
ದಲಿತರ ಮೇಲಿನ ದೌರ್ಜನ್ಯ ತಡೆಗೆ ವಿಶೇಷ ಪೊಲೀಸ್ ಠಾಣೆಗಳನ್ನು ತೆರೆಯಲು ಒತ್ತಾಯ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 22- ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಹಾಗೂ ತ್ವರಿತ ನ್ಯಾಯಕ್ಕಾಗಿ ವಿಶೇಷ ಪೊಲೀಸ್ ಠಾಣೆಗಳನ್ನು ತೆರೆಯುವ ಕುರಿತಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿಯು ಮನವಿ ಸಲ್ಲಿಸಿದೆ.
ಮನವಿಯಲ್ಲಿ ಮುಖ್ಯಮಂತ್ರಿಗಳು ನಡೆಸುವ ಸಚಿವ ಸಂಪುಟ ಸಭೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ನಿಯಂತ್ರಣ ಮತ್ತು ತ್ವರಿತ ತನಿಖೆ ಹಾಗೂ ನ್ಯಾಯಕ್ಕಾಗಿ ಜಿಲ್ಲೆಗೊಂದು ಹೊಸ ಪೊಲೀಸ್ ಠಾಣೆ ತೆರೆಯಲು ಕಡತ ಮಂಡಿಸಿ ಅನುಮೋದನೆ ನೀಡುವಂತೆ ಒತ್ತಾಯಿಸಿದ್ದಾರೆ.
ದಲಿತರಿಗೆ ತ್ವರಿತವಾಗಿ ಪ್ರತ್ಯೇಕ ಪೊಲೀಸ್ ಠಾಣೆಗಳನ್ನು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಸಿ ಮಹಾದೇವಪ್ಪ ಹಾಗೂ ಮುಖ್ಯಮಂತ್ರಿಗಲಿಗೆ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಡಿ.ಎಸ್.ಎಸ್ ಜಿಲ್ಲಾ ಪ್ರಧಾನ ಸಂಚಾಲಕರು ರಾಘು ಚಾಕರಿ, ಮಂಜು ದೊಡ್ಡಮನಿ, ಮಾರ್ಕೇಂಡಿ ಬೆಲ್ಲದ್, ಮತ್ತು ಕಾಶಪ್ಪ ಚಲವಾದಿ, ಗೌತಮ್ ಬಳಗಾನೂರ, ಶ್ರೀಕಾಂತ್ ಕಟ್ಟಿಮನಿ, ನಿಲಪ್ಪ ಮೆಳ್ಳಿಕೇರಿ, ಶರಣಪ್ಪ ಓಜನಳ್ಳಿ, ಇತರರು ಉಪಸ್ಥಿತಿ ಇದ್ದರು