oplus_2

oplus_2

ಒಳಮೀಸಲಾತಿಗಾಗಿ ಇಂದು ಡಿಸಿ ಕಚೇರಿ ಮುಂದೆ ಪ್ರತಿಭಟನೆ : ದುರುಗೇಶ್ ದೊಡ್ಡಮನಿ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 15- ಸುಪ್ರೀಂಕೋರ್ಟ್ ಆದೇಶದಂತೆ ಒಳಮೀಸಲಾತಿಯನ್ನು ಕರ್ನಾಟಕ ರಾಜ್ಯ ಸರಕಾರ ಜಾರಿಗೆ ತರುವಂತೆ ಒತ್ತಾಯಿಸಿ ನಾಳೆ ಅ.೧೬ ರಾಜ್ಯದಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಸಾಂಕೇತಿಕ ಧರಣಿ ಪ್ರತಿಭಟನೆ ನಡೆಸಲಾಗುತ್ತಿದ್ದು ಕೊಪ್ಪಳ ಜಿಲ್ಲೆಯಲ್ಲಿಯೂ ಮಾದಿಗ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನೆ ಯಶಸ್ವಿಗೊಳಿಸಬೇಕೆಂದು ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ಗಂಗಾವತಿ ತಾಲೂಕಾ ಅಧ್ಯಕ್ಷ ದುರಗೇಶ್ ದೊಡ್ಡಮನಿ ಕರೆ ನೀಡಿದರು.

ಅವರು ನಗರದ ಪತ್ರಿಕಾಭವನದಲ್ಲಿ ಸೋಮವಾರ ಮಾದಿಗ ಸಮಾಜದ ನೇತೃತ್ವವಹಿಸಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ಸುಮಾರು ೩೦ ವರ್ಷಗಳ ಕಾಲ ಹೋರಾಟದ ಶ್ರಮದ ಫಲವಾಗಿ ಸುಪ್ರೀಂ ಕೋರ್ಟ್ ಜನಾಂಗದ ಆಧಾರದ ಮೇಲೆ ವಗೀಕರಣಗೊಳಿಸಿ ಆದೇಶ ನೀಡಿದ್ದು, ಕರ್ನಾಟಕ ಸರಕಾರ ಆದೇಶ ಜಾರಿಗೆ ತರಲು ಮೀನಮೇಷ ಎಣಿಸುತ್ತಿರುವುದು ಸೋಜಿಗದ ಸಂಗತಿ, ಹಿಂದುಳಿದ, ದಲಿತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ರಾಜ್ಯ ಸರಕಾರದ ಸಿಎಂ ಸಿದ್ದರಾಮಯ್ಯ ಅವರು, ವಿಳಂಬ ಧೋರಣೆ ಅನುಸರಿಸುತ್ತಿರುವುದರ ಹಿಂದಿನ ಕಾರಣವೇನು? ಸದ್ಯ ಒಂದು ದಿನದ ಸಾಂಕೇತಿಕ ಪ್ರತಿಭಟನೆ ನಡೆಸಲಾಗುತ್ತಿದ್ದು, ಹಂತಹAತವಾಗಿ ಹೋರಾಟದ ರೂಪರೇಷ ತೀವ್ರಸ್ವರೂಪ ಪಡೆಯಲಿದೆ, ರಾಜ್ಯ ಸರಕಾರ ಎಚ್ಚೆತ್ತುಕೊಳ್ಳಬೇಕು ಎಂದು ಎಚ್ಚರಿಸಿದರು.

ನಗರಸಭಾ ಉಪಾಧ್ಯಕ್ಷರಾದ ಪಾರ್ವತಮ್ಮ ದುರುಗೇಶ್ ದೊಡ್ಡಮನಿ ಮಾತನಾಡಿ, ಹೆಚ್ಚಿನ ಸಂಖ್ಯೆಯುಳ್ಳ ಮಾದಿಗ ಸಮುದಾಯಕ್ಕೆ ಉಪಯುಕ್ತವಾಗಿರುವ ಒಳ ಮೀಸಲಾತಿ ಜಾರಿಯಾಗದಿದ್ದಲ್ಲಿ ಅನ್ಯಾಯವಾಗುತ್ತದೆ ತಲತಲಾಂತರ ಶೋಷಣೆಗೆ ಒಳಗಾಗಿರುವ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮುಂದೆ ಬರಲು ಕೂಡಲೆ ಮೀಸಲಾತಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

