
ಸಂಸಾರ ಎಂಬ ಶರೀರ ಸಾಗುವುದಕ್ಕೆ ಧರ್ಮ ಎಂಬ ಪುಟ್ಟಿ ಹೊರಬೇಕು
ಕರುನಾಡ ಬೆಳಗು ಸುದ್ದಿ
ಕುಕನೂರು, 27- ಸಂಸಾರ ಎಂಬ ಶರೀರ ಸಾಗಬೇಕಾದರೆ ಧರ್ಮ ಎಂಬ ಪುಟ್ಟಿ ಹೊರಬೇಕು ಅಭಿನವ ಪ್ರಭು ಮಹಾಸ್ವಾಮಿಗಳು ಪಟ್ಟಣದ ಶ್ರೀ ಅನ್ನದಾನೀಶ್ವರ ಮಠದಲ್ಲಿ ಸಾಮೂಹಿಕ ವಿವಾಹ ಹಾಗೂ ಶ್ರೀ ಅನ್ನದಾನೀಶ್ವರ ರಥೋತ್ಸವ, ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ದೇಶಿಸಿ ಅಭಿನವ ಪ್ರಭು ಮಹಾಸ್ವಾಮಿಗಳು ಮಾತನಾಡಿ, ಸಂಸಾರ ಎಂಬ ಶರೀರ ಸಾಗಬೇಕಾದರೆ ಧರ್ಮ ಎಂಬ ಪುಟ್ಟಿಯಲ್ಲಿ ನ್ಯಾಯ, ನೀತಿ,ಧರ್ಮ ಸಮಾನ ಮನಸ್ಕಾರದ ನೀತಿಗಳನ್ನು ಒತ್ತುಸಾಗಬೇಕು ಅಂದಾಗ ಮಾತ್ರ ಸಂಸಾರ ಎಂಬ ಶರೀರ ಸಾಗಲು ಸಾಧ್ಯವಾಗುತ್ತದೆ ಎಂದು 9 ಜೋಡಿ, ನವ ದಂಪತಿಗಳಿಗೆ ಸಂದೇಶ ನೀಡಿ ಇಂತಹ ಸಂಭ್ರಮದ ದೃಶ್ಯವನ್ನು ಕಾಣಲು ಶ್ರಮ ಪಟ್ಟಿರುವ ಡಾ.ಮಹಾದೇವ ಸ್ವಾಮಿಗಳು ಹಾಗೂ ಶ್ರೀ ಅನ್ನದಾನೀಶ್ವರ ಸೇವಾ ಸಮಿತಿಯವರು, ಭಕ್ತಾದಿಗಳಿಗೂ ಮಾಡಿರುವ ಈ ಸಮಾಜಮುಖಿ ಕೆಲಸ ಇಡೀ ಸಮಾಜಕ್ಕೆ ಮಾದರಿಯಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಬೆದವಟ್ಟಿ, ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಂಗಳೂರು, ಚಿದಾನಂದ ಮಹಾಸ್ವಾಮಿಗಳು ಹಿರೇಸಿಂದೋಗಿ, ಶಿವಾನಂದ ಸ್ವಾಮಿಗಳು ಮಕ್ಕಳ್ಳಿ, ಅಭಿನವ ಒಪ್ಪತ್ತೇಶ್ವರ ಮಹಾಸ್ವಾಮಿ ಗಳು ಗುಳ್ಳೆದಗುಡ್ಡ, ಶಿವಯೋಗಿ ಮಹಾಸ್ವಾಮಿಗಳು ಸೊರಟೂರ ಶ್ರೀಗಳು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಅಂದಪ್ಪ ಜವಳಿ, ವೀರಣ್ಣ ಉಳ್ಳಾಗಡ್ಡಿ, ಶಿವಕುಮಾರ್ ನಾಗಲಾಪುರ ಮಠ, ಪ.ಪಂ. ಉಪಾಧ್ಯಕ್ಷ ಪ್ರಶಾಂತ ಆರ್ ಬೆರಳಿನ, ಪ.ಪಂ. ಸದಸ್ಯ ಗಗನ್ ನೋಟಗಾರ, ಈರಪ್ಪ ಗುತ್ತಿ, ಶಂಬಣ್ಣ ಯಲಬುರ್ಗಿ, ಕೊಟ್ರಪ್ಪ ತೋಟದ, ವಿ.ಜಿ.ಬಳಗೇರಿ, ಭರಮಪ್ಪ ತಳವಾರ್, ಭರಮಪ್ಪ ದೆಪೇದಾರ್, ನಾರಾಯಣಪ್ಪ ಕಲಾಲ್ ಇನ್ನೂ ಅನೇಕರು ಇದ್ದರು.