
ಗಾಂಧೀಜಿಯವರ ಜೀವನ ಮೌಲ್ಯಗಳು ವಿದ್ಯಾರ್ಥಿಗಳಿಗೆ ಮಾದರಿ : ಗವಿಯಪ್ಪ
ಕರುನಾಡ ಬೆಳಗು ಸುದ್ದಿ
ವಿಜಯನಗರ, 24- ಮಹಾತ್ಮ ಗಾಂಧೀಜಿಯವರ ಜೀವನ ಮೌಲ್ಯಗಳು ಇಂದಿನ ವಿದ್ಯಾರ್ಥಿ ಯುವಜನರಿಗೆ ಮಾದರಿಯಾಗಿದೆ. ಈ ನಿಟ್ಟಿನಲ್ಲಿ ಅವರ ಸತ್ಯನಿಷ್ಠತೆ, ಅಹಿಂಸಾವಾದ ಮತ್ತು ಶುಚಿತ್ವದತ್ತ ಎಲ್ಲರೂ ಸೇರಿ ಹೆಜ್ಜೆ ಹಾಕೋಣ ಎಂದು ವಿಜಯನಗರ ಕ್ಷೇತ್ರ ಶಾಸಕರಾದ ಹೆಚ್.ಆರ್. ಗವಿಯಪ್ಪ ಅವರು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಪರ್ಕ ಘಟಕ ಮತ್ತು ಕನ್ನಡ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರ ಸಹಯೋಗದಲ್ಲಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಹಾಗೂ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ಹೊಸಪೇಟೆಯಲ್ಲಿ ನಡೆದ ಗಾಂಧಿ ಓದು ಅಭಿಯಾನ-೨೦೨೪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿಯವರು ಒಳ್ಳೆಯ ಓದುಗರಾಗಿದ್ದರು, ಬರೆಯುತ್ತಿದ್ದರು, ಪತ್ರಕರ್ತರಾಗಿದ್ದರು, ಪ್ರತಿ ದಿನ ಸಾಕಷ್ಟು ದೂರ ನಡೆಯುವ ಮೂಲಕ ಶ್ರಮದಾನ ಮಾಡುತ್ತಿದ್ದರು. ಜೊತೆಗೆ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದರು. ಇವರ ಆದರ್ಶ ಮಾರ್ಗಗಳು ಎಂದಿಗೂ ಪ್ರಸ್ತುತವಾಗಿದ್ದು ಇಂದಿನ ಯುವ ಪೀಳಿಗೆ ವಿದ್ಯಾರ್ಥಿ ಜೀವನದಲ್ಲಿ ಗಾಂಧೀಜಿಯವರನ್ನು ಸದಾ ಸ್ಮರಿಸಿಕೊಳ್ಳಬೇಕೆಂದರು.
ಹAಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಡಿ.ವಿ.ಪರಮಶಿವಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾತ್ಮ ಗಾಂಧೀಜಿಯವರು ಸ್ವಾತಂತ್ರö್ಯ ಹೋರಾಟದಲ್ಲಿ ಮುಂದಾಳತ್ವ ವಹಿಸಿ ಸಕ್ರಿಯವಾಗಿ ಭಾಗಿಯಾದರು. ಸತ್ಯ, ಶಾಂತಿ, ಅಹಿಂಸೆಯ ತತ್ವಗಳಿಂದ ಬ್ರಿಟಿಷರನ್ನು ಎದುರಿಸಿದ ರಾಷ್ಟçಪಿತ ಮಹಾತ್ಮ ಗಾಂಧೀಜಿಯವರ ಹೋರಾಟಗಾಥೆಯು ಸದಾ ಸ್ಮರಣೀಯವಾಗಿದೆ ಎಂದರು.
