
ರಿಲಯನ್ಸ್ ಬಿಪಿ ಮೊಬಿಲಿಟಿಯಿಂದ ದೀಪಾವಳಿ ಕೊಡುಗೆ
ಅ.28ರಿಂದ ನ.19ರ ವರೆಗೆ ಪೆಟ್ರೋಲ್ ದರದಲ್ಲಿ 3ರೂ.ರಿಯಾಯಿತಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 29- ರಿಲಯನ್ಸ್ ಬಿ.ಪಿ ಮೊಬಿಲಿಟಿ ಟ್ರಾನ್ದ್-ಕನೆಕ್ಟ್ ಲಿಮಿಟೆಡ್ ಕೊಪ್ಪಳ ಕೆಆರ್‌ಎಫ್ 004 JIO BP ಪೆಟ್ರೋಲ್ ಬಂಕ್ ಹೊಸಪೇಟೆ ರೋಡ ಇವರಿಂದ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ರಿಯಾಯಿತಿ ಹಾಗೂ ಕೊಡುಗೆಯನ್ನು ನೀಡಿದೆ.
ಅ.28 ರಿಂದ ನ.19 ರವರಿಗೆ ಪೆಟ್ರೋಲ್ ಪ್ರತಿ ಲೀಟರ್‌ಗೆ ರೂ. 3 ಗಳ ರಿಯಾಯಿತಿಯನ್ನು ಬೆಳಿಗ್ಗೆ 10 ಗಂಟೆಯಿ0ದ ಸಂಜೆ 5ಗಂಟೆ ವರೆಗೆ ಹ್ಯಾಪಿ ಅರರ್ಸ್ ಸೇವಿಂಗ್ ಜೊತೆಗೆ ರೂ. 200 ರ ಕನಿಷ್ಠ ಪೆಟ್ರೋಲ್ ಇಂಧನ ತುಂಬುವಿಕೆಯ ಮೇಲೆ ಬಂಪರ್ ಬಹುಮಾನ 20 ಎಸ್‌ಯುಸಿಎಸ್ ಗಳ ಕೊಡುಗೆಯನ್ನು ನೀಡಿದೆ.
ನಗರದ ಹೊಸಪೇಟೆ ರಸ್ತೆಯ ರಿಲಯನ್ಸ್ ಬಿ.ಪಿ ಮೊಬಿಲಿಟಿ ಟ್ರಾನ್ದ್-ಕನೆಕ್ಟ್ ಲಿಮಿಟೆಡ್ ಕೆಆರ್‌ಎಫ್ 004 JIO BP ಪೆಟ್ರೋಲ್ ಬಂಕ್ ನಲ್ಲಿ ಈ ವಿಶೇಷ ರಿಯಾಯಿತಿಗೆ ಮಾಜಿ ಸಂಸದ ಸಂಗಣ್ಣ ಕರಡಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡ ಮಜುನಾಥ ಪಾಟೀಲ, ಅಮರೇಶ ಕರಡಿ, ಬಸಣ್ಣ ಯತ್ನಟ್ಟಿ, SHORTS ಮಲ್ಲಿಕ್, ಹಬೀಬಪಾಶಾ, ಶ್ರೀನಿವಾಸ್ ವರ್ಮಾ, ಪ್ರಾಣೇಶ, ಈರಯ್ಯ ಬೊಮ್ಮನಾಳ ಇತರರು ಇದ್ದರು.