1

ಜಾತಿಯ ಕಿಳರಿಮೆ ತೋಡೆದು ಹಾಕಿದವರು ಕನಕದಾಸರು : ಮಾಜಿ ಸಚಿವ ಮಲ್ಲಕಾರ್ಜುನ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 19- ಮಾನವ ಕುಲಕ್ಕಾಗಿ ತಮ್ಮನೆ ಅರ್ಪಿಸಿಕೊಂಡು ಜಾತಿ ಕಿಳರಿಮೆ ತೊಡೆದು ಹಾಕಿದವರು ಭಕ್ತ ಕನಕದಾಸರು ಎಂದು ಮಾಜಿ ಸಚಿವ ಮಲ್ಲಕಾರ್ಜುನ ನಾಗಪ್ಪ ಹೇಳಿದರು.

ಅವರು ತಾಲೂಕ ಆಡಳಿತ ಮತ್ತು ತಾಲೂಕು ಕನಕದಾಸ ಕುರುಬರ ಸಂಘದ ಆಶ್ರಯದಲ್ಲಿ ನಡೆದ ನಗರದ ಹೊಸಳ್ಳಿ ರಸ್ತೆಯಲ್ಲಿರುವ ಶ್ರೀ ಕನಕದಾಸರ ವೃತ್ತದಲ್ಲಿ ಕನಕದಾಸರ ೫೩೭ನೇ ಜಯಂತೋತ್ಸವದಲ್ಲಿ ಮಾತನಾಡಿ, ಕುಲಕುಲವೆಂದು ಬಡಿದಾಡದಿರಿ ಕಲುದ ನೆಲೆಯೇನು ಬಲ್ಲಿರಾ ಎಂದು ದಾಸ ಪರಂಪರೆಯ ಶ್ರೇಷ್ಠರು ಕನಕದಾಸರು ವಿಜಯನಗರ ಸಾಮ್ರಾಜ್ಯದ ಸಾಮಂತ ದೊರೆಯಾಗಿ ಶ್ರೀ ಕನಕದಾಸರು ಅತ್ಯುತ್ತಮ ಆಳ್ವಿಕೆಯ ನಡೆಸಿ ಜನರ ಕಲ್ಯಾಣಕ್ಕಾಗಿ ಕೆರೆಗಳನ್ನು ಕಟ್ಟಿಸಿದರು.

ದಾಸತ್ವ ದಿಕ್ಷೆಯಿಂದ ದೇಶವನ್ನು ಸುತ್ತಿ ಜನರಲ್ಲಿ ಮನುಷ್ಯರಲ್ಲಿ ಮಾನವೀಯ ಮೌಲ್ಯಗಳನ್ನು ಬೇಳೆಸಿದವರು ಕನಕದಾಸರು ಪ್ರತಿಯೊಬ್ಬ ಕನ್ನಡಿಗರು ಕಾಗಿನೆಲೆ ಮತ್ತು ಬಾಡ ಗ್ರಾಮಕ್ಕೆ ತೆರಳಿ ಕನಕದಾಸರು ಜೀವಿಸಿದ್ದ ಸ್ಥಳವನ್ನು ನೋಡುವ ಮೂಲಕ ಅವರ ಆದರ್ಶಗಳನ್ನು ಪಾಲಿಸಬೇಕಿದೆ ಈ ಎರಡು ಗ್ರಾಮಗಳನ್ನು ಸರಕಾರ ಅಭಿವೃದ್ದಿಪಡಿಸಿದ್ದು ಸಾಹಿತ್ಯ ಕನಕದಾಸರ ಸಾಹಿತ್ಯದ ಪ್ರಚಾರ ಮತ್ತು ವ್ಯಾಪಕ ವಾದಂತಹ ಕೃತಿಗಳ ಮುದ್ರಣ ಕಾರ್ಯ ಇನ್ನು ನಿರಂತರವಾಗಿ ನಡೆಯಲಿ ಜೊತೆಗೆ ಪ್ರತಿ ಗ್ರಾಮ ಪ್ರತಿ ಮನೆಯಲ್ಲೂ ಕನಕದಾಸರ ಜಯಂತಿ ಉತ್ಸವಗಳು ಜರುಗಲಿ ಎಂದರು.

ತಾಲೂಕ ಕುರಬ ಸಮಾಜದ ಸಹಯೋಗದೊಂದಿಗೆ ತಹಶೀ ಯು. ನಾಗರಾಜ್ ಕನಕದಾಸರ ಜಯಂತಿಯ ನೇತೃತ್ವವಹಿಸಿದ್ದರು.

