1

9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ
ಎಲ್ಲಾ ಇಲಾಖೆಗಳೂ ಕೂಡ ಆಯುಷ್ ವೃಕ್ಷದ ಬೇರುಗಳೇ : ಡಾ.ಪರ್ವತ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 30- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆಯುಷ್ ಇಲಾಖೆ, ನಿಮಾ ಹಾಗೂ ಎಎಫ್ಐ ಕೊಪ್ಪಳ ಹಾಗೂ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಇವರ ಸಹಯೋಗದೊಂದಿಗೆ ೯ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಆರೋಗ್ಯಕ್ಕಾಗಿ ಆಯುರ್ವೇದ ನಾವಿನ್ಯತೆ” ಹಾಗೂ “ ಮಹಿಳಾ ಸಬಲೀಕರಣಕ್ಕಾಗಿ ಆಯುರ್ವೇದೆ ಎಂಬ ಘೋಷ ವಾಕ್ಯದೊಂದಿಗೆ ಮಂಗಳವಾರದAದು ಆಚರಿಸಲಾಯಿತು.

ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ನಡೆದ ವೇದಿಕೆ ಕಾರ್ಯಕ್ರಮವನ್ನು ನಿಮಾ ಅಧ್ಯಕ್ಷ ಡಾ.ಶಿವನಗೌಡ ಪಾಟೀಲ್ ಹಾಗೂ ಎ.ಎಫ್.ಐ ಅಧ್ಯಕ್ಷರಾದ ಡಾ.ಬಸವರಾಜ್ ಅಯೋಧ್ಯಾ ಬಿಲ್ವ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು.

ಕೊಪ್ಪಳದ ಸಕಾರಿ ಆಯುರ್ವೇದ ಆಸ್ಪತ್ರೆಯ ಗುತ್ತಿಗೆ ತಜ್ಞ ವೈದ್ಯೆ ಡಾ.ದೀಪ್ತಿ ಎ ಕುರುಬರ “ಮಹಿಳಾ ಸಬಲೀಕರಣಕ್ಕಾ ಆಯುರ್ವೇದ” ವಿಷಯದ ಕುರಿತು ಉಪನ್ಯಾಸ ನೀಡಿದರು.

ಗಂಗಾವತಿ ವೈದ್ಯ ಡಾ.ಸುನೀಲ್ ಅರಳಿ “ಜಾಗತಿಕ ಆಯುರ್ವೇದಕ್ಕಾಗಿ ಆಯುರ್ವೇದ ನಾವಿನ್ಯತೆ” ವಿಷಯದ ಕುರಿತು ಉಪನ್ಯಾಸ ನೀಡಿದರು.

ನಿವೃತ್ತ ಜಿಲ್ಲಾ ಆಯುಷ್ ಅಧಿಕಾರಿ ಡಾ.ಸಂಗಮೇಶ ಕಲಹಾಳ್ ”ಆಯುಷ್ ಪದ್ದತಿಗಳಾದ ಪಂಚಕರ್ಮ, ಯೋಗದ ಮಹತ್ವದ ಬಗ್ಗೆ ತಿಳಿಸುತ್ತಾ. ಇದರಿಂದ ದೈಹಿಕ, ಮಾನಸಿಕ ಶಾಂತಿ ನೆಮ್ಮದಿ ಸಿಗುತ್ತದೆ ಎಂದು ಆಯುರ್ವೇದದ ಮಹತ್ವ ತಿಳಿಸಿಕೊಟ್ಟರು.

ಅಗಸ್ತ್ಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ.ಸಂಗಮೇಶ್ ಹಿರೇಮಠ್ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಆಯುರ್ವೇದ ಚಿಕಿತ್ಸಾ ಪದ್ದತಿಯು ದೈನಂದಿನ ಜೀವನಶೈಲಿಯ ಕ್ರಮಬದ್ದ ಜೀವನ ವಿಧಾನವೇ ಆಗಿದೆ ಎಂದು ಆಯುರ್ವೇದ ಪದ್ದತಿ ಬಗ್ಗೆ ತಿಳಿಸಿದರು.