ಮಾದಿಗ ಸಮಾಜದ ಅಧ್ಯಕ್ಷರಾದ ಕೆ.ದುರುಗಪ್ಪ, ಹಿರಿಯರಾದ ದೇವಪ್ಪ ದೇವರಮನಿ, ಮುಖಂಡರಾ ಶಂಕರ ಸಿದ್ದಾಪುರ ವಕೀಲರು, ಸಂದೀಪ್ ಕುಮಾರ್, ಹನುಮಂತಪ್ಪ ಡಗ್ಗಿ ಶಿವಪ್ಪ ಮಾದಿಗ, ದುರುಗೇಶ್ ಅಕ್ಕಿರೊಟ್ಟಿ, ಸಣ್ಣ ಹನುಮಂತಪ್ಪ ಮರಳಿ ಇತರರು ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಈಗಲೂ ಮಾದಿಗ ಸಮುದಾಯ ಅತ್ಯಂತ ನಿಕೃಷ್ಟ ಜೀವನ ನಡೆಸುತ್ತಿದ್ದು ಹೊಟೇಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅತ್ಯಂತ ಕೀಳಾಗಿ ಕಾಣುತ್ತಿದ್ದು ಪ್ರಾಣಿಗಳಂತೆ ನಡೆಸಿಕೊಳ್ಳಲಾಗುತ್ತಿದೆ, ಅಂಬೇಡ್ಕರ್ ಅವರ ಸಂವಿಧಾನ ರಚನೆಯ ಸಂದರ್ಭದಲ್ಲಿ ಕೇವಲ ನಾಲ್ಕೃದು ಜಾತಿಗಳು ಮಾತ್ರ ಎಸ್ಸಿ ಮೀಸಲಾತಿಗೆ ಒಳಪಟ್ಟಿದ್ದವು ನಂತರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ೧೦೧ ಜಾತಿಗಳನ್ನು ಅವುಗಳಲ್ಲಿ ಸೇರಿಸಿ ಮಾದಿಗ ಸಮುದಾಯಕ್ಕೆ ತುಂಬಾ ಅನ್ಯಾಯ ಮಾಡಲಾಗಿದೆ. ಸ್ಪರ್ಷ ಜನಾಂಗ ಇದರಲ್ಲಿ ಪಾಲು ಪಡೆಯುತ್ತಿರುವುದು ಅವರೇ ಪ್ರಾತಿನಿದ್ಯ ಪಡೆದಯುತ್ತಿದ್ದಾರೆ, ಸುಪ್ರೀಂಕೋರ್ಟ್ ಅತ್ಯಂತ ಸೂಕ್ತ ತೀರ್ಪು ನೀಡಿದ್ದು ಏಳು ನ್ಯಾಯಾಧೀಶರಿಗೂ ಇದುವರೆಗು ಹೋರಾಟದಲ್ಲಿ ಪಾಲ್ಗೊಂಡು ತ್ಯಾಗ ಮಾಡಿರುವ ಎಲ್ಲರಿಗು ಸಮುದಾಯ ಅಭಿನಂದನೆ ಸಲ್ಲಿಸುತ್ತದೆ, ಸಮುದಾಯದ ಎಲ್ಲರು ಪಕ್ಷಾತೀತವಾಗಿ, ಎಲ್ಲ ಸಂಘಟನೆಗಳ ಪ್ರಮುಖರು ಭಾಗವಹಿಸಿ ಸರಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕಿದೆ ಬರುವದಿನಗಳಲ್ಲಿ ಇದರ ಪರಿಣಾಮ ಸರಕಾರಗಳ ಮೇಲೆ ಬೀಳುವಂತೆ ನಾವು ಹೋರಾಟ ಮಾಡಲಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾದಿಗ ಸಮಾಜದ ಯುವ ಪ್ರಮುಖರಾದ ರಮೇಶ್ ಕಾಳಿ, ಆನಂದ್ ದೇವರಮನಿ ಮತ್ತು ಎಸ್.ಹೆಚ್.ಯಮನೂರಪ್ಪ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!