
ಕುಕನೂರಿನಲ್ಲಿ ಜಿಲ್ಲಾ ಮಟ್ಟದ ಪಶು ಪಾಲಿ ಕ್ಲಿನಿಕ್ ಆಸ್ಪತ್ರೆ : ಶಾಸಕ ರಾಯರೆಡ್ಡಿ
ಕರುನಾಡ ಬೆಳಗು ಸುದ್ದಿ
ಕುಕನೂರು, 29- ಕುಕನೂರು ಪಟ್ಟಣದಲ್ಲಿ ಜಿಲ್ಲಾ ಮಟ್ಟದ ಪಶು ಪಾಲಿ ಕ್ಲಿನಿಕ ಆಸ್ಪತ್ರೆ ಮಾಡಲಾಗುವುದು ಎಂದು ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.
ಪಟ್ಟಣದ ಪಶು ವೈದ್ಯಕೀಯ ಆಸ್ಪತ್ರೆಗೆ ಭೇಟಿ ನೀಡಿ ಪಶು ಆಸ್ಪತ್ರೆಗೆ ಬಂದಿರುವ ಉಪಕರಣಗಳನ್ನು ವೀಕ್ಷಿಸಿ ನಂತರ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿ, ಕುಕನೂರು ಪಟ್ಟಣಕ್ಕೆ ಜಿಲ್ಲಾ ಮಟ್ಟದ ಪಶು ಪಾಲಿ ಕ್ಲಿನಿಕ ಆಸ್ಪತ್ರೆ ಕಟ್ಟಡಕ್ಕೆ ಹಣ ಬಿಡುಗಡೆಯಾಗಿದು. ಕಟ್ಟಡದ ಕಾಮಗಾರಿಯ ಕೆಲಸವೂ ನಾಳೆಯಿಂದ ಒಳ್ಳೆಯ ಕ್ವಾಲಿಟಿ ಕಟ್ಟಡ ನಿರ್ಮಾಣ ಮಾಡಲು ಪ್ರಾರಂಭಿಸಬೇಕು ಎಂದು ಕಾಂಟ್ರಾಕ್ಟರ್‌ಗೆ ಸೂಚಿಸಿದರು.
ಪಾಲಿ ಕ್ಲಿನಿಕ್ ಆಸ್ಪತ್ರೆ ಮಾಡುವುದರಿಂದ ಎಲ್ಲಾ ರೈತ ಬಾಂಧವರ ಜಾನುವಾರಗಳಿಗೆ ಬರುವಂತ ರೋಗವನ್ನು ನಿಖರವಾಗಿ ನಿರ್ಣಯ ಮಾಡುವುದಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಮುಂದೆ ಬರುವಂತ ದಿನಮಾನಗಳಲ್ಲಿ ಪಡೆಯಬಹುದು. ಜಾನುವಾರುಗಳ ಸಮಸ್ಯೆಯಾದ ಶಸ್ತ್ರ ಚಿಕಿತ್ಸೆ, ಮಲ ಮೂತ್ರ, ರಕ್ತ ಪರೀಕ್ಷೆ ಸಮಸ್ಯೆಗಳ ನಿರ್ವಹಣೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಈ ಪಾಲಿ ಕ್ಲಿನಿಕ್ ಆಸ್ಪತ್ರೆಯಲ್ಲಿ ಮಾಡಲಾಗುತ್ತದೆ. ಈ ಆಸ್ಪತ್ರೆಗೆ ೧೦ ಲಕ್ಷ ರೂಪಾಯಿಗಳ ಮೌಲ್ಯಗಳ ಉಪಕರಣಗಳು ಅಂತ ಅಂತವಾಗಿ ಬರುತ್ತವೆ . ಹಾಗೂ ರೈತ ಬಾಂಧವರ ಜಾನುವಾರಗಳಿಗೆ ಆರೋಗ್ಯದ ಸಮಸ್ಯೆಯಾದಲ್ಲಿ ಬೆಳಿಗ್ಗೆ ೯ ರಿಂದ ಸಾಯಂಕಾಲ ೫ ಗಂಟೆ ಸಮಯದಲ್ಲಿ ಈ ಅಂಬುಲೆಶನ್ ಸಹಾಯವಾಣಿ ೧೯೬೨ ಸಂಖ್ಯೆಗೆ ಕರೆ ಮಾಡಿದರೆ ನಿಮ್ಮ ಮನೆ ಬಾಗಿಲಿಗೆ ಪಶು ಆಸ್ಪತ್ರೆಯಿಂದ ವೈದ್ಯ ಅಧಿಕಾರಿಗಳು ಅಂಬುಲೆಶನ್ ತೆಗೆದುಕೊಂಡು ಬಂದು ಜಾನುವಾರಗಳಿಗೆ ಚಿಕಿತ್ಸೆ ನೀಡುತ್ತಾರೆ ಎಂದರು.
