
ರೈತರುಗಳು ಹಾರ್ವೆಸ್ಟ ಹಬ್ಬ ಸದುಪಯೋಗಪಡಿಸಿಕೋಳ್ಳಿ : ಸಚಿವ ತಂಗಡಗಿ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 5- ರೈತರುಗಳು ಹಾರ್ವೇಸ್ಟ ಹಬ್ಬಗಳ ಸದುಪಯೋಗಪಡಿಸಿಕೋಳ್ಳಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ,ಕನ್ನಡ ಮತ್ತು ಸಂಸ್ಕೃತಿಗಳ ಇಲಾಖೆ,ಕೋಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಅವರು ತಾಲೂಕಿನ ಕೋಟಯ್ಯಕ್ಯಾಂಪ ನಲ್ಲಿ ಕೃಷಿಇಲಾಖೆ ಅನುದಾನ ಮತ್ತು ಎಸ್.ಬಿ.ಐ(ಕೃಷಿವಾಣಿಜ್ಯ ಶಾಖೆ) ಆರ್ಥಿಕ ಸಹಾದೋಂದಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದಲ್ಲ ನಡೆದ ಹೈಟೇಕ ಹಾರ್ವೇಸ್ಟ ಹಬ್ಬ ಸಮಾರಂಭ ಉದ್ಘಾಟಿಸಿ ಮಾತನಾಡಿ ಸಹಕಾರ ಸಂಘಗಳಿಗೆ ಶೇಕಡ ೭೦ರಷ್ಟು ಸಹಾಯ ಧನ,ರೈತರಿಗೆ ನೇರವಾಗಿ ಭತ್ತ ಕಟಾವು ಯಂತ್ರ,ಮೇವು ಕಟ್ಟುವ ಯಂತ್ರಗಳಿಗೆ ಸರಕಾರದಿಂದ ಶೆಕಡ ೫೦ರಷ್ಟು ಸಹಾಯ ಧನ ನೀಡಲಾಗುವುದು.
ನಮ್ಮ ಭಾಗದಲ್ಲಿ ಅತಿಹೆಚ್ಚು ಭತ್ತ ಬೆಳೆಯುತ್ತಾರೆ. ರೈತರುಗಳು ಸರಕಾರದಿಂದ ಸಿಗುವ ಸೌಲಭ್ಯ ಪಡೆದುಕೋಳ್ಳ ಬೇಕು. ಎಲ್ಲಾ ಇಲಾಖೆವಾರು ಅಧಿಕಾರಿಗಳು ಜಾಗೃತಿ ಮೂಲಕ ಮಾಹಿತಿ ನೀಡುತ್ತಿದ್ದಾರೆ ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್.ರುದ್ರಶಪ್ಪ,ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ ಮಾತನಾಡಿದರು.
ಈ ಸಂದರ್ಭದಲ್ಲಿ ಪಿರ್ಕಾಡ ಬ್ಯಾಂಕ್ ಅಧ್ಯಕ್ಷ ದೋಡ್ಡಪ್ಪ ದೇಸಾಯಿ,ಜಿಲ್ಲಾಗ್ಯಾರಂಟಿ ಯೋಜನೆಗಳ ಅಧ್ಯಕ್ಷ ರೆಡ್ಡಿ ಶ್ರೀ ನಿವಾಸ, ಹಾಲು ಒಕ್ಕೂಟದ ಸತ್ಯನಾರಾಯಣ,ಗ್ರಾಪಂ ಉಪಾಧ್ಯಕ್ಷ ಜಿ ಸೂರ್ಯಕುಮಾರ, ಕೃಷಿ ಪತ್ತಿನ ಸಹಕಾರ ಸಂಘದ ಎಂ ಶ್ರೀ ನಿವಾಸ ಮುಂತಾದವರು ಉಪಸ್ಥಿತರಿದ್ದರು.