
ಕಲ್ಲೂರು : ಪ್ರೌಢ ಶಾಲೆಯಲ್ಲಿ ಎಸ್.ಡಿಎಂಸಿ ರಚನೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 23- ತಾಲೂಕಿನ ಕಲ್ಲೂರು ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಅಸ್ತಿತ್ವಕ್ಕೆ ಬಂದ ನೂತನ ಎಸ್ಡಿಎಂಸಿ ಮಂಗಳವಾರ ರಚಿಸಲಾಯಿತು.
ಕಲ್ಲಪ್ಪ ಶೇಖಪ್ಪ ಮೆಣಸಿನಕಾಯಿ (ಅಧ್ಯಕ್ಷ),ಪ್ರೇಮಾ ಬಂಗಾಳಿಗಿಡದ (ಉಪಾಧ್ಯಕ್ಷೆ), ಅಂದಾನಪ್ಪ ಶೆಟ್ಟರ್, ಕಲ್ಲಯ್ಯ ಹೊಸಮನಿ, ಮಹ್ಮದ್ ಬಳಿಗೇರಿ, ಹನಮಪ್ಪ ಚಾಬಳ್ಳಿ, ಸುರೇಶ ಈಳಿಗೇರ್,ಮಂಜುಳಾ ಗುಡಿಸಲತ, ಶಶಿಕಲಾ ರಾಂಪೂರ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಈ ವೇಳೆಯಲ್ಲಿ ನೂತನವಾಗಿ ಶಾಲಾ ಮೇಲುಸ್ತುವಾರಿ ಸಮಿತಿಗೆ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು.