
ಹಡಪದ ಅಪ್ಪಣ್ಣ ಯುವಕ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 24- ನಗರದ ಬೆಂಕಿನಗರದಲ್ಲಿರುವ ತಾಲೂಕಿನ ಹಡಪದ ಸಮುದಾಯಕ್ಕೆ ಸೇರಿದ ಯುವಕರು ಹಡಪದ ಅಪ್ಪಣ್ಣ ಯುವಕ ಮಂಡಳವನ್ನು ರಚನೆಯಾಗಿದೆ.
ಮಂಗಳವಾರದಂದು ಹಡಪದ ಅಪ್ಪಣ್ಣ ಸಮುದಾಯ ಭವನದಲ್ಲಿ ಸಭೆ ಸೇರಿ ಕೊಪ್ಪಳ ತಾಲೂಕಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಅಧ್ಯಕ್ಷರಾಗಿ ಬಸವರಾಜ ಹುಣಸಿಹಾಳ, ಉಪಾಧ್ಯಕ್ಷರಾಗಿ ಲಿಂಗರಾಜ ಆಲಳ್ಳಿ, , ಕಾರ್ಯದರ್ಶಿಯಗಿ ಮಲ್ಲಪ್ಪ, ಖಜಾಂಚಿಯಾಗಿ ಮಹೇಶ್ ಮಸ್ಕಿ, ಸಂಘಟನಾ ಕಾರ್ಯದರ್ಶಿಗಳನ್ನಾಗಿ ಮಲ್ಲಿಕಾರ್ಜುನ ಮತ್ತು ಪ್ರಕಾಶ ಕಾಟ್ರಳ್ಳಿ, ಸದಸ್ಯರನ್ನಾಗಿ ಜಗದೀಶ್ ಮುದ್ದಾಬಳ್ಳಿ, ಮುತ್ತು ಹಡಪದ, ಶ್ರೀಕಾಂತ ದದೇಗಲ್, ಗುಡದಪ್ಪ ಗೊಂಡಬಾಳ, ಮಾರುತಿ ಮುದ್ದಾಬಳ್ಳಿ, ಮಂಜುನಾಥ ನರೇಗಲ್ಲ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಭೆಯಲ್ಲಿ ಪಾಲ್ಗೊಂಡಿದ್ದ ಹಿರಿಯರಾದ ಮಾರ್ಕಂಡೆಪ್ಪ ಗಿಣಿಗೇರಿ, ಈಶಪ್ಪ ಮುದ್ದಾಬಳ್ಳಿ, ಈರಣ್ಣ ದದೇಗಲ್, ರಮೇಶ್ ಚಟ್ನಾಳ, ಗವಿಸಿದ್ದಪ್ಪ ಕಾಟ್ರಳ್ಳಿ ಶರಣಪ್ಪ ಹಲಗೇರಿ, ಗವಿಸಿದ್ದಪ್ಪ ದದೇಗಲ್ ಇತರರು ಇದ್ದರು.