
ನೂತನ ಸರಕಾರಿ ಪ್ರೌಢ ಶಾಲೆ ಉದ್ಘಾಟನಾ ಸಮಾರಂಭ : ಪ್ರತಿಯೊಬ್ಬರೂ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 21- ಹಿಂದುಳಿದ ತಾಲೂಕಿನ ಭಾಗದ ಜನತೆಗೆ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಶಾಲೆಗಳನ್ನು ಆರಂಭಿಸಲಿದ್ದು, ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ ಶಿಕ್ಷಣವಂತರನ್ನಾಗಿ ಮಾಡಬೇಕು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ಯಡ್ಡೋಣಿ ಗ್ರಾಮದ ನೂತನ ಸರಕಾರಿ ಪ್ರೌಢ ಶಾಲೆ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾಕ್ಷರತಾ ಪ್ರಮಾಣ ಹೆಚ್ಚಳವಾಗಲು ಕಡ್ಡಾಯಾಗಿ ಶಿಕ್ಷಣ ಬೇಕಿದೆ. ಕ್ಷೇತ್ರದಲ್ಲಿ ಯಾರನ್ನು ಶಾಸಕರನ್ನು ಮಾಡಿ ಆದರೆ ಮತ ಕ್ಷೇತ್ರದ ಬಗ್ಗೆ ಕಾಳಜಿ ವಹಿಸಿ ಕೆಲಸ ಮಾಡಬೇಕಿದೆ. ಮೊಟ್ಟ ಮೊದಲಿಗೆ ಶಾಸಕನಾದ ಹಿನ್ನೆಲೆ ಮಸಾರಿ ಭಾಗದಲ್ಲಿ ವಿದ್ಯುತ್, ರಸ್ತೆ, ಶಾಲೆಗಳು ಇರಲಿಲ್ಲ. 1983 ರಿಂದಲೂ ಈವರಗೆ ತಾಲೂಕಿನಲ್ಲಿ 58 ಪ್ರೌಢ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. 15 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿವೆ. ಹೊಸದಾಗಿ 12 ಹೈಸ್ಕೂಲ್ ಆರಂಭಿಸಲಾಗಿದೆ. ತಾಲೂಕಿನ ಜನತಗೆ ಹಿಂದುಳಿದ ಭಾಗ ಹಣೆಪಟ್ಟಿ ಹೋಗಲಾಡಿಸಲು, ಮೂಲಭೂತ ಸೌಕರ್ಯ ಕಲ್ಪಿಸಲು ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದೇನೆ ಹೊರೆತು, ಬೇರೆನು ಉದ್ದೇಶವಿಲ್ಲ.ಗ್ರಾಮದ ಪ್ರೌಢ ಶಾಲೆಗೆ 2.5 ಕೋಟಿ ರೂ.ಮಂಜೂರಾತಿ ಮೂಲಕ ಈ ವಾರದಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಅಲ್ಲದೇ ಜನರ ಸಮಸ್ಯೆಗೆ ಸ್ಪಂದಿಸಲು ನೀರಾವರಿ ಯೋಜನೆಯ ಮೂಲಕ ಕೆರೆ ತುಂಬಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇಂದಿನ ದಿನಮಾನಗಳಲ್ಲಿ ಎಲ್ಲ ಪಕ್ಷದಲ್ಲಿ ರಾಜ್ಯಕೀಯ ವ್ಯವಸ್ಥೆ ತೀರಾ ಹದಗೆಟ್ಟಿದೆ. ಭ್ರಷ್ಟಚಾರ ತಾಂಡಾವಾಡುತ್ತಿದ್ದು, ಜನಸಾಮಾನ್ಯರು ಸುಧಾರಣೆಯಾಗರವೆರೆಗೆ ಸಮಾಜ ಕೊಂಡಯ್ಯುಲು ಸಾಧ್ಯ. ಇಂತಹ ವ್ಯವಸ್ಥೆಯಿಂದ ರಾಜಕೀಯದಿಂದ ನಿವೃತ್ತಿ ಹೊಂದಲಿದ್ದೇನೆ. ಸಾರ್ವಜನಿಕ ಜೀವನ ಸಾಕಾಗಿದೆ. ರಾಜಕೀಯ ಕ್ಷೇತ್ರದಿಂದ ನೆಮ್ಮದಿ ಸಿಗುತ್ತಿಲ್ಲ. ಯುವಕರು ವಿದ್ಯಾವಂತರಾಗಿ ರಾಜಕೀಯ ಕ್ಷೇತ್ರದಲ್ಲಿ ತೊಡಗುವುದು ಒಳಿತು. ಆದರೆ ಜಾತಿ, ಧರ್ಮ, ಹಣ ಬಲದಿಂದ ರಾಜಕೀಯ ಕ್ಷೇತ್ರವೂ ಹಾಳಾಗಿದೆ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ಬಿಇಒ ಅಶೋಕಗೌಡ ಪಾಟೀಲ್ ಮಾತನಾಡಿದರು. ಗವಿಸಿದ್ದಯ್ಯ ಹಿರೇಮಠ, ಜಗದೀಶಯ್ಯ ಹಿರೇಮಠ, ಕೇಶಾವನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಲೆಯ ಪ್ರಭಾರಿ ಮುಖ್ಯಗುರು ಸುಭಾಷ್ ಕೋಳೂರು, ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಕಾಂಗ್ರೆಸ್ ಧುರೀಣರಾದ ಮಹೇಶ ಹಳ್ಳಿ, ಕೆರಿಬಸಪ್ಪ ನಿಡಗುಂದಿ, ರುದ್ರಪ್ಪ ಮರಕಟ್, ಶಿವಸಂಗಪ್ಪ ಹುಚನೂರು, ಬಸವರಾಜ ಹಿರೇಮನಿ, ಶರಣೇಗೌಡ ಪಾಟೀಲ್, ಹೊಳೆಗೌಡ ಪಾಟೀಲ್,ಮುಕ್ಕಣ್ಣ ಗುಳೆ, ನಾಗರಾಜ ನವಲಹಳ್ಳಿ, ಬಾಳೇಶಪ್ಪ ಹಳ್ಳಿ, ಚಿದಾನಂದಪ್ಪ ಹರಕಂಗಿ, ಗ್ರಾ.ಪಂ. ಸದಸ್ಯರಾದ ಶಂಕ್ರಮ್ಮ ಹನುಮಪ್ಪ ಬಿಜಕಲ್, ಶರಣಪ್ಪ ಹನುಮಪ್ಪ ಗುಡೂರು, ಜಯಮ್ಮ ಅಮರಪ್ಪ ವಂದಾಲಿ, ಅನುಸೂಯಾ ಬಸವರಾಜ ಹುಗ್ಗಿ, ಹಿರಿಯರಾದ ತೆವರಪ್ಪ ಮಡಿವಾಳರ್, ಹನುಮಗೌಡ ಗೌಡ್ರ, ಭರಮಗೌಡ ಗೌಡ್ರ, ಹುಗ್ಗೇಶ ಹುಗ್ಗಿ, ವೀರಭದ್ರಪ್ಪ ಶೆಟ್ಟರ್, ಆದೇಶ ರೊಟ್ಟಿ, ಮಾಲಂಗಸಾಬ್ ನದಾಫ್, ಹುಲುಗಪ್ಪ ಭಜಂತ್ರಿ, ಹನ್ಮಂತ ಆಡೂರು, ಮರಿಯಪ್ಪ ಬಡಿಗೇರ್ ಹಾಗೂ ಶಾಲಾ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು, ಆಶಾ ಕಾರ್ಯಕರ್ತೆಯರು, ಗ್ರಾಮದ ಮುಖಂಡರು ಇನ್ನಿತರರು ಇದ್ದರು.