
ಕೃಷ್ಣ ಜಯಂತಿ : ಸಂಸದರಿಂದ ಪುಷ್ಪಾರ್ಚನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 26- ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಶ್ರೀ ಕೃಷ್ಣ ಜಯಂತಿಯ ಹಿನ್ನೆಲೆಯಲ್ಲಿ ಕೊಪ್ಪಳ ಸಂಸದರಾದ ರಾಜಶೇಖರ ಹಿಟ್ನಾಳ ಅವರು ಆಗಸ್ಟ್ ೨೬ರಂದು ನಗರದ ಸಿರಸಪ್ಪಯ್ಯನ ಮಠದ ಓಣಿಯಲ್ಲಿರುವ ಶ್ರೀ ಕೃಷ್ಣ ದೇವಸ್ಥಾನಕ್ಕೆ ತೆರಳಿ ಬಾಲಕೃಷ್ಣನ ತೊಟ್ಟಿಲು, ಶ್ರೀ ಕೃಷ್ಣ ಮೂರ್ತಿಯ ದರ್ಶನ ಪಡೆದು. ಬಳಿಕ ಶ್ರೀಕೃಷ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ನಗರಸಭೆ ಸದಸ್ಯರಾದ ಅಕ್ಬರಪಾಶಾ ಪಲ್ಟನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕೊಟ್ರೇಶ್ ಮರಬನಳ್ಳಿ, ಸಮಾಜದ ಮುಖಂಡರಾದ ಜಗನ್ನಾಥ ಹುಲಿಗಿ, ಪ್ರಾಣೇಶ್ ಪೂಜಾರ, ಹುಲಗಪ್ಪ ವಾಲಿಕಾರ, ಸಂಗಪ್ಪ ಬಾಗಲಿ, ಭೀಮಣ್ಣ ಲೇಬಗೇರಿ, ವೆಂಕಟೇಶ್ ಕಟ್ಟಿಮನಿ, ರಮೇಶ್ ನಾಗೇಶನಹಳ್ಳಿ, ಕಾಮಾಕ್ಷಿ ವಾಲಿಕಾರ, ಹುಲಿಗಮ್ಮ ವಾಲಿಕಾರ ಸೇರಿದಂತೆ ಹಲವು ಗಣ್ಯರು ಹಾಗೂ ಮತ್ತಿತರರಿದ್ದರು.