ರೈತರು ಪಶು ಇಲಾಖೆಗೆ ಜಾನುವಾರುಗಳ ಸಂಪೂರ್ಣ ಮಾಹಿತಿ ನೀಡಿ : ಶಾಸಕ ರಾಯರಡ್ಡಿ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 1- ಪಶು ಸಂಗೋಪನಾ ಇಲಾಖೆಯವರು ಪ್ರತಿ ಮನೆ ಮನೆಗೆ ತೆರಳಿ ಜಾನುವಾರುಗಳ ಮಾಹಿತಿ ಸಂಗ್ರಹಿಸಿ ಸಲು ಮುಂದಾಗಬೇಕು ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಜಾನುವಾರು ಗಣತಿಯ ಬಿತ್ತಿ ಪತ್ರ ಬಿಡುಗಡೆಗೂಳಿಸಿ ಮಾತನಾಡಿದ ಅವರು ರಾಷ್ಟ್ರೀಯ ಜಾನುವಾರುಗಳ ಗಣತಿಯ ಸಿದ್ದತೆ ಆರಂಭವಾಗಿದು ಸೆ.೧ರಿಂದ ಡಿಸೆಂಬರ್ ೩೦ರವರಗೆ ೨೧ನೇ ಜಾನುವಾರು ಗಣತಿ ಪ್ರಾರಂಭಗೂAಡಿದೆ ಪ್ರತಿ ೫ ವರ್ಷಕ್ಕೊಮ್ಮೆ ಜಾನುವಾರುಗಳ ಗಣತಿ ನಡೆಸಲಾಗುವುದು ಜಾನುವಾರುಗಳ ಗಣತಿಯಲ್ಲಿ ಜಾನುವಾರುಗಳ ಪ್ರಮಾಣ ವಯಸ್ಸು ಲಿಂಗ ಸಂಯೋಜನೆ ಕೋಳಿ, ಕುರಿ, ಮೇಕೆ ಸಾಕಾಣಿಕೆ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ ರೈತರು ಇದರ ಸದುಪಯೋಗವನ್ನು ತಗದುಕೂಳ್ಳಬೇಕು ಎಂದು ಶಾಸಕ ರಾಯರಡ್ಡಿ ಹೇಳಿದರು.

ಡಾ.ಪ್ರಕಾಶ ಚೂರಿ ಮಾತನಾಡಿ, ತಾಲೂಕಿನಲ್ಲಿ ೪ ಪಶು ಆಸ್ಪತ್ರೆಗಳು, ೧೯ಪಶು ಚಿಕಿತ್ಸಾಲಯಗಳು, ೧ ಪ್ರಾಥಮಿಕ ಪಶು ಚಿಕಿತ್ಸಾಲಯ ಕೇಂದ್ರ ಒಟ್ಟು ೧೦ ಜನ ಗಣತಿದಾರರು ೩ ಜನ ಮೇಲ್ವಿಚಾರಿಕರು ಜಾನುವಾರುಗಳ ಬಗ್ಗೆ ಗ್ರಾಮೀಣ ಮತ್ತು ಪಟ್ಟಣ ಪ್ರದೇಶದಲ್ಲಿ ಗಣತಿ ಮಾಡಲ್ಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಶು ಇಲಾಖೆಯ ಉಪ ನಿರ್ದೇಶಕ ಡಾ.ಪಿ.ಎಂ.ಮಲ್ಲಯ್ಯ, ಸಹಾಯಕ ನಿರ್ದೇಶಕ ಡಾ.ಪ್ರಕಾಶ ಚೂರಿ, ಡಾ.ಸಂಜಯ ಚಿತ್ರಗಾರ, ಡಾ.ಸವಿತಾ ರಾಠೋಡ, ಮುಖಂಡರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡ ಚಂಡೂರು, ಯಂಕಣ್ಣ ಯರಾಶಿ, ವೀರನಗೌಡ್ರ ಪೋಲಿಸ್ ಪಾಟೀಲ ಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!