
ಬೆಂಕಿ ಅವಘಢ 6 ಬೈಕ್ ಗಳು ಸುಟ್ಟು ಭಸ್ಮ
ಕರುನಾಡ ಬೆಳಗು ಸುದ್ದಿ
ವಿಜಯನಗರ, 16- ತಾಲೂಕಿನ ಅನಂತಶಯನ ಗುಡಿ ಹತ್ತಿರವಿರುವ ದ್ವಿಚಕ್ರ ವಾಹನ ರಿಪೇರಿ ಅಂಗಡಿಯ ಮುಂದೆ ರಿಪೇರಿ ಮಾಡಲು ನಿಲ್ಲಿಸಿದ್ದ ೬ ದ್ವಿಚಕ್ರ ವಾಹನಗಳು ಬೆಳಗಿನ ಜಾವ ಬೆಂಕಿಗೆ ಆಹುತಿಯಾಗಿ ಸುಟ್ಟು ಬಸ್ಮವಾಗಿರುವ ಘಟನೆ ಸಂಭವಿಸಿದೆ.
ಇಲ್ಲಿನ ಅನಂತಶಯನ ಗುಡಿ ರೈಲ್ವೆ ಗೇಟ್ ಹತ್ತಿರ ಶುಕ್ರವಾರ ನವಂಬರ್ ೧೫ ಬೆಳಗಿನ ಜಾವ ಒಂದು ಗಂಟೆ ಸುಮಾರಿಗೆ ರಾಜ ಸಾಬ್ ಎನ್ನುವ ದ್ವಿಚಕ್ರವಾಹನ ಮೆಕಾನಿಕ್ ತನ್ನ ಅಂಗಡಿ ಮುಂದೆ ಬಿಟ್ಟಿದ್ದ ರಿಪೇರಿಗಾಗಿ ಬಂದ ಗಾಡಿಗಳು ೧ ಡಿಯೋ, ೨ ಸೂಪರ್ ಎಕ್ಸೆಲ್, ಡಿಸ್ಕವರ್, ೩ ಸ್ಪ್ಲಂಡರ್, ಸುಜುಕಿ ಸ್ಕೂಟಿ, ಸಿಡಿ ಡಾನ್, ಒಟ್ಟು ಆರು ಗಾಡಿಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದ್ದು ಈ ಘಟನೆ ಜರುಗಿದ ಕೆಲವೇ ಕ್ಷಣಗಳಲ್ಲಿ ಸ್ಥಳೀಯ ಪ್ರತ್ಯಕ್ಷ ದರ್ಶಿ ಯೊಬ್ಬರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು.ಕರೆ ಸ್ವೀಕರಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕೂಡಲೆ ಅವಘಡ ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸಿ ಮುಂದಿನ ಅನಾಹುತ ತಪ್ಪಿಸಿದ್ದಾರೆ.
ಈ ಸಂಬ0ಧ ದ್ವಿಚಕ್ರವಾಹನ ದುರಸ್ತಿ ಕಾರ್ಮಿಕರ ಸಂಘದ ಅಧ್ಯಕ್ಷ ಪೀಟರ್ ದಾಸ್ ದ್ವಿಚಕ್ರ ವಾಹನಗಳ ಮಾಲೀಕರ ಜೊತೆ ಮಾತನಾಡುತ್ತೇನೆ ಎಂದು ಮೆಕಾನಿಕ್ ರಾಜಸಾಬ್ ಇವರಿಗೆ ಧೈರ್ಯ ತುಂಬಿದರು.
ನಡೆದ ಘಟನೆ ಬಗ್ಗೆ ಸಾರ್ವಜನಿಕರು ಅನುಮಾನಿಸಿದ್ದು ಇದು ಉದ್ದೇಶ ಪೂರಕವಾಗಿ ಬೆಂಕಿ ಹಚ್ಚಿದ್ದಾರೆ ಎಂದು ನಡೆದಿರುವ ಘಟನೆ ಬಗ್ಗೆ ಅಲ್ಲಲ್ಲಿ ಮಾತನಾಡುತಿದ್ದುದು ಕೇಳಿಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಜಯಲಕ್ಷ್ಮಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.