
ಅಪಾರ ಜನಸ್ತೋಮದ ಮಧ್ಯೆ ಡಾ.ಚಂದ್ರಪ್ಪ ಗೌರವ ಸರ್ಮಪಣೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ, ೧೭- ನಗರದ ಅಮರ ಗಾರ್ಡನ ನಲ್ಲಿ ನಡೆದ ಸುರ್ವಣ ಕರ್ನಾಟಕ ರಾಜೋತ್ಸವ ಪ್ರಶಸ್ತಿ ಪುರಸ್ಕçತ ಡಾ/ಚಂದ್ರಪ್ಪ ಅಭಿನಂದನಾ ಸಮಾರಂಭ ಅದ್ದೂರಿಯಾಗಿ ಜರುಗಿತು.
ಸಚಿವ ಶಿವರಾಜ ತಂಗಡಗಿ ಮಾತನಾಡಿ ಡಾ.ಚಂದ್ರಪ್ಪರನ್ನು ವೈದಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ಸುರ್ವಣ ಕರ್ನಾಟಕ ಪಶಸ್ತಿಯನ್ನು ನೀಡಿ ಸರಕಾರ ಗೌರವಿಸಿದೆ. ಸಮಿತಿ ಕೈಗೊಂಡ ನಿರ್ಣಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾವು ಬೆಂಬಲ ವ್ಯಕ್ತಪಡಿಸಿದ್ದವೆ ಯೋಗ್ಯರಿಗೆ ಪಶಸ್ತಿ ದೊರಕಿದೆ ಎಂದರು.
ಶಾಸಕ ಗಾಲಿ ಜರ್ನಾಧನರೆಡ್ಡಿ ಮಾತನಾಡಿ ಡಾ.ಚಂದ್ರಪ್ಪರು ಸರಳ ಸ್ವಭಾವದಿಂದ ಸೇವಾಮನೋಭಾವನೆಯಿಂದ ಕೆಲಸ ನಿರ್ವಹಿಸಿದ್ದಕ್ಕೆ ಸರಕಾರ ಮನ್ನಿಸಿ ಪ್ರಶಸ್ತಿ ನೀಡಿರುವುದು ಶ್ಯಾಘನೀಯವಾಗಿದೆ. ಡಾ.ಚಂದ್ರಪ್ಪರವರು ಆಂಧ್ರಪ್ರದೇಶದ ದಿವಂಗತ ವೈ.ರಾಜಶೇಖರರೆಡಿ ಗುಲಬರ್ಗಾದಲ್ಲಿ ಕಲಿತು ಓದಿ ಮುಗಿಸಿದವರಾಗಿದ್ದಾರೆ ಎಂದರು.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಡಾ.ಚಂದ್ರಪ್ಪರಿಗೆ ಪ್ರಶಸ್ತಿ ನಿಡಿರುವುದು ಔಚಿತ್ಯ ಪೂರ್ಣವಾಗಿದೆ. ಅವರ ಜನ ಮಾನಸದಲ್ಲಿ ವೈದಕೀಯ ಸೇವೆ ಮೂಲಕ ಮನೆ ಮಾತಾಗಿದ್ದಾರೆ,ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಶಿವರಾಜ ತಂಗಡಗಿಯವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತವೆ ಎಂದರು.
ಸಮಿತಿ ಅಧ್ಯಕ್ಷೆ ಸಾಹಿತಿ ವಸುಂಧರಾ ಭೂಪತಿ ಬೆಂಗಳೂರ ಮಾತನಾಡಿದರು.
ಹೆಬ್ಬಾಳ ಮಠದ ಶ್ರೀಗಳು, ಎಮ್ಮಿಗನೂರ ಶ್ರೀಗಳು, ತಲೇಖಾನ ಶ್ರೀಗಳು ಸೇರಿದಂತೆ ಅನೇಕ ಮಠದ ಶ್ರೀಗಳು ಡಾ.ಚಂದಪ್ಪ ದಂಪತಿಗಳನ್ನು ಅಭಿನಂದಿಸಿದರು.
ಹಿರಿಯರಾದ ಕೆ ಚನ್ನಬಸಯ್ಯಸ್ವಾಮಿ ಪ್ರಾಸ್ತವಿಕವಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ವೆಂಕಟರಾವ ನಾಡಗೌಡ, ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಸವರಾಜ ಧಡೆಸೂಗೂರ, ಜಿ.ವಿರಪ್ಪ, ಡಾ.ಸೊಮರಾಜ, ಡಾ.ಯು.ಮಾಧವಶೇಟ್ಟಿ, ಡಾ.ದೆವರಾಜ, ಡಾ.ಅಮರ, ಸಹಕಾರಿ ಧುರಿಣ ಶ್ರೀಧರ ಕೆಸರಹಟ್ಟಿ, ಕಳಕನಗೌಡ, ಸಿದ್ದರಾಮಯ್ಯ ಸ್ವಾಮಿ, ಗಿರೇಗೌಡ, ತಿಪ್ಪೆರುದ್ರಸ್ವಾಮಿ ಅನೇಕರು ಉಪಸ್ಥಿತರಿದ್ದರು.