ಕುಕನೂರು ಪಟ್ಟಣಕ್ಕೆ ೧೦೦ ಬೇಡ ಆಸ್ಪತ್ರೆ ೪೨ಕೋಟಿ ರೂಪಾಯಿಗಳ ಅನುದಾನದಲ್ಲಿ ೧೦ ಎಕ್ಕರೆ ಜಮೀನಿನಲ್ಲಿ ಮುಂದಿನ ದಿನಮಾನಗಳಲ್ಲಿ ಪ್ರಾರಂಭಿಸಲಾಗುವುದು, ೨೪ ಕೋಟಿ ರೂಪಾಯಿಗಳಲ್ಲಿ ತಹಶೀಲ್ದಾರ್ ಆಫೀಸ್, ೧೫ ಕೋಟಿ ರೂಪಾಯಿಗಳಲ್ಲಿ ಕಲ್ಯಾಣ ಮಂಟಪ, ಕೆಲಸಗಳು ಕೂಡ ಪ್ರಾರಂಭಿಸಲಾಗುವುದು, ತಾಲೂಕು ಪಂಚಾಯಿತಿಯಲ್ಲಿ ಬರುವ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಇರುವ ಸಿಎ ಸೈಟ್ ಮಾಹಿತಿಯನ್ನು ೧೫ ದಿನಗಳ ಒಳಗೆ ಕೊಡಬೇಕೆಂದು ಕುಕನೂರು ಹಾಗೂ ಯಲಬುರ್ಗಾ ತಾಲೂಕು ಪಂಚಾಯಿತಿಗೆ ಈ ದಿನಾನೇ ಆರ್ಡರ್ ಮಾಡುತ್ತೇನೆ. ಇದರಲ್ಲಿ ಬರುವ ಸಿಎ ಸೈಟಗಳನ್ನು ತೆಗೆದುಕೊಂಡು ಅಂಗನವಾಡಿ ಕೇಂದ್ರ ಕಟ್ಟಡ ಕಟ್ಟಲಾಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಡಾ.ಮಲ್ಲಯ್ಯ ಜಿಲ್ಲಾ ಉಪ ನಿರ್ದೇಶಕರು ಪಶುಪಾಲನ ಇಲಾಖೆ ಕೊಪ್ಪಳ, ಡಾ.ಶಿವರಾಜ ಶೆಟ್ಟರ ಸಹಾಯಕ ನಿರ್ದೇಶಕರು ಪಶು ಪಾಲನ ತಾಲೂಕು ವೈದ್ಯಾಧಿಕಾರಿ, ಪಪಂ ಮುಖ್ಯ ಅಧಿಕಾರಿ ರವೀಂದ್ರ ಬಾಗಲಕೋಟಿ, ಖಾಸಿಂ ಸಾಬ್ ತಳಕಲ್, ಸತ್ಯನಾರಾಯಣಪ್ಪ ಹರಪನಹಳ್ಳಿ, ಮಂಜುನಾಥ್ ಕಡೇಮನಿ, ಮಲ್ಲಿಯಪ್ಪ ಅಣ್ಣಿಗೇರಿ, ಪಪಂ ಉಪಾಧ್ಯಕ್ಷ ಪ್ರಶಾಂತ ಆರ್‌ಬೆರಳಿನ್, ಸಂಗಮೇಶ್ ಗುತ್ತಿ, ನೂರುದ್ದಿನ್ ಗುಡಿಹಿಂದಲ್, ಗಗನ್ ನೋಟಗಾರ ಮಂಜುನಾಥ ಯಡಿಯಾಪುರ, ರಾಘು ಕಾತರಕಿ ಹಾಗೂ ಪಶು ಆಸ್ಪತ್ರೆ ಸಿಬ್ಬಂದಿ ವರ್ಗದವರು ಇದ್ದರು.