
ಜಿಲ್ಲೆಯಲ್ಲಿ ಅ.30 ರಿಂದ ನ. 02 ರವರೆಗೆ ದೀಪಾವಳಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 22- ಜಿಲ್ಲೆಯಲ್ಲಿ ಅ. 30 ರಿಂದ ನ. 02 ರವರೆಗೆ ನಾಡಿನ ದೊಡ್ಡ ಹಬ್ಬಗಳಲ್ಲಿ ಒಂದಾದ ದೀಪಾವಳಿ ಆಚರಣೆ ಜರುಗಲಿದೆ.
ಈ ಕುರಿತು ಗವಿಮಠ ಅಧಿಕೃತ ಪ್ರಕಟಣೆ ನೀಡಿದ್ದು ಹಬ್ಬದ ಆಚರಣೆಯ ವಿವರ ನೀಡಿದೆ.
ಅ. 30 ರಂದು ಬುಧವಾರ ಸಂಜೆ ಅಥವಾ ರಾತ್ರಿ ಹಿರಿಯರ ಹಬ್ಬ, ಅ. 31 ರಂದು ಶ್ರೀ ಲಕ್ಷ್ಮಿ ಪೂಜೆ , ನ. 1 ರಂದು ಶುಕ್ರವಾರ ದೀಪಾವಳಿ ಅಮವಾಸೆ ಸರಸ್ವತಿ ಪೂಜೆ (ಪಾಡ್ಯ) ಶನಿವಾರ ನ. 2 ರಂದು ಸರಸ್ವತಿ ಪೂಜೆ (ಪಾಡ್ಯ) 11:20 ರವರೆಗೆ ಇರಲಿದೆ ಎಂದು ತಿಲಿಸಿದ್ದಾರೆ.
ಶನಿವಾರ ನ. 2 ರಂದು ಸಂಜೆ 4:30 ರಿಂದ 06 ರವರೆಗೆ ಉತ್ತರ ಪೂಜೆ ವಿಸರ್ಜನೆಗೆ ಶುಭ ಸಮಯವಿದೆ ಎಂದು ತಿಳಿಸಿದ್ದಾರೆ.