
ನೌಕರರ ಮತದಾರರ ಚುನಾವಣೆ ಪಟ್ಟಿ ಅಕ್ರಮವಾಗಿದೆ : ಸಿದ್ದರಾಮ ರೆಡ್ಡಿ
ಕರುನಾಡ ಬೆಳಗು ಸುದ್ದಿ
ಕುಕನೂರು, 27- ನೌಕರರ ಮತದಾರರ ಚುನಾವಣೆ ಪಟ್ಟಿಯು ಅಕ್ರಮವಾಗಿ ಸಿದ್ದಗೊಂಡಿದೆ ಎಂದು ಕುಕನೂರು ತಾಲೂಕು ಕೃಷಿ ಇಲಾಖೆಯ ಅಧಿಕಾರಿ ಸಿದ್ದರಾಮ ರೆಡ್ಡಿ ಹೇಳಿದರು.
ಪಟ್ಟಣದ ಐಬಿಯಲ್ಲಿ ಪತ್ರಿಕಾಗೋಷ್ಠಿ ನಡಿಸಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಸರಕಾರಿ ನೌಕರರ ಚುನಾವಣೆ ಪಟ್ಟಿಯು ಅಕ್ರಮವಾಗಿ ಸಿದ್ದಗೊಂಡಿದೆ ಸರಕಾರಿ ನೌಕರರ ಚುನಾವಣೆ ಪಟ್ಟಿಯಲ್ಲಿ ಸರಕಾರಿ ನೌಕರರಾದ ಕುಕನೂರು ತಾಲೂಕಿನ ಕೃಷಿ ಇಲಾಖೆಯ ಅಧಿಕಾರಿಗಳ ೪ ಜನ ಹಾಗೂ ಕಂದಾಯ ಇಲಾಖೆಯ ೩ ಜನ ನೌಕರರನ್ನು ಈ ಪಟ್ಟಿಯಿಂದ ಕೈಬಿಟ್ಟಿದ್ದಾರೆ.
ಸರಕಾರಿ ನೌಕರರು ಅಲ್ಲದವರನ್ನು ಈ ಪಟ್ಟಿಯಲ್ಲಿ ಸೇರಿಸಿದ್ದಾರೆ ತಮಗೆ ಬೇಕಾದ ಇಲಾಖೆಯವರನ್ನು ಉದ್ದೇಶಪೂರ್ವಕವಾಗಿ ಸೇರಿಸುತ್ತಾರೆ ಯಲಬುರ್ಗಾ ಮತ್ತು ಕುಕನೂರು ಎರಡು ಕ್ಷೇತ್ರದಲ್ಲಿ ಒಬ್ಬ ನೌಕರರ ಚುನಾವಣೆ ಅಭ್ಯರ್ಥಿಯ ಹೆಸರು ಈ ಪಟ್ಟಿಯಲ್ಲಿ ಸೇರಿಸಿರುತ್ತಾರೆ ಇಂತಹ ಅನೇಕ ಲೋಪದೋಷಗಳು ಕಾನೂನು ಬಾಹಿರವಾಗಿ ಇರುತ್ತದೆ. ನೌಕರರ ಚುನಾವಣೆಯು ಪಾರದರ್ಶಕವಾಗಿ ನಡೆಯಬೇಕು ಈ ಎಲ್ಲಾ ಲೋಪ ದೋಷಗಳ ಕುರಿತು ಹೈ ಕೋರ್ಟ್ ಬಳಿ ಹೋಗಿ ಈ ವಿಷಯ ತಿಳಿಸಿದಾಗ ಈ ವಿಷಯ ಬಗ್ಗೆ ಹೈ ಕೋರ್ಟ್ ಪರಿಶೀಲಿಸಿ ಹೈ ಕೋರ್ಟ್ ಸ್ಟೇ ನೀಡಿದೆ ಹೈ ಕೋರ್ಟ್ ಸ್ಟೇಯನ್ನು ಚುನಾವಣೆ ಅಧಿಕಾರಿಗೆ ಕೊಡಬೇಕೆಂದು ಚುನಾವಣೆ ಕಚೇರಿಗೆ ಹೋದಾಗ ಅಧಿಕಾರಿಯು ಕಚೇರಿಯಲ್ಲಿ ಇರದ ಕಾರಣ ಅಲ್ಲಿಯ ಸಿಬ್ಬಂದಿ ಅವರನ್ನು ಕೇಳಿದಾಗ ಅಧಿಕಾರಿಯು ಬರುವ ಸಮಯವಾಗಲಿ ದಿನವಾಗಲಿ ತಿಳಿಸುತ್ತಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುರೇಶ್ ಮಾದಿನೂರು, ಶರೀಫ್ ನದಾಫ್, ಬಸವರಾಜ ಮೇಟಿ, ಮಾಂತೇಶ್ ಅಂಗಡಿ, ಗೋಣೆಪ್ಪ, ನೌಕರರು ಇದ್ದರು.