
ಇನ್ನರ್ ವ್ಹಿಲ್ ಕ್ಲಬ್‌ನಿಂದ ಉಚಿತ ನೇತ್ರ ಚಿಕಿತ್ಸೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 19- ತಾಲೂಕಿನ ಕರಮುಡಿ ಗ್ರಾಮದಲ್ಲಿ ಗದುಗಿನ ಡಾ.ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ೧೪ನೇ ಪುಣ್ಯಸ್ಮರಣೆ ನಿಮಿತ್ಯ ಇನ್ನರ್ ವ್ಹಿಲ್‌ಕ್ಲಬ್ ವತಿಯಿಂದ ಉಚಿತ ನೇತ್ರಚಿಕಿತ್ಸೆ ಹಮ್ಮಿಕೊಳ್ಳಲಾಗಿತ್ತು.
ಈ ಒಂದು ಶಿಬಿರದಲ್ಲಿ ೧೭೦ ಜನರು ಉಚಿತ ಚಿಕಿತ್ಸೆ ಪಡೆದರು. ೬೦ ಜನರಿಗೆ ಕನ್ನಡಕ ನೀಡಲಾಯಿತು. ಇನ್ನುಳಿದ ಶಿಬಿರಾರ್ಥಿಗಳಿಗೆ ನೇತ್ರ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕಾ ನಿಮಿತ್ಯ ಇನ್ನರ್ ವ್ಹಿಲ್ ಕ್ಲಬ್‌ನ ಅಧ್ಯಕ್ಷೆ ಹಾಗೂ ಮಾಜಿಜಿಲ್ಲಾ ಪಂಚಾಯತ್ ಸದಸ್ಯೆ ಶಕುಂತಲಾ ದೇವಿ ಮಾಲಿಪಾಟೀಲ್ ಕರಮುಡಿ ಮಾತನಾಡಿ, ನಮ್ಮ ನಿಮಿತ್ಯ ಇನ್ನರ್ ವಿಲ್ ಕ್ಲಬ್ ವತಿಯಿಂದ ತಾಲೂಕಿನಲ್ಲಿ ಹಲವಾರು ಜನಪರ, ಅಭಿವೃದ್ಧಿ ಪರ, ಜೀವನ ಪರ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ನಿಮಿತ್ಯ ಇನ್ನರ್ ್ಹಲ್ ಕ್ಲಬ್ ಅಧ್ಯಕ್ಷೆ ಜ್ಯೋತಿ ಪಲ್ಲೇದ ಮಾತನಾಡಿನಮ್ಮ ನಿಮಿತ್ಯಇನ್ನರ್ ್ಹಲ್ ಕ್ಲಬ್ ಅಧ್ಯಕ್ಷರಾದ ಶಕುಂತಲಾದೇವಿ ಮಾಲಿ ಪಾಟೀಲ್‌ರವರ ಮಾರ್ಗದರ್ಶನದಲ್ಲಿ ಮುಂಬರುವ ದಿನ ಮಾನಗಳಲ್ಲಿ ಜನ ಸ್ಪಂಧನದ ಮೂಲಕ ಜನಮುಖಿಯಾಗಿ ನಮ್ಮ ಸಂಸ್ಥೆ ಕಾರ್ಯ ಮಾಡಲಿದೆ ಇದಕ್ಕೆ ಸಮಾನ ಮನಸ್ಕರರ ಸಹಕಾರ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಚನ್ನಮ್ಮ ಪಾಟೀಲ್, ಖಜಾಂಚಿ ಮಂಜುಳಾ ಚಲವಾದಿ, ನಿರ್ಮಲಾ ಗೋಣಿ, ಪಟ್ಟಣ ಪಂಚಾಯತಿ ಸದಸ್ಯೆ ನಂದಿತಾ ದಾನರಡ್ಡಿ ಇನ್ನಿತರರು ಉಪಸ್ಥಿತರಿದ್ದರು.