WhatsApp Image 2024-08-08 at 4.37.12 PM

ರೈತರು ಹೊಸ ತಂತ್ರಜ್ಞಾನ ಬಳಸಲು ಮುಂದಾಗಬೇಕು : ಡಾ.ಪಿ.ಕೆ.ಸಾಹ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 8- ಕಾಲಾನುಗುಣವಾಗಿ ಅನ್ನದಾತರು ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನವನ್ನು ಬಳಸುವುದರ ಮೂಲಕ ಅತಿ ಹೆಚ್ಚಿನ ಬೆಳೆಯ ಲಾಭವನ್ನು ಪಡೆಯಬಹುದು ಎಂದು ಹೊಸದಿಲ್ಲಿ ಯ ರಾಷ್ಟ್ರೀಯ ಆಹಾರ ಭದ್ರತಾ ಸಂಯೋಜಕರು, ಡಾ. ಪಿಕೆ ಸಾಹ ರೈತರಿಗೆ ಸೂಚನೆ ನೀಡಿದರು.

2024 – 25 ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯ (ಎಸ್.ಎಫ್.ಎಸ್. ಎಂ ) ಸಮಗ್ರ ಬೆಳೆಯ ನಿರ್ವಹಣೆ ಗುಚ್ಛ ಪ್ರಾತ್ಯಕ್ಷಿಕೆಗಳಾದ ತೊಗರಿ, ಸಜ್ಜೆ, ಬೇಸಾಯ ಮಾಡಿದ ಕುರುಗೋಡು ಮತ್ತು ಬಳ್ಳಾರಿ ತಾಲೂಕಿನ ಹಲಕುಂದಿ ಸಂಜೀವ್ ರಾಯನಕೋಟೆ ಸಿಂದಗೇರಿ ಗ್ರಾಮಗಳಲ್ಲಿ ರೈತರ ಜೊತೆಗೆ ಬೆಳೆಗಳ ಸಮೀಕ್ಷೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ ತೊಗರಿ ಬೆಳೆಯಲ್ಲಿ ಕೆಲ ವಡೆ ನೆ ಟರೋಗಕ್ಕೆ ಕಾರ್ಬನ್ ಡೈಜಮ್ ಪೀಡೆ ನಾಶಕ ಸಿಂಪಣಿಯನ್ನು ಹಾಗೂ ತೊಗರಿಯ 45 ರಿಂದ 60 ದಿನಗಳ ಬೆಳೆಗಳಲ್ಲಿ ಕುಡಿ ಚಿವಟುವಾದನ್ನು ಪ್ರಾತ್ಯಕ್ಷಿಕೆಗಳಲ್ಲಿ ವೀಕ್ಷಿಸಿ ತೊಗರಿಯ ಹೆಚ್ಚಿನ ಇಳುವರಿ ಪಡೆಯಲು ಸದರಿ ತಂತ್ರಜ್ಞಾನವನ್ನು ಎಲ್ಲ ರೈತರು ಪಾಲಿಸಬೇಕೆಂದು ಸೂಚಿಸಿದರು.

ಸಿಂಧಿಗೇರಿ ಗ್ರಾಮದಲ್ಲಿ ತೊಗರಿ ಮತ್ತು ನವಣೆ ಮಿಶ್ರ ಬೆಳೆಯ ಕ್ಷೇತ್ರದಲ್ಲಿ ಡ್ರೋನ್ ಮೂಲಕ ಲಘು ಪೋಷಕಾಂಶಗಳ ಸಿಂಪರಣೆಯನ್ನು ವೀಕ್ಷಿಸಿ ಸದರಿ ತಂತ್ರಜ್ಞಾನವನ್ನು ಎಲ್ಲಾ ರೈತರು ಅಳವಡಿಸಿಕೊಂಡರೆ ಪ್ರಸ್ತುತ ಕೃಷಿಯಲ್ಲಿರುವ ಕೂಲಿಕಾರರ ಸಮಸ್ಯೆಯನ್ನು ನಿಭಾಯಿಸಲು ಹಾಗೂ ಕಡಿಮೆ ಸಮಯದಲ್ಲಿ ಹೆಚ್ಚಿನ ಕ್ಷೇತ್ರದಲ್ಲಿ ಸಿಂಪಡಣೆಯನ್ನು ಮಾಡಲು ಅನುಕೂಲವಾಗುತ್ತದೆ ಎಂದರು. ಇಲಾಖೆಯ ವಿಸ್ತರಣಾ ಚಟುವಟಿಕೆಯನ್ನು ಶ್ಲಾಘನೆ ಮಾಡಿದರು. ಬಳ್ಳಾರಿಯ ಕೃಷಿ ಜಂಟಿ ನಿರ್ದೇಶಕರು ಕೆಎಂ ಸೋಮ ಸುಂದರ್, ಮತ್ತು ಉಪ ಕೃಷಿ ನಿರ್ದೇಶಕರು -1,ಏನ್. ಕೆಂಗೆ ಗೌಡ ಕಾರ್ಯಕ್ರಮವನ್ನು ಉದ್ದೇಶಿಸಿ ರೈತರಿಗೆ ಸರ್ಕಾರಿ ಇಂದ ಬರುವ ಸವಲತ್ತುಗಳನ್ನು ಉಪಯೋಗಿಸಿಕೊಳ್ಳಿ ಎಂದು ಮಾಹಿತಿ ನೀಡುತ್ತಾ ಬೆಳೆ ವಿಮೆ ಮಹತ್ವವನ್ನು ತಿಳಿಸಿಕೊಟ್ಟರು.

ಬಳ್ಳಾರಿಯ ಸಹಾಯಕ ಕೃಷಿ ನಿರ್ದೇಶಕರು, ಎಂ ದಯಾನಂದ್, ರವರು ಮಾತನಾಡಿ ದ್ವಿದಳ, ಮಿಶ್ರ ಬೆಳೆ ಹಾಗೂ ಸಿರಿಧಾನ್ಯ ಬೆಳೆಗಳ ಮಹತ್ವ ಹಾಗೂ ಸಮಯದಲ್ಲಿ ನಿರ್ವಹಿಸಬೇಕಾದ ತಂತ್ರಜ್ಞಾನವನ್ನು ನೆರದಿದ್ದ ರೈತರಿಗೆ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಬಳ್ಳಾರಿ ಮತ್ತು ಸಿಂದಿಗೆರಿ ಕೃಷಿ ಅಧಿಕಾರಿ ಬಸವರಾಜ್, ರೈತ ಸಂಪರ್ಕ ಕೇಂದ್ರ, ದ ಯೇಸು ಬಾಬು, ಸಿಬ್ಬಂದಿ ವಾಣಿ ಮತ್ತು ರೇಣುಕಾರಾಧ್ಯ, ಗ್ರಾಮಗಳ ರೈತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!