
ಟ್ಯಾಕ್ಸಿ ಹಾಗೂ ಆಟೋ ಚಾಲಕರ ಸಂಘದಿಂದ ಅನ್ನ ಸಂತರ್ಪಣೆ
ಕರುನಾಡ ಬೆಳಗು ಸುದ್ದಿ
ಕುಕನೂರು, 26- ಟ್ಯಾಕ್ಸಿ ಹಾಗೂ ಆಟೋ ಚಾಲಕರ ಸಂಘದಿಂದ ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಶ್ರಾವಣ ಮಾಸದ 4ನೇ ಸೋಮವಾರದಂದು ಅನ್ನ ಸಂತರ್ಪಣೆ ಮಾಡಿದರು.
ಪಟ್ಟಣದ ಚಳ್ಳೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ 4ನೇ ಸೋಮವಾರದಂದು ಟ್ಯಾಕ್ಸಿ ಹಾಗೂ ಆಟೋ ಚಾಲಕರ ಸಂಘದಿಂದ ಪ್ರತಿ ವರ್ಷವೂ ಅನ್ನ ಸಂತರ್ಪಣೆ ಕಾರ್ಯಕ್ರಮ ಮಾಡುವ ಉದ್ದೇಶವೇನೆಂದರೆ. ಈ ಚಳ್ಳೇಶ್ವರ ದೇವಸ್ಥಾನದ ಆವರ್ಣದಲ್ಲಿ ಟ್ಯಾಕ್ಸಿ ಹಾಗೂ ಆಟೋ ನಿಲ್ಲಿಸುವುದಕ್ಕೆ ಹಾಗೂ ನೆರಳಿನಿಂದ ಚಾಲಕರು ವಿಶ್ರಾಂತಿ ಪಡೆಯುವ ತಾಣವಾಗಿದೆ. ಅದಕ್ಕಾಗಿ ಟ್ಯಾಕ್ಸಿ ಹಾಗೂ ಆಟೋ ಚಾಲಕರ ಸಂಘದಿಂದ ಪ್ರತಿ ವರ್ಷವೂ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಈ ಚಳ್ಳೇಶ್ವರ ದೇವಸ್ಥಾನದ ಆವರ್ಣದಲ್ಲಿ ಮಾಡಲಾಗುವುದು ಎಂದು ಟ್ಯಾಕ್ಸಿ ಹಾಗೂ ಆಟೋ ಚಾಲಕರ ಸಂಘದ ಅಧ್ಯಕ್ಷ ಕಲ್ಲಯ್ಯ ಹಿರೇಮಠ ಪತ್ರಕರ್ತರೊಂದಿಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಟ್ಯಾಕ್ಸಿ ಹಾಗೂ ಆಟೋ ಸಂಘದ ಉಪಾಧ್ಯಕ್ಷÀ ಮಂಜು ಕೊಪ್ಪಳ ಹಾಗೂ ಸರ್ವ ಸದಸ್ಯರು, ಪಟ್ಟಣ ಪಂಚಾಯಿತಿ ಸದಸ್ಯ ವೀರೇಶ್ ಸಬರದ, ಡಾ.ಜಂಬಣ್ಣ ಅಂಗಡಿ, ಪ್ರಕಾಶ್ ಬೋರಣ್ಣವರ, ಶಿವಾನಂದ ಹುರುಳಿ, ರಾಹುಲ್ ಕಲಾಲ್, ಕೊಟ್ರೇಶ್ ಕುದ್ರಿ, ಮಂಜು ಗೌಡ್ರು ಇನ್ನೂ ಅನೇಕರು ಇದ್ದರು.