
ಕಾಲಹರಣ ಮಾಡಿ ಅರ್ಜಿಗಳನ್ನು ವಜಾಗೊಳಿಸದಿರಿ : ಇ.ಬಾಲಕೃಷ್ಣಪ್ಪ
ಕರುನಾಡ ಬೆಳಗು ಸುದ್ದಿ
ವಿಜಯನಗರ, 19- ಸಕಾಲ ತಂತ್ರಾ0ಶದಲ್ಲಿ ಸ್ವೀಕರಿಸಲಾದ ಅರ್ಜಿಗಳನ್ನು ಅನಾವಶ್ಯಕವಾಗಿ ಕಾಲಹರಣ ಮಾಡಿ ವಜಾಗೊಳಿಸಬಾರದು ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಸಕಾಲ ಸಮನ್ವಯ ಸಮಿತಿ ಸಭೆಯನ್ನು ಗೂಗಲ್ ಮೀಟ್ ಮುಖಾಂತರ ನಡೆಸಿ ಮಾತನಾಡಿದರು.
ಸಕಾಲದಲ್ಲಿ ಸ್ವೀಕೃತಿಯಾಗುವ ಅರ್ಜಿಗಳನ್ನು ಕಾಲಮಿತಿಯೊಳಗೆ ಬಗೆಯರಿಸಬೇಕು, ಅರ್ಜಿಗಳನ್ನು ಹೆಚ್ಚಿನ ದಿನಗಳ ಕಾಲ ಅನಾವಶ್ಯಕವಾಗಿ ಕಾಯ್ದಿರಿಸಿಕೊಳ್ಳಬಾರದು. ತಂತ್ರಾAಶದಲ್ಲಿ ತೊಂದರೆಯಾದರೆ ಸಂಬAಧಿಸಿದ ಅಧಿಕಾರಿಯನ್ನು ಸಂಪರ್ಕಿಸಿ ಸಮಸ್ಯೆ ಬಗೆಯರಿಸಿಕೊಳ್ಳಿ ಎಂದು ಹೇಳಿದರು.
ಕಾರ್ಮಿಕ ಇಲಾಖೆಯಲ್ಲಿ ೪೦, ನಗರಸಭೆ ವ್ಯಾಪ್ತಿಯಲ್ಲಿ ೨೬, ಆರ್‌ಟಿಓ ಕಚೇರಿಯಲ್ಲಿ ೮ ಅರ್ಜಿಗಳು ಸೇರಿದಂತೆ ಕಂದಾಯ ಇಲಾಖೆ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳು ಸೇರಿ ಒಟ್ಟು ೪೦೭ ಅರ್ಜಿಗಳಿಗೆ ಅವಧಿ ಮೀರಿದ್ದು ಅವುಗಳನ್ನು ಕೂಡಲೆ ಇತ್ಯಾರ್ಥ ಮಾಡದಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಸೆಪ್ಟಂಬರ್ ತಿಂಗಳಲ್ಲಿ ಕಂದಾಯ ಇಲಾಖೆಯಲ್ಲಿ ೨೪೦೫, ಕಾರ್ಮಿಕ ಇಲಾಖೆಯಲ್ಲಿ ೪೫೦, ಆರ್.ಟಿ.ಓ ಕಚೇರಿಯಲ್ಲಿ ೧೫೮, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆಯಲ್ಲಿ ೧೦೩ ಅರ್ಜಿಗಳು ಹಾಗೂ ವಿವಿಧ ಇಲಾಖೆಗಳು ಸೇರಿ ಒಟ್ಟು ೩೮೧೦ ಅರ್ಜಿಗಳು ವಜಾಗೊಂಡಿವೆ. ಯಾವುದೇ ಅರ್ಜಿಯನ್ನು ಸುಕಾ ಸುಮ್ಮನೇ ವಜಾಗೊಳಿಸಬಾರದು ಎಂದರು.
ಅರ್ಜಿ ಸಲ್ಲಿಸುವಾಗ ತಪ್ಪು ಮಾಹಿತಿ ಅಥವಾ ಸರಿಯಾದ ದಾಖಲೆಗಳನ್ನು ಸಲ್ಲಿಸದಿದ್ದಲ್ಲಿ ಅಂತಹ ಅರ್ಜಿಯನ್ನು ವಜಾಗೊಳಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಸೂಚಿಸಿದರು.
ಅರ್ಜಿಗಳನ್ನು ಸ್ವೀಕರಿಸಿದ ನಂತರ ಸರಿಯಾಗಿ ಪರೀಕ್ಷಿಸಿ, ಅರ್ಜಿದಾರರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅದಾಗ್ಯೂ ಪರಿಹಾರವಾಗದಿದ್ದಲ್ಲಿ ಅಂತಹ ಅರ್ಜಿಗಳನ್ನು ವಜಾಗೊಳಿಸಿ ಎಂದು ತಿಳಿಸಿದರು.
ಗೂಗಲ್ ಮೀಟ್‌ನಲ್ಲಿ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.