
ತಾಯಿ ಹೆಸರಿನಲ್ಲಿ ಒಂದು ವೃಕ್ಷ ಕಾರ್ಯಕ್ರಮಕ್ಕೆ ಇಒ ಸಂತೋಷ್ ಬಿರಾದರ್ ಚಾಲನೆ
ಕರುನಾಡ ಬೆಳಗು ಸುದ್ದಿ
ಕುಕನೂರು, 22- ತಾಲೂಕಿನ ಬೆಣಕಲ್ ಗ್ರಾ.ಪಂ ವ್ಯಾಪ್ತಿಯಲ್ಲಿ, ಸಾಮಾಜಿಕ ವಲಯ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಗುರುವಾರ ಭಾನಾಪೂರ ಕ್ರಾಸ್ ನಿಂದ ಬೆಣಕಲ್ ಗ್ರಾಮದ ವರೆಗೆ ರಸ್ತೆ ಬದಿಯ ಎರಡೂ ಕಡೆ ನಡುತೋಪು ನಿರ್ಮಾಣ. ಅನುಷ್ಠಾನ ಮಾಡಲಾಗುತ್ತಿದ್ದು,ಸದರಿ ಕಾರ್ಯಕ್ರಮದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಕಾರ್ಯಕ್ರಮ ಆಯೋಜನೆ ಮಾಡಲಾಯಿತು.
ತಾಯಿಯ ಹೆಸರಲ್ಲಿ ಒಂದು ವೃಕ್ಷ” (Ek Ped Maa Ke Nama) ಕಾರ್ಯಕ್ರಮ ವಿಶೇಷತೆ : ಕಾಮಗಾರಿಯಲ್ಲಿ ವೈಧ್ಯಕೀಯ ಗುಣವುಳ್ಳ ಅರಳಿ ಮರ, ಬಸರಿ ಗಿಡ, ಹೊಂಗೆ, ರೇನ್ ಟ್ರೀ, ಸಿಹಿ ಹುಣಸಿ, ಬೇವು, ಸೇರಿದಂತೆ ವಿಶೇಷ ತಳಿಯ ಗಿಡಗಳನ್ನು ನಡಲಾಯಿತು.
ಸಸಿಗಳ ಪೋಷಣೆಯ ಜವಬ್ದಾರಿಯನ್ನು ಶಾಲಾ ಮಕ್ಕಳಿಗೆ ನೀಡಿ ಅವರು ಅವುಗಳನ್ನು ಪೋಷಣೆ ಮಾಡುವ ಪ್ರತಿಜ್ಞೆ ಮಾಡಿದರು.
ಕಾರ್ಯಕ್ರಮದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಸಿಗೆ ನೀರೆರೆದು ಮಾತನಾಡಿ, ಮರಗಳು ನಮ್ಮನ್ನು ರಕ್ಷಿಸುವ ತಾಯಿ ಇದ್ದ ಹಾಗೆ ಸಸಿಗಳು ಬೆಳೆದು ಮರವಾಗಬೇಕಾದರೆ ಅವುಗಳಿಗೆ ಪೋಷಣೆ ಅವಶ್ಯಕ ಅದಕ್ಕಾಗಿ ತಾಯಿ ಯಾವ ರೀತಿ ಮಕ್ಕಳನ್ನು ನೋಡಿಕೊಳ್ಳುತ್ತಾಳೆಯೋ ಅದೇ ರೀತಿ ಸಸಿಗಳನ್ನು ಶಾಲಾ ವಿಧ್ಯಾರ್ಥಿಗಳು ಒಂದೋಂದು ಗಿಡವನ್ನು ದತ್ತು ತೆಗೆದುಕೊಂಡು ಪೋಷಣೆ ಮಾಡಬೇಕು.
ಸರ್ಕಾರ ಹಾಗೂ ಅರಣ್ಯ ಇಲಾಖೆಯಿಂದ ಸಾಕಷ್ಟು ಸಸಿಗಳನ್ನು ನೆಡುತ್ತಾರೆ ಆದರೆ ಸರಿಯಾದ ಪೋಷಣೆ ಇಲ್ಲದೇ ಸಸಿಗಳು ಬೆಳೆದು ಮರವಾಗುವುದಿಲ್ಲ. ಅದಕ್ಕಾಗಿ ಮಾನ್ಯ ಪ್ರಧಾನ ಮಂತ್ರಿಗಳು ಪ್ರತೀ ಯೋಬ್ಬರೂ ಸಹ ಮರಗಳನ್ನು ಬೆಳೆಸಬೇಕು ಎನ್ನುವ ಉದ್ದೇಶದಿಂದ ತಾಯಿಯ ಹೆಸರಿನಲ್ಲಿ ಮರ ನೆಡಲು ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಆದೇಶ ನೀಡಿದ್ದು,ಅದರಂತೆ ಮಾರ್ಚ-31 ರ ಓಳಗಾಗಿ ದೇಶಾದ್ಯಂತ 140 ಕೋಟಿ ಮರಗಳನ್ನು ನೆಡಬೇಕು ಮತ್ತು ಅವುಗಳನ್ನು ಪೋಷಿಸಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮವ್ವ ನಡುಲಮನಿ, ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ಶರಣಪ್ಪ ಕೆಳಗಿನಮನಿ, ವಲಯ ಅರಣ್ಯಾಧಿಕಾರಿಗಳು, ಸಾಮಾಜಿಕ ಅರಣ್ಯ ವಲಯ ಯಲಬುರ್ಗಾ ಬಸವರಾಜ ಗೋಗೆರಿ, ಕೃಷ್ಣಾರಡ್ಡಿ ಬಿ, ಶಾಲಾ ಮುಖ್ಯೋಪಾಧ್ಯಾಯರು, ಅರಣ್ಯ ಇಲಾಖೆ ಅಧಿಕಾರಿಗಳು, ಐ.ಇ.ಸಿ ಸಂಯೋಜಕರು, ತಾಂತ್ರಿಕ ಸಹಾಯಕರು, BFT, GKM ಹಾಗೂ ಶಾಲಾ ಮಕ್ಕಳು ಗ್ರಾಮಸ್ಥರು ಹಾಜರಿದ್ದರು.