KB

ಬನ್ನಿಕೊಪ್ಪ : ಅಣ್ಣ, ತಮ್ಮಂದಿರ 19 ಎಕರೆ ಭೂಮಿ ವಕ್ಫ ಆಸ್ತಿಗೆ ಸೇರ್ಪಡೆ, ಅಸಮಾಧಾನಗೊಂಡ ರೈತರು

ಕರುನಾಡ ಬೆಳಗು ಸುದ್ದಿ

ಕುಕನೂರು10-ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ವಕ್ಫ ಆಸ್ತಿ ವಿಷಯಕ್ಕೆ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಇಬ್ಬರು ರೈತರು ಹಾಗೂ ಅಣ್ಣ, ತಮ್ಮಂದಿರ 19.09 ಎಕರೆ ಭೂಮಿ ವಕ್ಫ ಆಸ್ತಿ ಎಂದು ಹೆಸರು ಕುಳಿತಿದ್ದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

ಬನ್ನಿಕೊಪ್ಪ ಗ್ರಾಮದ ಶರಣಪ್ಪಗೌಡ, ತಂದೆ ಶಿವನಗೌಡ ವೀರಪ್ಪಗೌಡ ಅವರ ಕವಲೂರು ಸಿಮಾದಲ್ಲಿರುವ ಸರ್ವೇ ನಂಬರ್.497 ರಲ್ಲಿ 9.25 ಎಕರೆ. ಹಾಗೂ ಅದೇ ಸರ್ವೇ ನಂಬರ್ ನಲ್ಲಿರುವ ರಾಮನಗೌಡ, ತಂದೆ ಶಿವನಗೌಡ ವೀರಪ್ಪಗೌಡ ಅವರ 9.24 ಎಕರೆ ಭೂಮಿ ಸೇರಿ ಒಟ್ಟು 19.09 ಎಕರೆ ಭೂಮಿ ವಕ್ಫ ಆಸ್ತಿಗೆ ಸೇರಿದರಿಂದ ಇಬ್ಬರು ರೈತರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊಟ್: ನಮ್ಮ ಭೂಮಿಯ ಪಕ್ಕದಲ್ಲಿ ಮುಸ್ಲಿಂ ಸಮಾಜದ ಭೂಮಿ ಇತ್ತು, ಅದನ್ನು ಸೇರಿಸುವ ಬದಲು ನಮ್ಮ ಆಸ್ತಿಯನ್ನು ವಕ್ಫ ಆಸ್ತಿಗೆ 2021-22ರಲ್ಲಿ ಸೇರ್ಪಡೆ ಮಾಡಿದ್ದಾರೆ. ನಮ್ಮ ಭೂಮಿಯನ್ನು ಅಧಿಕಾರಿಗಳು ಎತಾ ಪ್ರಕಾರ
ಮಾಡಿಕೊಡಬೇಕು.

Leave a Reply

Your email address will not be published. Required fields are marked *

error: Content is protected !!