
ನಮ್ಮ ದೇಶಕ್ಕೆ ಗಾಂಧೀಜಿ ಕೊಡುಗೆ ಅಪಾರವಾಗಿದೆ : ಬಸವರಾಜ ಉಳ್ಳಾಗಡ್ಡಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 2-ಮಹಾತ್ಮ ಗಾಂಧಿಯವರ ನಮ್ಮ ದೇಶಕ್ಕೆ ಕೊಡುಗೆ ಅಪಾರವಾಗಿದೆ ಮಹಾತ್ಮ ಗಾಂಧಿಯವರಿಗೆ ಸತ್ಯವೇ ದೇವರು ಸತ್ಯಶೋಧನೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು. ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಹೇಳಿದರು.
ಪಟ್ಟಣದ ತಾಲೂಕು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಮಹಾತ್ಮ ಗಾಂಧೀಜಿ ಅವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಹಾತ್ಮ ಗಾಂಧೀಜಿಯವರು ಸಮಾಜಿಕ ನ್ಯಾಯವನ್ನು ಪರಿ ಪಾಲಿಸಬೇಕು ಮತ್ತು ನಾವು ನೀವೆಲ್ಲರೂ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಸುಕೊಳ್ಳಬೇಕು ಮತ್ತು ಲಾಲ್ ಬಹದ್ದೂರ ಶಾಸ್ತ್ರೀಯವರು ದೇಶ ಕಂಡ ಮಹಾನ್ ವ್ಯಕ್ತಿ ಆದರ್ಶ ರಾಜಕಾರಣಿ ಭಾರತ ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರು ಅವರ ಪ್ರಮಾಣಿಕ ಆದರ್ಶದಿಂದ ಧೀಮಂತ ನಾಯಕರಾಗಿದ್ದಾರೆ ನಮ್ಮ ದೇಶಕ್ಕೊಸ್ಕರ ಹೋರಾಡಿದ ಮಹಾತ್ಮರಿಗೆ ನಮ್ಮ ನಮನಗಳು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕರಿಬಸಪ್ಪ ನಿಡಗುಂದಿ, ಬಿ.ಎಂ.ಶಿರೂರು, ರೇವಣಪ್ಪ ಹಿರೇಕುರುಬರ್, ಮಲ್ಲೇಶಗೌಡ್ರು ಮಾಲಿಪಾಟೀಲ, ವಸಂತ ಕುಲಕರ್ಣಿ, ಸಾವಿತ್ರಿ ಗೊಲ್ಲರ, ಜಯಶ್ರೀ ಕಂದಕೂರು, ಭಾಗೀರಥಿ ಜೋಗಿನ, ಶರಣಮ್ಮ ಪೂಜಾರ್, ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು, ಪಕ್ಷದ ಅಭಿಮಾನಿಗಳು ಮತ್ತು ಇತರರು ಭಾಗವಹಿಸಿದ್ದರು.