ರೈತರು ಸಹಕಾರಿ ಸಂಘಗಳ ಸದುಪಯೋಗ ಪಡದುಕೂಳ್ಳಬೇಕು : ಶಾಸಕ ರಾಯರೆಡ್ಡಿ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 1- ರೈತರ ಜೀವನಾಡಿಯಾಗಿರುವ ಸಹಕಾರಿ ಸಂಘಗಳು ರೈತರ ಅಭಿವೃದ್ಧಿಗಾಗಿ ಶ್ರಮಿಸುತ್ತಿವೆ ಅದರ ಸದುಪಯೋಗವನ್ನು ಪ್ರತಿಯೊಬ್ಬ ರೈತರು ಪಡೆದಾಗ ಸಹಕಾರಿ ಸಂಘಗಳು ಹೆಚ್ಚು ಅಭಿವೃದ್ಧಿಗೊಳ್ಳಲು ಸಾಧ್ಯವಾಗುತ್ತದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

ತಾಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ಸಂಘದ ವಾಣಿಜ್ಯ ಮಳಿಗೆಗಳ ಹಾಗೂ ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರ ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲಿರುವ ಸಹಕಾರಿ ಸಂಘಗಳ ಬಲವರ್ಧನೆಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತಿರ್ಮಾನ ಕೈಗೋಳಲಾಗುವದು ರೈತರ ಜೀವನಾಡಿಯಾಗಿರುವ ಸಹಕಾರ ಸಂಘಗಳು ರೈತರ ಸಹಕಾರದಿಂದ ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳವಣಿಗೆ ಯಾಗಬೇಕಿದೆ ತಾಲೂಕಿನ ಎಲ್ಲಾ ರೈತರು ಸಹಕಾರ ಸಂಘಗಳಲ್ಲಿ ಸದಸ್ಯತ್ವ ಪಡೆದುಕೂಳ್ಳಬೇಕು ಅವಳಿ ತಾಲೂಕಿನ ಎಲ್ಲಾ ಸಹಕಾರ ಸಂಘಗಳಿಗೆ ಸರಕಾರದಿಂದ ಅನುದಾನ ಕೂಡಿಸಲು ಪ್ರಯತ್ನ ಸುತ್ತೇನೆ ವಿವಿಧ ಸಹಕಾರಿ ಸಂಘಗಳು ರೈತರ ಆರ್ಥಿಕ ಸ್ವಾವಲಂಬನೆ ಜೀವನಕ್ಕೆ ದಾರಿಯಾಗಿದೆ ಎಂದರು.

ಸಹಕಾರಿ ಸಂಘಗಳು ಹೆಚ್ಚು ಅಭಿವೃದ್ಧಿಗೊಳ್ಳಬೇಕು ಅದಕ್ಕೆ ಬೇಕಾದ ಎಲ್ಲಾ ಸಹಾಯ ಸಹಕಾರ ನೀಡುತ್ತೇನೆ ಇಲ್ಲಿನ ಸಹಕಾರ ಸಂಘ ನಬಾರ್ಡ್ನಿಂದ ೫೦ ಲಕ್ಷ ಸಾಲ ಪಡೆದುಕೊಂಡು ಸುಸಜ್ಜಿತ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಸಾರ್ವಜನಿಕರ ಅನುಕೂಲ ಕಲ್ಪಿಸುವ ಉದ್ದೇಶದ ಜೊತೆಗೆ ಸಂಘಕ್ಕೆ ಆದಾಯ ತಂದು ಕೊಡುವ ಈ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ನೀಡುವ ಈ ಸಂಘಗಳು ರೈತರ ಏಳಿಗೆಗಾಗಿ ಶ್ರಮಿಸುತ್ತಿವೆ ಹಾಗೂ ಆಡಳಿತ ಮಂಡಳಿ ನಿಸ್ವಾರ್ಥ ಸೇವ ಮನೋಭಾವ ರೂಡಿಸಿಕೊಂಡಾಗ ಮಾತ್ರ ಸಹಕಾರಿ ಸಂಘಗಳು ಸಮಗ್ರ ಅಭಿವೃದ್ಧಿಗೊಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ತಾಲೂಕಿನಲ್ಲಿ ಇಂಜಿನಿಯರಿAಗ್ ಕಾಲೇಜ್, ಕೌಶಲ್ಯ ಅಭಿವೃದ್ಧಿಯ ಕೇಂದ್ರ, ೨೦ಕ್ಕೂ ಹೆಚ್ಚು ಪ್ರೌಢಶಾಲೆಯು ಅತಿ ಹೆಚ್ಚು ಮುರಾರ್ಜಿ ವಸತಿ ಶಾಲೆ, ಜೂನಿಯರ್ ಕಾಲೇಜ್. ೧೫ ಕ್ಕೂ ಬಸ್ ನಿಲ್ದಾಣಗಳು, ಎಲ್ಲಾ ಗ್ರಾಮಗಳ ರಸ್ತೆಗಳ ಡಾಂಬರೀಕರಣ ಸೇರಿದಂತೆ ತಾಲೂಕಿನ ಎಲ್ಲಾ ರೈತರ ಜಮೀನುಗಳು ಅಂತರ ಜಲ ಮಟ್ಟ ಹೆಚ್ಚಳವಾಗಲಿ ಎಂದು ತಾಲೂಕಿನ ಕರೆಗಳಿಗೆ ನೀರು ತುಂಬಿಸುವ ಕಾರ್ಯ ಶೀಘ್ರದಲ್ಲಿ ಮಾಡಿ ರೈತರ ಹಿತ ಕಾಪಾಡಲಾಗುವುದು ಎಂದರು.
ಸAಘದ ಅಧ್ಯಕ್ಷ ವೆಂಕಟೇಶ್ ವಾಲ್ಮೀಕಿ ಸಭೆ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಹುಲಿಗೆಮ್ಮ ತಳವಾರ, ಸಂಘದ ಅಧ್ಯಕ್ಷ ವೆಂಕಟೇಶ್ ವಾಲ್ಮೀಕಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ, ಮಹೇಶ್ ಹಳ್ಳಿ, ಅಪ್ಪಣ್ಣ ಜೋಶಿ, ನಜೀರ ಮಿಯ್ಯಾ, ದಸ್ತಗಿರಿ ಸಾಬ್ ಆಲಿ, ಚಂದ್ರಶೇಖರ, ಪ್ರಕಾಶ ಸಜ್ಜನ್, ಶರಣಗೌಡ ಪಾಟೀಲ, ಬಸವರಾಜ ಹಿರೇಮನಿ, ಲಕ್ಷ್ಮಣ್ ರಾವ ಕುಲಕರ್ಣಿ ಸೇರಿದಂತೆ ಸಹಕಾರಿ ಸಂಘದ ಸರ್ವ ನಿರ್ದೇಕರು ಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!