
ಪ್ರತಿಯೊಬ್ಬರೂ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ : ಅಮೀದಸಾಬ್ ಅತ್ತಾರ್
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 29- ಆಧುನಿಕ ಯುಗದಲ್ಲಿ ನಶಿಸುವ ಕ್ರೀಡಾ ಚಟುವಟಿಕೆಯಲ್ಲಿ ತೊಡಗುವ ಮನೋಭಾವನೆ ಬೆಳೆಸಿಕೊಳ್ಳಲು ಮುಂದಾಗಬೇಕು ಎಂದು ಚಿಕ್ಕ ಮ್ಯಾಗೇರಿ ಡಾ.ಬಿ.ಆರ್.ಅಂಬೇಡ್ಕರ್ ಮೊರಾರ್ಜಿ ಶಾಲೆಯ ಪ್ರಾಂಶುಪಾಲ ಅಮೀದಸಾಬ್ ಅತ್ತಾರ್ ಹೇಳಿದರು.
ಪಟ್ಟಣದ ಕುಕನೂರು ರಸ್ತೆಯಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಚಿಕ್ಕ ಮ್ಯಾಗೇರಿ -ಬಂಡಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬುಧವಾರ ಮಾತನಾಡಿದರು.
ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಬೇಕು. ಸೋಲು-ಗೆಲವುನ್ನದೇ ತಮ್ಮ ಪ್ರತಿಭೆ ಹೊರ ಹಾಕುವ ಮೂಲಕ ಆಟೋಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಕೇವಲ ಪಾಠ ಆಲಿಸಿದರೇ ಸಾಲದ ಪಠ್ಯದ ಜತಗೆ ಆಟವು ಅಗತ್ಯ. ಕ್ರೀಡೆಯಲ್ಲಿ ಸದಾ ಭಾಗಿಯಾಗಿ ಆರೋಗ್ಯವಂತರಾಗಿ ಹೊರ ಹೊಮ್ಮಬೇಕು ಎಂದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ ಜಿ., ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ.ಧರಣಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಶರಣಯ್ಯ ಸರಗಣಾಚಾರಿ, ತಾಲೂಕು ದೈಶಿ ಅಧಿಕಾರಿ ಬಸವರಾಜ ಉಳ್ಳಾಗಡ್ಡಿ, ದೈಶಿ ಸಂಘದ ಖಜಾಂಚಿ ಬಸವರಾಜ ಮುಳಗುಂದ, ಕಸಾಪ ಬಾಲದಂಡಪ್ಪ ತಳವಾರ್, ಶಿಕ್ಷಕರಾದ ನಾಗರಾಜ ನಡುಲಕೇರಿ,ವಿರೇಶ ಅಂಗಡಿ, ಶ್ರೀರಡ್ಡಿ, ಹನುಮಂತಪ್ಪ ಹಾಗೂ ಇನ್ನಿತರರು ಇದ್ದರು.