ಸAಪನ್ಮೂಲ ವ್ಯಕ್ತಿಗಳ ಕುರಿತಾಗಿ ಹಿಟ್ನಾಳ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಟಿ.ಹೆಚ್. ಬಸವರಾಜು ಅವರು ಮಾತನಾಡಿ, ಗಾಂಧೀಜಿ ಸಂಘಟಿತವಾಗಿ ನಡೆಯದಿದ್ದರೆ, ಅಂಬೇಡ್ಕರ್ ಸಂವಿಧಾನ ರಚಿಸದಿದ್ದರೆ, ನಾವು ಶಿಕ್ಷಣದಿಂದ ವಂಚಿತರಾಗುತ್ತಿದ್ದೇವು. ಗಾಂಧೀಜಿಯವರು ದೇಶ, ರಾಷ್ಟ್ರ ಎಂದರೇನು ಎಂದು ತಿಳಿಸಲಿಕ್ಕೆ ದೇಶವನ್ನು ಸಂಘಟಿಸುತ್ತಾರೆ. ಶಿಕ್ಷಣಕ್ಕಾಗಿ ಶ್ರಮಿಸಿದ ಸದೃಢ ಸಮಾಜದ ರೂವಾರಿಗಳಾದ ಗಾಂಧೀಜಿ, ಬುದ್ದ, ಬಸವಣ್ಣ, ಅಂಬೇಡ್ಕರ್ ಅವರನ್ನು ನಾವು ಸ್ಮರಣೆಯಲ್ಲಿಟ್ಟುಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ. ಚನ್ನಬಸಪ್ಪ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಜಾತಿ, ಧರ್ಮದ ಬೇಧ-ಭಾವ ಮಾಡದೇ ಎಲ್ಲರೂ ಸಹಬಾಳ್ವೆಯ ಜೀವನ ನಡೆಸಬೇಕು ಎಂದು ಹೇಳಿದರು.
ಲ್ಯಾಪ್‌ಟಾಪ್ ವಿತರಣೆ : 2022-23ನೇ ಸಾಲಿನ ಎಸ್ಎಸ್ಎಲ್.ಸಿಯಲ್ಲಿ 3ನೇ ಸ್ಥಾನ ಪಡೆದು ಉತ್ತಮ ಅಂಕ ಗಳಿಸಿದ ಹೊಸಪೇಟೆ ತಾಲೂಕಿನ ಸರ್ಕಾರಿ ಎಕ್ಸ್ ಮುನಿಸಿಪಾಲ್ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಎಸ್.ಕಾಮಾಕ್ಷಿ, ತುಂಗಭದ್ರಾ ಡ್ಯಾಂನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರತಿಷ್ಠಾ, ಕಮಲಾಪುರ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಜ್ಯೋತಿಕಾ, ಹಾಗೂ ಹೊಸಪೇಟೆ ತಾಲೂಕಿನ ಆರ್.ಎಮ್.ಎಸ್.ಎ ಬೈಲುವದ್ದಿಗೇರಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಎ.ಪ್ರತಾಪ್ ಇವರುಗಳಿಗೆ ಲ್ಯಾಪಟಾಪ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಉಪಪ್ರಾಚಾರ್ಯರಾದ ವೆಂಕಟೇಶ ಕುಲಕರ್ಣಿ, ಕನ್ನಡ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಡಾ. ಎಸ್.ವೈ. ಗುರುಶಾಂತ್, ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಪ್ರವೀಣಾ ಹಲಗನಿ, ಹಾಗೂ ಕಾಲೇಜಿನ ಸಿಬ್ಬಂದಿಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಸರ್ಕಾರಿ ಕಾಲೇಜಿನ ಕನ್ನಡ ಶಿಕ್ಷಕರಾದ ರಾಜಶೇಖರ ಅವರು ಸ್ವಾಗತಿಸಿದರು. ಶಿಕ್ಷಕಿಯಾದ ಶ್ರೀಮತಿ ವಿ. ಮಾಧವಿ ಅವರು ನಿರೂಪಿಸಿದರು. ಹಾಗೇ ಶಿಕ್ಷಕಿಯಾದ ಶ್ರೀಮತಿ ಶಿವಮ್ಮ ಅವರು ವಂದನಾರ್ಪಣೆ ಮಾಡಿದರು.