3

ಅಂಗನವಾಡಿ ಕೇಂದ್ರದಲ್ಲಿ ಉಡಿತುಂಬುವ ಕಾರ್ಯಕ್ಕೆ ಇಓ ಚಾಲನೆ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 20- ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಸರಕಾರ ಗರ್ಭಿಣಿಯರು, ನವಜಾತ ಶಿಶುಗಳು ಮತ್ತು ಬಾಣಂತಿಯರಿಗೆ ಪೋಷಕಾಂಶಗಳುಳ್ಳ ಆಹಾರ ಪದಾರ್ಥಗಳನ್ನು ನೀಡುವುದು ಹಾಗೂ ಆರೋಗ್ಯ ಜಾಗೃತಿ ಮೂಡಿಸುತ್ತಿರುವುದರಿಂದ ಅಪೌಷ್ಠಿಕತೆ ಕಡಿಮೆಯಾಗಿ ಬಾಣಂತಿಯರು ಮತ್ತು ಮಕ್ಕಳ ಸಾವಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂದು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀದೇವಿ ಹೇಳಿದರು.

ತಾಲೂಕಿನ ಕೃಷ್ಣಾಪೂರ ಡಗ್ಗಿ ಗ್ರಾಮದ ಅಂಗನವಾಡಿಯಲ್ಲಿ ಏರ್ಪಡಿಸಿದ್ದ ಅನ್ನಪೋಷಣಾಭಿಯಾನ ಮತ್ತು ಗರ್ಭಿಣಿಯರಿಗೆ ಉಡಿ ತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಅಂಗನವಾಡಿಯಲ್ಲಿ ಏರ್ಪಡಿಸಿದ್ದ ಅನ್ನಪೋಷಣಾಭಿಯಾನ ಮತ್ತು ಗರ್ಭಿಣಿಯರಿಗೆ ಉಡಿ ತುಂಬುವ ಕಾರ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯವರು, ಸಹಾಯಕಿಯರು ಮತ್ತು ಆಶಾ, ಆರೋಗ್ಯ ಕಾರ್ಯಕರ್ತೆಯರ ಪಾತ್ರ ಮಹತ್ವದಾಗಿದೆ. ಮಾತೃಪೂರ್ಣ ಯೋಜನೆ ಮಹತ್ವದ್ದಾಗಿದ್ದು ಚಿಕ್ಕಮಕ್ಕಳು, ಕಿಶೋರಿಯವರು, ಬಾಣಂತಿಯರು ಮತ್ತು ಗರ್ಭಿಣಿಯರಿಗೆ ಆರೋಗ್ಯ, ದೈಹಿಕ ಮಾಹಿತಿ ನೀಡಲಾಗುತ್ತಿದೆ.

ಪೌಷ್ಠಿಕಾಂಶವುಳ್ಳ ಕಾಳು ಕಡಿ, ಮೊಟ್ಟೆ ಹೋಗೆ ಹಲವು ಪದಾರ್ಥಗಳನ್ನು ಸರಕಾರ ವಿತರಣೆ ಮಾಡುತ್ತಿದೆ. ಆರೋಗ್ಯ ಜಾಗೃತಿಯನ್ನು ಆರೋಗ್ಯ ಇಲಾಖೆ ಮತ್ತು ಗ್ರಾ.ಪಂ. ಸಹ ಹಲವು ಯೋಜನೆಗಳನ್ನು ಅಂಗನವಾಡಿ ಕಾರ್ಯಕತೇಯರ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ. ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ದತಿ ತಡೆ ಮತ್ತು ಪರಿಸರ ಸಂರಕ್ಷಣೆ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಹಲವು ಕ್ಷೇತ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಗ್ರಾಮಸ್ಥರಿಗೆ ಮನವರಿಕೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಆನೆಗೊಂದಿ ಗ್ರಾ.ಪಂ. ಅಧ್ಯಕ್ಷ ಕೆ.ಮಹಾದೇವಿ ಬಾಳೆಕಾಯಿ, ಪಿಡಿಒ ಕೆ.ಕೃಷ್ಣಪ್ಪ, ಗ್ರಾ.ಪಂ.ಸದಸ್ಯ ತಿಮ್ಮಪ್ಪ ಬಾಳೆಕಾಯಿ, ರಾಜಶೆಖರ, ಮುಖಂಡರಾದ ಹೊನ್ನಪ್ಪ ನಾಯಕ, ಸೂಪರವೈಸರ್ ಶರಣಮ್ಮ, ಈರಮ್ಮ, ಡಾ.ನವೀನಕುಮಾರ, ಮುಖ್ಯಶಿಕ್ಷಕ ಛತ್ರಪ್ಪ ತಂಬೂರಿ, ಅಂಗನವಾಡಿ ಶಿಕ್ಷಕಿಯರಾದ ಕವಿತಾ ಡೊಳ್ಳಿನ, ಗೀತಾ, ನಾಗರತ್ನ, ಸವಿತಾ, ಸರಿತಾ, ಮಂಜುಳಾ, ಸುಲೋಚನಾ, ಸಂಗಮ್ಮ, ಲಕ್ಷ್ಮಿ, ಸಹಾಯಕಿಯರಾದ ಹೊಳಿಯಮ್ಮ, ಬಸಮ್ಮ, ಹನುಮಕ್ಕ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!