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಚಿತವಾಡಗಿ ೧ನೇ ವಲಯದ ಹೊಸ್ಸೂರು ೧ ಮತ್ತು ೨ನೇ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿಯತ್ತ ಸಮುದಾಯ ಪಾಲಕ ಪೋಷಕರ ಸಭೆ ನಡೆಯಿತು.

ಅಂಗನವಾಡಿಗಳಿಗೆ ಸ್ಮಾರ್ಟ್ ಟಿವಿ : ಅಂಗನವಾಡಿ ಕೇಂದ್ರದ ಮಗುವಿನ ಪೋಷಕರು ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಸಣ್ಣಕ್ಕಿ ಲಕ್ಷ್ಮಣ ಅವರು ಅಂಗನವಾಡಿಗಳಿಗೆ ಸ್ಮಾರ್ಟ್ ಟಿವಿ ವಿತರಣೆ ಮಾಡಿದರು.

ಹೊಸ್ಸೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜಯಪದ್ಮಾ ಅವರು ಸ್ಮಾರ್ಟ್ ಟಿವಿಯನ್ನು ಉದ್ಘಾಟಿಸಿ ಮಾತನಾಡಿ, ಸಣ್ಣಕ್ಕಿ ಲಕ್ಷ್ಮಣ ರವರು ನಮ್ಮ ಗ್ರಾಮ ಪಂಚಾಯತಿ ಸದಸ್ಯರಲ್ಲೆ ಅತ್ಯಂತ ಕ್ರಿಯಾಶಿಲ ವ್ಯಕ್ತಿ ಹಾಗೂ ಸದಸ್ಯರು. ಇವರು ನಮಗೆಲ್ಲರಿಗೂ ಪ್ರೇರಣೆಯಾಗಿದ್ದಾರೆ. ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಸ್ಮಾರ್ಟ್ ಟಿವಿ ವಿತರಣೆಗೆ ಕ್ರಮ ವಹಿಸಲಾಗುದು. ಅಂಗನವಾಡಿ ಕೇಂದ್ರಗಳಿಗೆ ಸಿಸಿಟಿವಿ ಅಳವಡಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಸಿಂದೂ ಅಂಗಡಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕೇಂದ್ರಕೆ ಬರುವಂತಹ ಮಕ್ಕಳ ಕಲಿಕೆಗೋಸ್ಕರ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಸಮುದಾಯದ ಪಾಲ್ಗೊಳ್ಳುವಿಕೆಯು ಅತ್ಯಂತಹ ಮಹತ್ವದ್ದಾಗಿದ್ದು, ಸಮುದಾಯವು ಯಾವಾಗ ಮಕ್ಕಳ ಕಲಿಕೆಗೆ ಹಾಗೂ ಅಂಗನವಾಡಿ ಅಭಿವೃದ್ಧಿಗೆ ಶ್ರಮಿಸುತ್ತದೆ ಆಗ ಮಕ್ಕಳ ಕಲಿಕೆ ಸಧೃಡವಾಗುತ್ತೆ. ಇದರ ಜೊತೆ ಅಂಗನವಾಡಿಯು ಸಹ ಬೆಳೆಯುತ್ತೆ. ಅದಕ್ಕೆ ಇಂದು ನಮ್ಮ ಅಂಗನವಾಡಿ ಕೇಂದ್ರಗಳಿಗೆ ಮಗುವಿನ ಪೋಷಕರು ಹಾಗೂ ಹೊಸ್ಸೂರು ಗ್ರಾಮ ಪಂಚಾಯತಿ ಸದಸ್ಯರಾದ ಸಣ್ಣಕ್ಕಿ ಲಕ್ಷ್ಮಣ ಅವರು ಅತ್ಯಾಧುನಿಕ ಸ್ಮಾರ್ಟ ಟಿವಿಯನ್ನು ಕೊಡುಗೆ ನೀಡಿರುವುದು ಒಳ್ಳಯ ನಿದರ್ಶನವಾಗಿದೆ ಎಂದರು.

ಸಭೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಅಂಗನವಾಡಿ ಮಗುವಿನ ಪೋಷಕರಾದ ಸಣ್ಣಕ್ಕಿ ಲಕ್ಷ್ಮಣ, ಚಿತವಾಡಗಿ ೧ನೇ ವಲಯದ ಮೇಲ್ವಿಚಾರಕಿಯಾದ ಎಲ್.ಡಿ.ನಧಾಫ್, ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮದ ಅಧಿಕಾರಿಗಾಳಾದ ಕೊಟ್ರೇಶ ಯರಡಕೇರಿ, ಹಲೋ ಪೋಷಕರೆ ಕಾರ್ಯಕ್ರಮದ ಸಂಯೋಜಕರಾದ ಅರ್ಜುನ್, ಹೊಸ್ಸೂರು ಅಂಗನವಾಡಿ ಕೇಂದ್ರದ ಅಂಗನವಾಡಿ ಕಾರ್ಯಕರ್ತೆಯರಾದ ನೇತ್ರಾವತಿ ಹಾಗೂ ಯಶೋದಾ ಮತ್ತು ಅಂಗನವಾಡಿ ಮಕ್ಕಳು ಹಾಗೂ ಪೋಷಕರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!