ಕೊಪ್ಪಳ ಜಿಲ್ಲಾ ಪರಿಶಿಷ್ಟ ಜಾತಿ ಎಡಗೈ ಸರಕಾರಿ ನೌಕರರ ಸಂಘ

 ಜಿಲ್ಲಾಧ್ಯಕ್ಷರಾಗಿ ಮಂಜುನಾಥ ಮ್ಯಾಗಳಮನಿ,

ಪ್ರಧಾನ ಕಾರ್ಯದರ್ಶಿಗಳಾಗಿ ಮಾರುತಿ ಮ್ಯಾಗಳಮನಿ ಆಯ್ಕೆ

 

ಕೊಪ್ಪಳ, 09- ಕೊಪ್ಪಳ ಜಿಲ್ಲೆಯ ಪರಿಶಿಷ್ಟ ಜಾತಿಯ ಎಡಗೈ ಸರಕಾರಿ ನೌಕರ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನಗರದ ಎಂ ಪಿ ಪ್ಯಾಲೇಸ್ ಜಿಲ್ಲೆಯ ಪರಿಶಿಷ್ಟ ಜಾತಿ ಎಡಗೈ ಸರಕಾರಿ ನೌಕರ ಸಂಘದ ಪದಾಧಿಕಾರಿಗಳ ಸಭೆ ನಡೆಸಲಾಯಿತು. ಸಭೆಯಲ್ಲಿ ಗೌರವಅಧ್ಯಕ್ಷರಾಗಿ ಚಂದ್ರಪ್ಪ ರಾಜೂರು, ಜಿಲ್ಲಾಧ್ಯಕ್ಷರಾಗಿ ಮಂಜುನಾಥ ಮ್ಯಾಗಳಮನಿ ಕಂದಾಯ ಇಲಾಖೆ, ಪ್ರಧಾನ ಕಾರ್ಯದರ್ಶಿಳಾಗಿ ಮಾರುತಿ ಮ್ಯಾಗಳಮನಿ ಶಿಕ್ಷಣ ಇಲಾಖೆ, ಹಿರಿಯ ಉಪಾಧ್ಯಕ್ಷರಾಗಿ ಶಿವಬಸಪ್ಪ ಕಡೆಮನಿ, ಹಾಗೂ ಹನುಮಂತಪ್ಪ ಹಾದಿಮನಿ, ಖಜಾಂಚಿಯಾಗಿ ರಾಮಣ್ಣ ಮೂರಮನಿ, ಸಂಘಟನಾ ಕಾರ್ಯದರ್ಶಿಯಾಗಿ ಆರೋಡಪ್ಪ ಮಾದರ, ಸಹ ಕಾರ್ಯದರ್ಶಿಯಾಗಿ ವೆಂಕಟೇಶ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮೈಲಾರಪ್ಪ ಬೂದಿಹಾಳ ರವರನ್ನು ನೌಕರರು ಅವಿರೋಧವಾಗಿ ಆಯ್ಕೆ ಮಾಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಸಂಘದ ಮೈಸೂರಿನ ರಾಜ್ಯ ಸಂಚಾಲಕ ಮಂಜುನಾಥ್ ವಣಿಕೇರಿ ಮಾತನಾಡಿ ಕೊಪ್ಪಳ ಜಿಲ್ಲೆಯಲ್ಲಿ ನೌಕರರು ಒಗ್ಗಟ್ಟಿನಿಂದ ಕೆಲಸ ಕಾರ್ಯಗಳನ್ನು ಮಾಡುತ್ತಿರುವುದು ಖುಷಿಯ ವಿಚಾರ ಜೊತೆಗೆ ಕೆಳಹಂತದ ಜನರನ್ನು, ದೀನ ದಲಿತರು, ಸಮುದಾಯದ,ಬಡವರ ಕೆಲಸ ಕಾರ್ಯಗಳನ್ನು ಮಾಡುವುದು ನಮ್ಮೆಲ್ಲರ ಪ್ರತಿಯೊಬ್ಬ ನೌಕರರ ಜವಾಬ್ದಾರಿ ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ನೂತನ ಜಿಲ್ಲಾಧ್ಯಕ್ಷ ಮಂಜುನಾಥ ಮ್ಯಾಗಳಮನಿ ಮಾತನಾಡಿ ಪ್ರತಿಯೊಬ್ಬ ನೌಕರ ತಮ್ಮ ಸಮುದಾಯದ ಬಗ್ಗೆ ಗೌರವ ಕಾಳಜಿ ಹೊಂದಿರಬೇಕು ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದರ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ವ್ಯಾಸಂಗವನ್ನು ಹೆಚ್ಚು ಹೆಚ್ಚು ಪಡೆಯುವಂತರಾಗಬೇಕೆಂದರು,

ಪ್ರಧಾನ ಕಾರ್ಯದರ್ಶಿಗಳಾದ ಮಾರುತಿ ಮ್ಯಾಗಳಮನಿ ಮಾತನಾಡಿ ಶೈಕ್ಷಣಿಕವಾಗಿ ಪ್ರತಿಯೊಬ್ಬರು ಪ್ರಜ್ಞಾವಂತರಾಗಿ ಸಮಾಜಕ್ಕೆ ಸಮುದಾಯಕ್ಕೆ ಒಳ್ಳೆಯ ಕೊಡುಗೆ ನೀಡಬೇಕೆಂದರು. ಖಜಾಂಚಿಯಾದ ರಾಮಣ್ಣ ಮೂರಮನಿ ಮಾತನಾಡಿದರು, ಹನುಮಂತಪ್ಪ ಎಚ್, ನಾಗಪ್ಪ ಕನಕಪುರ,ಮರಿಯಪ್ಪ ಹಾದಿಮನಿ ರಾಜಶೇಖರ್ ಬಾವಿಮನಿ,ನಾಗರಾಜ ನಡವಲಕೇರಿ, ಡಾ.ಶಂಕರ್ ಬಿನ್ನಾಳ, ಯಲ್ಲಪ್ಪ ಮಾದರ ಇತರರು ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *

error: Content is protected !!