
ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಹಾಗೂ ಚಿನ್ನದ ಪದಕ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 25- ಕನಕಗಿರಿ ತಾಲ್ಲೂಕು ಬಸರಿಹಾಳ ಗ್ರಾಮದ ಶ್ರೀ ಶಿವಪ್ಪ ಮತ್ತು ಮರಿಯಮ್ಮ ಸುಳೇಕಲ್ ಇವರ ಮಗನಾದ ಧನಂಜಯಕುಮಾರ ಅವರು ಕರ್ನಾಟಕ ವಿಶ್ವವಿದ್ಯಾಲಯ, ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಸಹಾಯಕ ಪ್ರಾಧ್ಯಾಪಕ ಡಾ.ನಿಂಗಪ್ಪ ಎನ್. ಹಳ್ಳಿ ಇವರ ಮಾರ್ಗದರ್ಶನದಲ್ಲಿ ” ತತ್ವಪದ ಸಾಹಿತ್ಯ : ಸಾಂಸ್ಕೃತಿಕ ಮುಖಾಮುಖಿ ” ಎಂಬ ವಿಷಯ ಕುರಿತು ಸಂಶೋಧನಾ ಮಹಾಪ್ರಬಂಧವನ್ನು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿರುತ್ತಾರೆ.
ಇವರಿಗೆ ೭೪ನೇ ವಾರ್ಷಿಕ ಘಟಿಕೋತ್ಸವದಲ್ಲಿ ಕರ್ನಾಟಕ ಸರ್ಕಾರ ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ ಅವರು ಡಾಕ್ಟರೇಟ್ ಪದವಿ ಹಾಗೂ ಪಿ.ಜಿ. ಡಿಪ್ಲೊಮಾ ಬಸವ ಅಧ್ಯಯನ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ಮೊದಲ ಸ್ಥಾನ ಪಡೆದಿರುವದರಿಂದ ಮುಂಡರಗಿ ಶ್ರೀ ಜಗದ್ಗುರು ಅನ್ನದಾನೇಶ್ವರ ಬಂಗಾರದ ಪದಕವನ್ನು ಪ್ರಧಾನ ಮಾಡಿದರು.
ಕಾರ್ಯಕ್ರಮದಲ್ಲಿ ಕುಲಪತಿಗಳಾದ ಪ್ರೊ.ಕೆ.ಬಿ.ಗುಡಸಿ, ಕುಲಸಚಿವರಾದ ಡಾ.ಎ. ಚನ್ನಪ್ಪ, ಮೌಲ್ಯಮಾಪನ ಕುಲಸಚಿವರಾದ ಪ್ರೊ.ಎನ್.ವೈ. ಮಟ್ಟಿಹಾಳ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಇವರಿಗೆ ಕುಟುಂಬದವರು, ಊರಿನ ಗುರು ಹಿರಿಯರು, ಶಿಕ್ಷಕರು, ಬಸರಿಹಾಳ ಗ್ರಾ.ಪಂ. ಸಿಬ್ಬಂದಿಗಳು, ಗೆಳೆಯರು ಅಭಿನಂದಿಸಿದ್ದಾರೆ.