
ಮಧುಮೇಹ ಆರೋಗ್ಯವನ್ನು ತಿನ್ನುವ ಗೆದ್ದಿಲು : ಡಾ.ರಾಮಕೃಷ್ಣ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 16- ವಿಶ್ವ ಮಧುಮೇಹ ದಿನ ಕಾರ್ಯಕ್ರಮವನ್ನು ತೆಕ್ಕಲಕೋಟೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಾನ್ಯ ಮಕ್ಕಳ ತಜ್ಞ ಡಾ.ರಾಮಕೃಷ್ಣ ಮತ್ತು ಡಾ.ಹರಿ ಉಪಸ್ಥಿತಿಯಲ್ಲಿ ಹಮ್ಮಿಕೊಳ್ಳಲಾಯಿತು.
ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಅಭಿವೃದ್ಧಿ ಆರೋಗ್ಯವನ್ನು ತಿನ್ನುವ ಗೆದ್ದಿಲುಗಳಾಗಿವೆ ಎಂದು ನುಡಿದರು. ವಂಶ ಪಾರಂಪರವಾಗಿ ಇಲ್ಲವೇ ಹೆಚ್ಚಿನ ಒತ್ತಡದಿಂದ ವಿಪರೀತ ಒಬೆಸಿಟಿಯಿಂದ ಮಧುಮೇಹ ಬರುವ ಸಾಧ್ಯತೆ ಇದೆ.
ಮಧುಮೇಹ ಬಂದಲ್ಲಿ ಜಾಗೃತಿ ಅವಶ್ಯ ಆಹಾರ ಪದ್ಧತಿ ಜೀವನಶೈಲಿ ಕಾರ್ಯ ಚಟುವಟಿಕೆ ವಿಧಾನ ಸಂಪೂರ್ಣ ಬದಲಾಗಬೇಕು. ನಿತ್ಯ ನಡಿಗೆ ವ್ಯಾಯಾಮ ಯೋಗ ಧ್ಯಾನಗಳನ್ನು ಮಾಡುತ್ತಾ ಆರೋಗ್ಯದಿಂದಿರಬೇಕು ಭಯಪಡುವ ಅಗತ್ಯವಿಲ್ಲ ಸರ್ಕಾರದಿಂದ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಚಿಕಿತ್ಸಾ ಸೌಲಭ್ಯವಿದೆ. ೩೦ ವರ್ಷ ಮೇಲ್ಪಟ್ಟವರು ಪ್ರತಿ ಮೂರು ತಿಂಗಳಿಗೊಮ್ಮೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ ಮಾತನಾಡಿ, ನಿಮೋನಿಯಾ ಸಾಮಾನ್ಯವಾಗಿ ಎರಡು ವರ್ಷದ ಒಳಗಿನ ಮಕ್ಕಳಿಗೆ ಮತ್ತು ೬೨ ವರ್ಷ ಮೇಲ್ಪಟ್ಟರಿಗೆ ಬರುವ ಸಾಧ್ಯತೆ ಇದೆ. ಮಕ್ಕಳಲ್ಲಿ ಕಂಡುಬರುವ ಶ್ವಾಸಕೋಶದ ಸೋಂಕಿನ ಬಗ್ಗೆ ಮಾಹಿತಿ ನೀಡಿ ಲಸಿಕೆಗಳ ಮಹತ್ವ ಸ್ತನ್ಯಪಾನ ಮಹತ್ವ ವೈಯಕ್ತಿಕ ಸ್ವಚ್ಛತೆ ಮತ್ತು ಪೌಷ್ಟಿಕ ಆಹಾರದ ಕುರಿತಂತೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಡಾ.ಹರಿ, ಪಂಪಾಪತಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರತ್ನಮ್ಮ, ಅರುಣ ಪ್ರಾಥಮಿಕ ಸುರಕ್ಷತಾ ಅಧಿಕಾರಿಗಳು ವಿಜಯಲಕ್ಷ್ಮಿ, ಸಾಕ್ಷರತಾ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ, ಸಮುದಾಯ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಮತ್ತು ಹಿರಿಯರು ಹಾಜರಿದ್ದರು.