
ಗಿಡ ಮೂಲಿಕೆಯಿಂದ ಆರೋಗ್ಯ ವೃದ್ಧಿ : ಡಾ.ಶ್ರೀಕಾಂತ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 30- ಮನುಷ್ಯನ ಆರೋಗ್ಯವೂ ಅತಿ ಮುಖ್ಯವಾಗಿದೆ, ಪರಿಸರದ ಕಾಳಜಿಯ ಜೋತೆ ಪರಿಸರ ಮುಖಿಯಾಗಿ ಗಿಡಮೂಲಿಕೆಯನ್ನು ಬಳಸುವುದು ನಮ್ಮ ಕಾಯಕವಾಗುವಾದರಿಂದ ವೃದ್ಧಿಯಾಗುತ್ತದೆ ಎಂದು ೯ನೇ ವಿಶ್ವ ಆಯುರ್ವೇದ ದಿನಾಚರಣೆ ನಿಮಿತ್ಯ ಎಸ್.ಎ.ನಿಂಗೋಜಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಸಂಶೋಧನ ಕೇಂದ್ರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ.ಶ್ರೀಕಾಂತ್ ಅಭಿಪ್ರಾಯಪಟ್ಟರು.
ಇದೇ ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ನಿಂಗೋಜಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟನ ಕಾರ್ಯದರ್ಶಿಯಾದ ಕು.ವಿನಾಯಕ ನಿಂಗೋಜಿ ಮಾತನಾಡಿ, ಪರಿಸರದ ವಿಕೋಪಕ್ಕೆ ಮಾನವನೇ ಕಾರಣವಾಗಿದ್ದಾನೆ, ಪ್ಲಾಸ್ಟಿಕನಂತ ತ್ಯಾಜ್ಯವನ್ನು ಕಡಿಮೆ ಬಳಿಸಿ ಗಿಡಗಳನ್ನು ಹೆಚ್ಚು ಬೆಳಸುವುದರಿಂದ ಪ್ರಕೃತಿ ವಿಕೋಪಗಳು ಕಡಿಮೆ ಯಾಗುವುದು ಗಿಡಮೂಲಿಕೆ ಔಷಧಿ ಬಳಸುವುದರಿಂದ ಮಾನವ ದೇಹಕ್ಕೆ ಅಡ್ಡ ಪರಿಣಾಮವಾಗುವುದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಪ್ರಾರ್ಥನೆ ಕು.ದುರ್ಗಮ್ಮ ಸಂಗಡಿಗರಿಂದ, ಸ್ವಾಗತ ಲಕ್ಕಪ್ಪ ಕರಡಿ ನೆರೆವರಿಸಿದರು, ವಂದನಾರ್ಪಣೆ ಶಿವಕುಮಾರ್ ಮಾಡಿದರು ಹಾಗೂ ಹುಚ್ಚಯ್ಯ ಎಂ, ಅನುಷಾ, ಶ್ರೀಮತಿ ರಾಜೇಶ್ವರಿ, ಶರಣಪ್ಪ ಎಂ, ಮುತ್ತನಗೌಡ, ಮಂಜುನಾಥ್ ಹಾಗೂ ಸಂಶೋಧನ ಕೇಂದ್ರದ ಸಿಬ್ಬಂದಿ ವರ್ಗದವರು ಉಪಸ್ಥಿತರಿದರು.