
ತಾಲೂಕಿನ ಗ್ರಾಮ ಪಂಚಾಯಿತಿಗೆ ಜಿ.ಪಂ. ಡಿಐಇಸಿ ಶ್ರೀನಿವಾಸ ಚಿತ್ರಗಾರ ಬೇಟಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 21- ತಾಲೂಕಿನ ಮಧೋಳ, ಹಿರೇಮ್ಯಾಗೇರಿ, ಸಂಕನೂರ, ಗ್ರಾಮ ಪಂಚಾಯತಿಗಳಿಗೆ ಜಿಪಂ ಜಿಲ್ಲಾ ಐಇಸಿ ಸಂಯೋಜಕರಾದ ಶ್ರೀನಿವಾಸ ಚಿತ್ರಗಾರ ಹಾಗೂ ತಾಲೂಕು ಐಇಸಿ ಸಂಯೋಜಕರು ಭೇಟಿ ನೀಡಿ ನರೇಗಾ ಯೋಜನೆಯ ಕೆಲಸ ಪ್ರಾರಂಭಿಸಲು ಫಾರಂ ೬ ಅನ್ನು ಸಂಗ್ರಹಿಸಿ ಗ್ರಾಮಪಂಚಾಯಿತಿಗೆ ಸಲ್ಲಿಸಲಾಯಿತು.
ಮುಧೋಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ೬೫೦ಕ್ಕೂ ಹೆಚ್ಚು ಎನ್‌ಎಂಆರ್ ತೆಗೆಸಲಾಯಿತು.
ಮುಧೋಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕೂಸಿನ ಮನೆಗೆ ಭೇಟಿ ನೀಡಿ ಗುಣಮಟ್ಟದ ಪೌಷ್ಟಿಕ ಆಹಾರ ನೀಡುತ್ತಿರುವ ಬಗ್ಗೆ ಮಾಹಿತಿ ಪಡೆಯಲಾಯಿತು.
ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರ ಮಕ್ಕಳು ಇದರ ಸೌಲಭ್ಯವನ್ನು ಪಡೆದುಕೂಳ್ಳಬೇಕು ಎಂದು ತಿಳಿಸಿದರು.
ಹಿರೇಮ್ಯಾಗೇರಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಕಾಯಕ ಬಂಧುಗಳನ್ನು ಕರೆಸಿ ಕೆಲಸದ ಬೇಡಿಕೆ ಅರ್ಜಿಸಲ್ಲಿಸಲು ತಿಳಿಸಲಾಯಿತು.
ಇದೇ ವೇಳೆ ಕಾಯಕ ಬಂಧುಗಳಿAದ ೩೧೦ ಕ್ಕೂ ಹೆಚ್ಚು (ಫಾರಂ ೬ ನ್ನು) ಕೆಲಸದ ಬೇಡಿಕೆ ಅರ್ಜಿಗಳನ್ನು ಸ್ವೀಕರಿಸಿ ಗ್ರಾಮ ಪಂಚಾಯತಿಗೆ ಸಲ್ಲಿಸಲಾಯಿತು.
ಎರಡು ದಿನಗಳಲ್ಲಿ ಎನ್‌ಎಂಆರ್ ತೆಗೆದು ಕೆಲಸ ಆರಂಭಿಸಲು ಪಿಡಿಒರವರಿಗೆ ತಿಳಿಸಲಾಯಿತು.
ಹಿರೇಮ್ಯಾಗೇರಿಯ ಕೂಸಿನ ಮನೆಗೆ ಭೇಟಿ ನೀಡಿ ಪ್ರತಿದಿನ ಕೂಸಿನ ಮನೆ ನಡೆಸಲು ತಿಳಿಸಲಾಯಿತು.
ಸಂಕನೂರ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ನರೇಗಾ ಕಾಮಗಾರಿ ಆರಂಭಿಸಿ ಕೂಲಿಕಾರರಿಗೆ ಕೆಲಸ ಕೊಡಲು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಪಿಡಿಓ, ಡಿಇಒ, ಕರವಸೂಲಿಗಾರರು, ತಾಂತ್ರಿಕ ಸಹಾಯಕರು, ಬಿಎಫ್‌ಟಿ, ಗ್ರಾಮ ಕಾಯಕ ಮಿತ್ರರು, ಕಾಯಕ ಬಂಧುಗಳು ಮತ್ತು ಇತರರು ಭಾಗವಹಿಸಿದ್ದರು.