
ಉಪ ಚುನಾವಣೆ ನಿಮಿತ್ತ ಗಾಲಿ ಜನಾರ್ಧನ್ ರೆಡ್ಡಿ ಅಬ್ಬರ ಪ್ರಚಾರ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 28- ಸಂಡೂರು ಉಪಚುನಾವಣೆಯ ಅಂಗವಾಗಿ ಸಂಡೂರು ಕ್ಷೇತ್ರದ ವ್ಯಾಪ್ತಿಗೆ ಬರುವ ಜಿ. ಬಸಾಪುರು, ಎಂ ಲಕ್ಕಲಹಳ್ಳಿ, ರಾಮಸಾಗರ, ಗುಂಡ್ಲಹಳ್ಳಿ ಗ್ರಾಮದಲ್ಲಿ ಸೋಮವಾರ ಮುಂಜಾನೆಯಿAದ ಪಕ್ಷದ ಅಭ್ಯರ್ಥಿ ಬಂಗಾರು ಹನುಮಂತುರವರ ಪರವಾಗಿ ಗಂಗಾವತಿಯ ಶಾಸಕರಾದ ಗಾಲಿ ಜನಾರ್ಧನ ರೆಡ್ಡಿ ಅವರು ಅಬ್ಬರದ ಪ್ರಚಾರ ನಡೆಸಿದರು.
ಭ್ರಷ್ಟ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡಿದ ಪರಿಣಾಮ ಕ್ಷೇತ್ರದಲ್ಲಿ ಅಭಿವೃದ್ದಿ ಎನ್ನುವುದು ಶೂನ್ಯವಾಗಿದ್ದು ಈ ಬಾರಿ ಮಾದರಿ ಸಂಡೂರು ಕ್ಷೇತ್ರ ನಿರ್ಮಾಣಕ್ಕಾಗಿ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿ ಬಂಗಾರು ಹನುಮಂತು, ಮಾಜಿ ಸಚಿವ ಶ್ರೀರಾಮುಲು, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ದಿವಾಕರ್, ಮಂಡಲದ ಅಧ್ಯಕ್ಷ ನಾನಾ ಸಾಹೇಬ್ ನಿಕ್ಕಂ, ಕಾಟಿನಕಂಬ ಗ್ರಾಮದ ಪ್ರಮುಖ ಭೀಮೇಶ, ದುರ್ಗಪ್ಪ, ಭರಮಪ್ಪ, ಲಕ್ಷಪ್ಪ, ಬಿ.ನಾಗರಾಜ, ಸಂತೋಷ, ನಾಯಕಪ್ಪ, ಅಂಗಡಿ ಹನುಮಪ್ಪ, ಉಜೆನಪ್ಪ, ಬಂಡ್ರಿಪ್ಪ, ಉತ್ತರಮಲೈ ಗ್ರಾಮದ ಪ್ರಮುಖ ಶಿವಣ್ಣ, ಬಸಪ್ಪ, ಮಾರೆಪ್ಪ, ಸಣ್ಣಬಸಪ್ಪ, ದುರ್ಗಪ್ಪ, ಸಣ್ಣ ಓಬ್ಬಪ್ಪ, ವೆಂಕಟೇಶ, ನಾಗಪ್ಪ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.