IMG-20240815-WA0081

ಸ್ವಾತಂತ್ರ್ಯ ಸ್ವೇಚ್ಛೆಯಾಗಬಾರದು : ಡಾ.ಡಿ.ಎಚ್.ನಾಯಕ್

ಕರುನಾಡ ಬೆಳಗು ಸುದ್ದಿ

ಕೊಪ್ಪಳ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಸ್ಮರಣೆ ದಿನಕ್ಕಷ್ಟೇ ಸೀಮಿತಬಾಗಬಾರದು. ಜೀವನ್ಮರಣದ ಅವರ ಚಳವಳಿಯ ಪರಿಣಾಮ ನಮ್ಮ ದೇಶವಿಂದು ಸುಭದ್ರವಾಗಿದ್ದು, ನಾವು ಸುರಕ್ಷಿತವಾಗಿದ್ದೇವೆ. ಸಿಕ್ಕ ಸ್ವಾತಂತ್ರ್ಯ ಸ್ವೇಚ್ಛೆಯಾಗಬಾರದು ಎಂದು ಕೊಪ್ಪಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಎಚ್.ನಾಯಕ ತಿಳಿಸಿದರು.

ಕಾಲೇಜಿನ ಒಳ ಆವರಣದಲ್ಲಿ ಗುರುವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಹಲವರು ತಾಳ್ಮೆಯ‌ ಹೋರಾಟ ನಡೆಸಿದರೆ, ಕೆಲವರು ಉಗ್ರ ಚಳವಳಿ ಕೈಗೊಂಡಿದ್ದಾರೆ. ದೇಶದ ಪ್ರಗತಿಗೆ ಆ ಹೋರಾಟದ ಕೊಡುಗೆ ಅನನ್ಯ ಎಂದು ಸ್ಮರಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಸೈನಿಕರಾದ ಸುರೇಶ ಪಟ್ಟೇದ, ಸಂಗಮನಾಥ ಪಾಟೀಲ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಡಾ.ಗಂಗಾಧರ ಕಬ್ಬೇರ ಮಾತನಾಡಿದರು. ಕಾಲೇಜಿನ ಪರವಾಗಿ ಅತಿಥಿಗಳನ್ನು ಸತ್ಕರಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬೋಧಕ ಸಿಬ್ಬಂದಿ ಡಾ.ಟಿ.ವಿ.ವಾರುಣಿ, ಡಾ.ಭಾಗ್ಯಜ್ಯೋತಿ, ಸಂತೋಷಕುಮಾರಿ, ಮಂಜುನಾಥ ಆರೆಂಟನೂರ, ಶಿವನಾಥ್ ಇ.ಜಿ., ಸಿದ್ಧಲಿಂಗೇಶ ಹಮ್ಮಿಗಿ, ನಂದಾ, ಡಾ.ಪ್ರಕಾಶ್ ಬಳ್ಳಾರಿ, ಡಾ.ತುಕಾರಾಂ ನಾಯಕ್, ಡಾ.ಶಿವಬಸಪ್ಪ ಮಸ್ಕಿ, ಡಾ.ಸಣ್ಣದೇವೇಂದ್ರಸ್ವಾಮಿ, ಬಸವರಾಜ ಕರುಗಲ್, ವಿಜಯಕುಮಾರ್ ಕೆಂಚಪ್ಪನವರ್, ಸಿ.ಬಸವರಾಜ, ರಾಘವೇಂದ್ರ, ಪ್ರಕಾಶ್, ರಾಮಪ್ರಸಾದ್, ಬೋಧಕೇತರ ಸಿಬ್ಬಂದಿ ಮಹಾಂತೇಶ, ನಿಂಗಪ್ಪ, ಸುರೇಶ, ರಮೇಶ್, ಅಶೋಕ, ಹಸನ್, ವೆಂಕಟೇಶ, ಸಂಜನಾ, ಅನುಷಾ, ಬೀರಲಿಂಗೇಗೌಡ, ವಿರೂಪಾಕ್ಷಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!