ಕೊಪ್ಪಳ ಜಿಲ್ಲಾ ಆಯುಷ್ ಅಧಿಕಾರಿ ಡಾ.ಪರ್ವತ ಬ ಹಿರೇಗೌಡರ ಆಯುರ್ವೇದದ ಭವ್ಯ ಇತಿಹಾಸದ ಕುರಿತು ವಿವರಣೆ ನೀಡುತ್ತಾ ಎಲ್ಲಾ ಇಲಾಖೆಗಳೂ ಕೂಡ ಆಯುಷ್ ವೃಕ್ಷದ ಬೇರುಗಳೇ ಆಗಿವೆ ಎಂದರು.
ಜಿಲ್ಲಾ ಆಯುಷ್ ಇಲಾಖೆಯಿಂದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಆಯುರ್ವೇದ ಸಸ್ಯವನ ನಿರ್ಮಿಸಲು ಜಿಲ್ಲಾಧಿಕಾರಿಗಳು ಅನುಮತಿ ನೀಡಿರುತ್ತಾರೆ. ಚಿಕ್ಕಮಾದಿನಾಳದಲ್ಲಿರುವ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ೧ ಎಕರೆ ಇಲಾಖೆ ಜಾಗದಲ್ಲಿ ಸಸ್ಯವನ ನಿರ್ಮಿಸಲು ಸಿದ್ದತೆ ನಡೆಸಲಾಗಿದೆ ಹಾಗೂ ಇಂದ್ರಕೀಲ ಪರ್ವತದ ಕಲ್ಲಿನಲ್ಲಿ ಆಯುರ್ವೃದ ಸಸ್ಯ ಬೆಳೆಸಿ ಜಾಗತಿಕ ತಾಪಮಾನ ಕಡಿಮೆ ಮಾಡಬಹುದಾಗಿದೆ ಎಂದು ಅದಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ವಹಿಸಲಾಗುತ್ತಿದೆ ಎಂದರು.

ಯೋಗದ ಬಗ್ಗೆ ಅರಿವು : ಕಾಮನೂರು ಆಯುಷ್ಮಾನ್ ಆರೋಗ್ಯ ಮಂದಿರದ ಯೋಗ ತರಬೇತುದಾರರು ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆ ನೀಡಿ ಶಿಬಿರಾರ್ಥಿಗಳಿಗೆ ಯೋಗದ ಬಗ್ಗೆ ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಜಿಲ್ಲಾ ಆಯುಷ್ ಅಧಿಕಾರಿ ಡಾ ಬಸವರಾಜ್ ಕುಂಬಾರ್, ಗೌರೀಪುರದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ವೈದ್ಯಾಧಿಕಾರಿ ಡಾ ಯಮನಪ್ಪ ಜೆ ಶಿರವಾರ ಸೇರಿದಂತೆ ಕೊಪ್ಪಳ ಜಿಲ್ಲೆಯ ಎಲ್ಲಾ ಆಯುಷ್ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ಆಯುಷ್ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು, ನಿಮ್, ಎ.ಎಫ್.ಐ ಕೊಪ್ಪಳ ಹಾಗೂ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವಿದ್ಯಾರ್ಥಿಗಳೂ ಸೇರಿ ೩೫೦ ಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಡಾ ರಾಜಶೇಖರ ನಾರನಾಳ ಅವರು ಕಾರ್ಯಕ್ರಮ ನಿರೂಪಿಸಿದರು.

ಜಾಗೃತಿ ಜಾಥಾ : 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ-೨೦೨೪ರ ಪ್ರಯುಕ್ತ ನಗರದ ತಾಲೂಕಾ ಕ್ರೀಡಾಂಗಣ ಆವರಣದಿಂದ ಜಿಲ್ಲಾಡಳಿತ ಭವನದವರೆಗೆ ಹಮ್ಮಿಕೊಂಡಿದ್ದ ಜಾಗೃತಿ ಜಾಥಕ್ಕೆ ಜಿಲ್ಲಾ ಆಯುಷ್ ಅಧಿಕಾರಿ ಡಾ ಪರ್ವತ ಬ ಹಿರೇಗೌಡರ ಅವರು ಡೊಳ್ಳು ಬಾರಿಸಿ, ಹಸಿರು ನಿಶಾನೆ ತೋರಿಸುವ ಮೂಲಕ ಜಾಥಾ ಚಾಲನೆ ನೀಡಿದರು. ಜಾಥಾದಲ್ಲಿ ೩೫೦ಕ್ಕೂ ಹೆಚ್ಚು ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜಾಥಾವು ಗಂಜ್ ಸರ್ಕಲ್ ಮಾರ್ಗವಾಗಿ ಜಿಲ್ಲಾಡಳಿತ ಭವನದವರೆಗೆ ಅದ್ದೂರಿಯಾಗಿ ನಡೆಯಿತು.

Leave a Reply

Your email address will not be published. Required fields are marked *

error: Content is protected !!