ಬಸಾಪಟ್ಟಣ ನಂಜು0ಡೇಶ್ವರ ಮಠದ ಸಿದ್ದಯ್ಯ, ಸಿದ್ದರಾಮಯ್ಯ ಗುರುವಿನ ಆನೆಗುಂದಿ ರಾಜಾಮಾತೆ ಲಲಿತಾ ರಾಣಿ ಶ್ರೀರಂಗದೇವರಾಯಲು, ಮಾಜಿ ಶಾಸಕ ಜಿ.ವೀರಪ್ಪ, ನಗರಸಭೆಯ ಅಧ್ಯಕ್ಷ ಮೌಲಸಾಬ, ಉಪಾಧ್ಯಕ್ಷೆ ಪಾರ್ವತಮ್ಮ ದೊಡ್ಡಮನಿ, ವಿದ್ಯಾನಿಕೇತನ ವಿದ್ಯಾಸಂಸ್ಥೆಯ ಅಧ್ಯಕ್ಷ ನೆಕ್ಕಟ್ಟಿ ಸೂರಿ ಬಾಬು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸೈಯದ ಇಲಿಯಾಸ್ ಖಾದ್ರಿ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಚೌಡ್ಕಿ, ಸದಸ್ಯರಾದ ವಾಸುದೇವ ನವಲಿ,ನವೀನ್ ಪಾಟೀಲ್, ನೀಲಕಂಠಪ್ಪ ,ಎಫ್. ರಾಘವೇಂದ್ರ, ಸಿಡಿಪೋ ಜಯಶ್ರೀ ಆರ್, ಮನೋಹರಗೌಡ, ತಿಪ್ಪೇರುದ್ರಸ್ವಾಮಿ, ವೀರೇಶ್ ಸುಳೆಕಲ್, ವೀರೇಶ್ ಬಲಕುಂದಿ, ಬಿ.ಶರಣಪ್ಪ, ಬಸವರಾಜ, ದುರ್ಗಪ್ಪ ದಳಪತಿ, ಶೇಖ ನಬಿಸಾಬ್, ಭಾರತಿ, ವಿಜಯಲಕ್ಷ್ಮಿ, ನಗರಸಭೆ ಕಾನೂನು ಸಲಹೆಗಾರರಾದ ರಾಜೇಶ್ವರಿ ಸುರೇಶ್, ಹಾಲುಮತ ಕುರುಬ ಸಮಾಜದ ಅಧ್ಯಕ್ಷ ಯಮನಪ್ಪ ವಿಠಲಪೂರ, ಕಾರ್ಯಾಧ್ಯಕ್ಷ ಶರಣೇಗೌಡ ಬಸಾಪಟ್ಟಣ, ನಗರಾಧ್ಯಕ್ಷ ಕೆ.ನಾಗೇಶಪ್ಪ, ನಗರಸಭೆಯ ಮಾಜಿ ಅಧ್ಯಕ್ಷ ಕೆ.ವೆಂಕಟೇಶ, ಡ್ಯಾಗಿ ರುದ್ರೇಶ್, ಮಲ್ಲಿಕಾರ್ಜುನ ಜಂತಗಲ್, ಯಮನೂರಪ್ಪ, ಹನುಮಂತಪ್ಪ ಹುಲಿಹೈದರ್, ನೀಲಕಂಠಪ್ಪ ಹೊಸಳ್ಳಿ, ಮಂಜುನಾಥ ದೇವರಮನಿ, ಮೋರಿ ದುರ್ಗಪ್ಪ, ನವಲಿ ಯಮನಪ್ಪ, ಸಿಂಗನಾಳ ವೆಂಕಟೇಶ, ವಿಠಲ್, ರುದ್ರೇಶ್ ಗಂಗಾವತಿ, ಪರಶುರಾಮ ಇಟಗಿ, ಬಿ.ಫಕೀರಯ್ಯ, ಢಣಾಪೂರ ಅಯ್ಯಪ್ಪ, ಎಸ್.ಟಿ.ಈರಪ್ಪ, ಶಿವ ಬಸವನಗೌಡ, ಶರಣಪ್ಪ ಪೊಲೀಸ್, ಮಲ್ಲೇಶಪ್ಪ ಪೊಲೀಸ್, ಗಿಡ್ಡಿ ಹನುಮಂತಪ್ಪ, ಶೇಖರಗೌಡ, ಸಿದ್ದಲಿಂಗನಗೌಡ, ಮುದುಕಪ್ಪ ಗಡ್ಡಿ, ಅಡ್ಡಿ ಶಾಮಣ್ಣ, ಗೀತಾ ವಿಕ್ರಮ್, ಕೆ.ವರಲಕ್ಷ್ಮಿ, ಜ್ಯೋತಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!