
ಮೃತ ಯುವಕನ ಮನೆಗೆ ಮಾಜಿ ಸಚಿವರ ಭೇಟಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 22- ತಾಲೂಕಿನ ಸಂಗನಾಳ ಗ್ರಾಮದಲ್ಲಿ ಸಲೂನಿಗಾಗಿ ತೆರಳಿದ್ದ ದಲಿತ ಯುವಕ ಯಮನೂರಪ್ಪ ಬಂಡಿಹಾಳ ಸಾವನ್ನುಪ್ಪಿದ ಹಿನ್ನೆಲೆ ಮಾಜಿ ಸಚಿವ ಹಾಲಪ್ಪ ಆಚಾರ್ ಬುಧವಾರ ಮೃತರ ಕುಟುಂಬಕ್ಕೆ ಭೇಟಿ ನೀಡಿ ಸ್ವಾಂತನ ಹೇಳಿದರು.
ಬಳಿಕ ಮಾತನಾಡಿದ ಮಾಜಿ ಸಚಿವ ಹಾಲಪ್ಪ ಇದೊಂದು ಆಕಸ್ಮಿಕ ಘಟನೆ ಸಂಭವಿಸಿದೆ ಕುಟುಂಬದವರು ದೈರ್ಯದಿಂದ ಜೀವನ ನಡೆಸಬೇಕು ಇಂತಹ ಅಹಿತಕರ ಘಟನೆ ನಡೆಯಬಾರದಿತ್ತು. ಎಲ್ಲರೂ ಸ್ನೇಹಪೂರ್ವಕವಾಗಿ ಬದುಕು ನಡೆಸಬೇಕು ಎಂದು ತಿಳಿಸಿದರು.
ಭಾರತೀಯ ಜನತಾ ಪಕ್ಷದ ತಾಲೂಕು ಮಂಡಳದ ಅಧ್ಯಕ್ಷ ಮಾರುತಿ ಗಾವರಾಳ, ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಸದಸ್ಯರಾದ ವಸಂತ ಭಾವಿಮನಿ, ಈರಪ್ಪ ಬಣಕಾರ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಬಿಜೆಪಿ ಮುಖಂಡರಾದ ವೀರಣ್ಣ ಹುಬ್ಬಳ್ಳಿ,ಕಲ್ಲಪ್ಪ ತೊಂಡಿಹಾಳ ಹಾಗೂ ಇನ್ನಿತರರಿದ್ದರು.