
ಉಚಿತ ರೋಗ ತಪಾಸಣಾ ಹಾಗೂ ಶಾಸ್ತ್ರಚಿಕಿತ್ಸಾ ಶಿಬಿರ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 19- ವಿಶ್ವ ಮೂಲವ್ಯಾಧಿ ದಿನಾಚರಣೆಯ ಪ್ರಯುಕ್ತ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜ ಮತ್ತು ಆಸ್ಪತ್ರೆ ವತಿಯಿಂದ .ದಿ.20/11/24 ರಿಂದ 27/11/24 ವರೆಗೆ ಶ್ರೀ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಉಚಿತವಾಗಿ ರೋಗ ತಪಾಸಣೆ ಮತ್ತು ರಿಯಾಯಿತಿ ದರದಲ್ಲಿ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗುವದು.
ಗುದರೋಗ (ಮೂಲವ್ಯಾದಿ), ಅರ್ಶ (ಮೊಳಕೆ), ಪರಿಕರ್ತಿಕಾ (ಉರಿಮೂಲವ್ಯಾದಿ), ಭಗಂದರ (ಫಿಸ್ತುಲಾ), ಹರ್ನಿಯಾ, ಸುನ್ನತಿ, ಕುರುವು, ನರಲಿ, ಗಂಟುಗಳು, ಛೇರು (ಅಂಡವೃದ್ಧಿ), ಆನೆ, ಜಲೋಧರ, ಕಿಡ್ನಿ ಹರಳುಗಳು, ಹೊಟ್ಟೆ ನೋವು ಈ ಮೊದಲಾದ ರೋಗಗಳನ್ನು ತಪಾಸಣೆ ಮಾಡಲಾಗುವುದು. ಕೊಪ್ಪಳ ಹಾಗೂ ಸುತ್ತಮುತ್ತಲಿನ ಜನರು ಸದ್ಬಳಕೆ ಮಾಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ : ಡಾ|| ಎಂ ಎಂ ಸಾಲಿಮಠ, 8945010950, ಡಾ|| ಗೀತಾಂಜಲಿ ಎಚ್ 7760346752, ಡಾ॥ ಲೋಹಿತ ಕಲಾಲ 9538119920, ಡಾ॥ ಜಿತೇಂದ್ರ ಎ.ಜೆ 7090116108, ಡಾ॥ ಅನಿಶಾ ಎಸ್ ಅಶ್ರಫ್ 9538119920 ಇವರುಗಳ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದೆಂದು ಪ್ರಾಂಶುಪಾಲರಾದ ಡಾ. ಎಂ. ಎಂ ಸಾಲಿಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.