10

ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಒಂದೂ0ದು ಪ್ರತಿಭೆಯಿರುತ್ತದೆ : ಜಗದೀಶ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 22- ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಒಂದೂ0ದು ಪ್ರತಿಭೆ ಇರುತ್ತದೆ ಆ ಅಡಗಿರುವ ಕಲೆ. ಪ್ರತಿಭೆಯನ್ನು. ಪ್ರೋತ್ಸಾಹಿಸುವ ಮೂಲಕ ನಿರ್ಣಾಯಕರು ಸೂಕ್ತ ಪ್ರತಿಭೆಯನ್ನು ಗುರುತಿಸುವ ಕಾರ್ಯಕ್ಕೆ ಮಹತ್ವ ಕೂಡಬೇಕು. ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಗದೀಶ ಜಿ. ಎಚ್. ಹೇಳಿದರು.

ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ೨೦೨೪-೨೪ನೇ ಸಾಲಿನ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ.ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಅವರು ಯಲಬುರ್ಗಾ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಖಾಸಗಿ ಕಾಲೇಜು ಗಿಂತ ಒಂದು ಹೆಜ್ಜೆ ಮುಂದೆ ಇದೇ.ಎಲ್ಲಾ ಮೂಲ ಭೂತ ಸೌಕರ್ಯವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ.ಈ ಕಾಲೇಜಿನಲ್ಲಿ ೫೬೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವದು ನನ್ನಗೆ ಸಂತಸ ತಂದಿದೆ. ಕಾಲೇಜ್ ಅಭಿವೃದ್ಧಿಗಾಗಿ ಪ್ರಾಚಾರ್ಯ ಶರಣಪ್ಪ ಬೆಲೇರಿ ಶ್ರಮಿಸಿದ್ದಾರೆ ಎಂದು ಹೇಳಿದರು.

ಶಾಲಾ ಕಾಲೇಜ್ ಸಾಂಸ್ಕೃತಿಕ ಕಾರ್ಯಕ್ರಮ ಅಯೋಜಿಸಲು ತಿರ್ಮಾನಿಸಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದುವದುವದರ ಜೊತೆಗೆ ಕ್ರೀಡಾ ಮತ್ತು ಪಠ್ಯೇತರ ಚಟುವಟಿಕೆಗಳು ಅಳವಡಿಸುವದು ಬಹಳಮುಖ್ಯ ಆದ್ದರಿಂದ ಮಕ್ಕಳಿಗೆ ವೇದಿಕೆ ಕಲ್ಪಿಸಿ ಕಾಲೇಜ್ ಹಂತದಿAದ ಪ್ರಾರಂಭಗೊAಡು ತಾಲೂಕು ಜಿಲ್ಲಾ, ವಿಭಾಗ ರಾಜ್ಯಮಟ್ಟದ ವರಗೆ ಕಲಾ ಪ್ರದರ್ಶನಗಳನ್ನು ಕಳಿಸಿ ಕೊಡಲಾಗುವದು. ಈಗಾಗಲೆ ಮಕ್ಕಳ ಪ್ರತಿಭೆ ಆನಾವರಣ ಗೋಳಿಸಲು ಮುಂದಾಗಿದ್ದಾರೆ ತಿರ್ಪುಗಾರರು ಒಳ್ಳೆಯ ಪ್ರತಿಭೆಯನ್ನು ಗುರುತಿಸಿ ನ್ಯಾಯ ಸಮ್ಮತವಾಗಿ ಪ್ರತಿಭೆಗಳನ್ನು ಆಯ್ಕೆ ಮಾಡಲು ಸೂಚಿಸಿದರು.

ಹಿರಿಯ ಉಪನ್ಯಾಸಕ ರಾಜಶೇಖರ ಪಾಟೀಲ್ ಮಾತನಾಡಿ ಮೌನವಾಗಿ ಸಾಧನೆ ಮಾಡುವ ಸರಕಾರಿ ಪದವಿ ಪೂರ್ವ ಕಾಲೇಜ್ ಯಲಬುರ್ಗಾ ಎಂದು ಬಣ್ಣಿಸಿದರು. ಮಕ್ಕಳ ಕಲಾ ಪ್ರದರ್ಶನ ಮಾಡಲು ಒಳ್ಳೆಯ ಅವಕಾಶವಿದೆ ವಿದ್ಯಾರ್ಥಿಗಳು ಸಂಕುಚಿತ ಭಾವನೆ ತೆಗೆದುಹಾಕಿ ನಿಮ್ಮ ಪ್ರತಿಭೆ ವ್ಯಕ್ತಪಡಿಸಿದರೆ ತಾನಾಗಿಯೇ ಯಶಸ್ಸು ಸಿಗುತ್ತದೆ ಎಂದರು.

ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶರಣಪ್ಪ ಬೆಲೇರಿ. ಅವರು ಸಭೆಯ ಅಧ್ಯಕ್ಷತೆ ವಹಿಸಿಕೂಂಡಿದ್ದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಪ್ರಾಚಾರ್ಯರ ಸಂಘದ ಜಿಲ್ಲಾ ಅದ್ಯಕ್ಷ ಅನಿಲಕುಮಾರ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಸೋಮಶೇಖರಗೌಡ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸಿದ್ದನಗೌಡ ಬನಪ್ಪಗೌಡ್ರ, ಸದಸ್ಯರಾದ ಅಂದಪ್ಪ ಹೊಂಬಳದ, ಶಂಕ್ರಪ್ಪ ಜಕ್ಕಲಿ, ಜಯಶ್ರೀ ಅರಕೇರಿ, ಭಾಗೀರಥಿ ಜೋಗೀನ, ಚಂದಪ್ಪ ದೊಡ್ಡಮನಿ ಮತ್ತು ಜಿಲ್ಲೆಯ ವಿವಿಧ ಕಾಲೇಜುಗಳ ಪ್ರಾಚಾರ್ಯರು, ಶಿಕ್ಷಕರರು, ಶಿಕ್ಷಕಿಯರು, ಉಪಾನ್ಯಾಸಕರು, ವಿದ್ಯಾರ್ಥಿಗಳು ಮತ್ತು ಇತರರು ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ವಿದಾರ್ಥಿಗಳಿಂದ ವಿವಿಧ ರೀತಿಯ ಜಾನಪದ ನೃತ್ಯ, ಭಾವಗೀತೆ, ದೇಶ ಭಕ್ತಿಗೀತೆ, ಏಕಪಾತ್ರಾಭಿನಯ, ನೃತ್ಯಗಳು ಜರುಗಿದವು.

Leave a Reply

Your email address will not be published. Required fields are marked *

error: Content is protected !!