IMG-20240721-WA0057

ಕ್ರೀಡೆಗೆ ಪ್ರೋತ್ಸಾಹಿಸಿ ಆರೋಗ್ಯ ರಕ್ಷಣೆಗೆ ಸಹಕರಿಸಿ : ಡಾ.ಮಮತಾ

ಕರುನಾಡ ಬೆಳಗು ಸುದ್ದಿ

ಕುಕುನೂರು, 21- ಪ್ರತಿಯೊಬ್ಬರು ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಅವರ ಆರೋಗ್ಯಪೂರ್ಣ ರಕ್ಷಣೆಗೆ ಸಹಕರಿಸಬೇಕು ಎಂದು ಡಾಕ್ಟರ್ ಮಮತಾ ಇಲ್ಕಲ್ ಹೇಳಿದರು.

ಪ್ರತಿ ವರ್ಷದಂತೆ ಮಲ್ಲಿಕಾರ್ಜುನ್ ಚೌದ್ರಿ ಇವರ ತಾಯಿಯವರಾದ ಶ್ರೀಮತಿ ಅನುಸೂಯಮ್ಮ ಹನುಮಂತಪ್ಪ ಚೌದ್ರಿ ಅವರ 11ನೇ ವರ್ಷದ ಸ್ಮರಣಾರ್ಥಕವಾಗಿ ಹಮ್ಮಿಕೊಂಡಂತ ಸೌಹಾರ್ದ ಕ್ರಿಕೆಟ್ ಕ್ರೀಡಾಕೂಟ ಅಂತಿಮ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ಮನುಷ್ಯನಿಗೂ ಕ್ರೀಡೆ ಅತ್ಯವಶ್ಯಕವಾಗಿ ಬೇಕು ಕ್ರೀಡೆಯು ಮಾನಸಿಕವಾಗಿ ದೈಹಿಕವಾಗಿ ಮನುಷ್ಯನನ್ನು ಆರೋಗ್ಯವಂತನನ್ನಾಗಿಸುತ್ತದೆ ಸೋಲು ಗೆಲುವು ಮುಖ್ಯ ಎನ್ನದೆ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯವಾಗಿರುತ್ತದೆ.

ಪ್ರತಿವರ್ಷ ಶ್ರೀಮತಿ ಅನುಸೂಯಮ್ಮ ಹನುಮಂತಪ್ಪ ಚೌದ್ರಿ ಅವರ ಸ್ಮರಣ ನಾರ್ಥಕವಾಗಿ ಆಯೋಜಿಸುವ ಇಂಥ ಕ್ರೀಡಾಕೂಟವು ಅತ್ಯಂತ ಸೂಕ್ತವಾಗಿದ್ದು ಇಂದಿನ ಮೊಬೈಲ್ ಗಿಳಿ ನಲ್ಲಿ ಯುವಕರು ಹೆಚ್ಚು ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ತಮ್ಮ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀಪಾದೀಕ್ಷಿತ್ ಮಾತನಾಡಿ ಕ್ರೀಡೆಗೆ ಸಹಕರಿಸುವುದು ಪ್ರೋತ್ಸಾಹ ನೀಡುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿದೆ ಕ್ರೀಡಾಪಟುವಿಗೆ ಪ್ರೋತ್ಸಾಹಿಸುವ ಮೂಲಕ ಸಹಕರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಎ ಎಸ್ ಐ ನಿರಂಜನ್ ತಳವಾರ್, ಪೌರಕಾರ್ಮಿಕಳಾದ ಗಂಗಮ್ಮ ಕಾತರಕಿ,ಪ್ರಗತಿಪರ ರೈತರದ ಬಸವರಾಜ್ ಬೋರಣ್ಣವರ್, ಮುಖಂಡರಾದ ಉಮೇಶ್ ಪ್ಪ ನವಲಗುಂದ, ಕಳಕಪ್ಪ ಬೋರೆನವರ್, ನಬಿ ಸಾಬ್ ಬಿನ್ನಾಳ, ಮಂಜುನಾಥ್ ನಾಡಗೌಡ, ಗಿರಿಧರ್ ನಿಲೋಗಲ್, ಮಾಂತೇಶ್ ಹೂಗಾರ್, ಬಸವರಾಜ್ ಬಡಿಗೇರ್, ವಕೀಲರಾದ ಅಡಿವೆಪ್ಪ ಬೋರಣ್ಣವರ್, ಬಸವರಾಜ್ ಜಂಗ್ಲಿ, ರಮೇಶ್ ಗಜಕೋಶ್, ಜಗದೀಶ್ ತೊಂಡ್ಯಾಳ್ ಹಾಗೂ ಇನ್ನಿತರ ಭಾಗವಹಿಸಿದ್ದರು. ಕೂ

Leave a Reply

Your email address will not be published. Required fields are marked *

error: Content is protected !!