
ಬಿಜೆಪಿ-ಜೆಡಿಎಸ್ ವಿರುದ್ಧ ಮೈಸೂರಿನ ಹೋರಾಟದಲ್ಲಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಭಾಗಿ : ಶಾಸಕ ಗವಿಯಪ್ಪ
ಕರುನಾಡ ಬೆಳಗು ಸುದ್ದಿ
ವಿಜಯನಗರ, 8- ಸಿದ್ದರಾಮಯ್ಯನವರು ವ್ಯವಹಾರಸ್ಥರ ಕುಟುಂಬದಿಂದ ಬಂದವರಲ್ಲ ಅವರು ರೈತ, ಬಡ ಕುಟುಂಬ ದಿಂದ ಬಂದವರು. ಅವರ 40 ವರ್ಷಗಳ ರಾಜಕಾರಣದಲ್ಲಿ ಸ್ವಚ್ಛ ರಾಜಕಾರಣಿ ಎಂದು ಇಡೀ ರಾಜ್ಯಕ್ಕೆ ಗೊತ್ತು.
ನಗರದ ಶಾಸಕರ ಕಚೇರಿಯಲ್ಲಿ ಪತ್ರಿಕೆ ಹೇಳಿಕೆ ನೀಡಿ ಮಾತನಾಡಿದ ಅವರು ಇದೇ 09 ರಂದು ಬಿಜೆಪಿ – ಜೆಡಿಎಸ್ ವಿರುದ್ಧ ಮೈಸೂರಿನ ಹೋರಾಟದಲ್ಲಿ ಭಾಗಿಯಾಗಲು ವಿಜಯನಗರ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಪುರುಷರು 150ಜನ ಹಾಗೂ ವಿಶೇಷವಾಗಿ ಮಹಿಳಾ ಕಾರ್ಯಕರ್ತರು ಸಹ ಸುಮಾರು 200ಜನ ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.
ಒಂದು ಸಮಯದಲ್ಲಿ ದೇವೇಗೌಡರೇ ಅವರಿಗೆ ಹಣಕಾಸು ಖಾತೆಯನ್ನು ಕೊಟ್ಟು ಸಾಕಷ್ಟು ಅವಕಾಶಗಳನ್ನು ಕೊಟ್ಟಿದ್ದರು. ಇಂದು ಬಿಜೆಪಿ ಯೊಂದಿಗೆ ಕೈಜೋಡಿಸಿ ಅವರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಸ್ವಚ್ಛತೆ ಇರುವವರಿಗೆ ಮಾತ್ರ ಹಣಕಾಸು ಮಂತ್ರಿ ಕೊಡುವುದು ಹಾಗಾಗಿ ಅವರಿಗೆ ಕೊಟ್ಟಿದ್ದರು. ಅವರ ವಿರುದ್ಧ ಪ್ರತಿಭಟಿಸುವುದೆಂದರೆ ಹಾಸ್ಯಸ್ಪದ, ಮುಖ್ಯಮಂತ್ರಿಗಳು ವ್ಯವಹಾರಸ್ತಾರಲ್ಲ ವ್ಯಾಪಾರಿಗಳು ಅಲ್ಲ, ಹಣದ ಮೇಲೆ ಆಸೆ ಇಲ್ಲ, ಅಭಿವೃದ್ಧಿಗಾಗಿ ಯಾರೇ ಅನುದಾನ ಕೇಳಿದರು ಕೊಡುತ್ತಾ ಯಾವುದೇ ಕಳಂಕ ಇಲ್ಲದೆ ಆಡಳಿತ ಕೊಡುತ್ತಾ ಬಂದಿದ್ದಾರೆ. ಅವರು ನಮ್ಮ ಕರ್ನಾಟಕಕ್ಕೆ ಕೀರ್ತಿ ಅಂತಹ ವ್ಯಕ್ತಿ ಮೇಲೆ ತಪ್ಪು ಅಪವಾದ ಹೊರಿಸುವುದು ತಪ್ಪು. ಬಿಜೆಪಿ- ಜೆಡಿಎಸ್ ಹೋರಾಟದ ವಿರುದ್ಧ ನಮ್ಮ ನಿಲುವು, ಹಾಗಾಗಿ ನಮ್ಮ ನಾಯಕರೊಂದಿಗೆ ಮೈಸೂರಿನಲ್ಲಿ ಭಾಗಿಯಾಗಲು ವಿಜಯನಗರ ಜಿಲ್ಲೆಯಿಂದ ಕಾಂಗ್ರೆಸ್ನ ಎಲ್ಲಾ ಕಾರ್ಯಕರ್ತರು ಸೇರಿ ಭಾಗಿಯಾಗಲಿದ್ದೇವೆ ಎಂದರು.
ವಿಜಯನಗರ ಜಿಲ್ಲೆಯ ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷ ಸಾಹಿರಾಬಾನು ಮಾತನಾಡಿ ಬಿಜೆಪಿ ಜೆಡಿಎಸ್ ನವರು ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡಲು ಯೋಗ್ಯತೆ ಇಲ್ಲ (ಮೂಡ) ಹಗರಣದಲ್ಲಿ ವಿನಾಕಾರಣ ಸಿದ್ದರಾಮಯ್ಯ ಮತ್ತು ಅವರ ಕುಟುಂಬವನ್ನು ಎಳೆದು ತರುತ್ತಿದ್ದಾರೆ. ಗಂಟು ಹೊಡೆಯುವುದು ಬಿಜೆಪಿ ಜೆಡಿಎಸ್ ನವರ ಕೆಲಸ. ಸಿದ್ದರಾಮಯ್ಯನವರು 40 ವರ್ಷದ ರಾಜಕೀಯದಲ್ಲಿ ಬಡವರ ಹೇಳಿಕೆಗಾಗಿ ಶ್ರಮಿಸಿದವರು ಹಾಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಒಂದು ವೇಳೆ ಅವರು ಪ್ರತಿಭಟನೆಯನ್ನು ವಾಪಸ್ ಪಡೆಯದೇ ಇದ್ದಲ್ಲಿ ಮಹಿಳಾ ಕಾಂಗ್ರೆಸ್ ನಿಂದ ರಾಜ್ಯದ್ಯಂತ ಉಗ್ರ ಹೋರಾಟವನ್ನು ಹಮ್ಮಿಕೊಂಡು ಕೆಪಿಸಿಸಿ ಇಂದ ಹಿಡಿದು ತಾಲೂಕು ಮಟ್ಟದವರೆಗೂ ನಾವು ಮಹಿಳಾ ಕಾರ್ಯಕರ್ತರು ಹೋರಾಟದಲ್ಲಿ ಭಾಗಿಯಾಗುತ್ತೇವೆ.
ವಿಜಯನಗರ ಜಿಲ್ಲೆಯಿಂದ 100 ರಿಂದ 150 ಜನ ಮಹಿಳೆಯರು ನಮ್ಮ ಸ್ವಂತ ಖರ್ಚಿನಿಂದ ಊಟ ಸಮೇತ ಕಟ್ಟಿಕೊಂಡು ನಾಳೆ ಮೈಸೂರಿಗೆ ಹೊರಡಲಿದ್ದೇವೆ.
ಯೋಗಲಕ್ಷ್ಮಿ, ಭಾಗ್ಯಲಕ್ಷ್ಮಿ ಬರಾಡೆ, ಸಂಗೀತ ಸಿಂಗ್, ಸುನಂದಮ್ಮ , ಬಾನುಬಿ, ಅನಿತಾ ರಾಣಿ ಇತರರಿದ್ದರು.