
ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಶಾಂತಿ ಸಭೆ
ಕರುನಾಡ ಬೆಳಗು ಸುದ್ದಿ
ಕುಕನೂರು, 27- ಡಿಜೆ ಹಚ್ಚಲು ಪರವನಿಗೆ ನೀಡುವುದಿಲ್ಲ ಪಿಎಸ್ಐ ಟಿ ಗುರುರಾಜ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಶಾಂತಿ ಸಭೆ ಹಮ್ಮಿಕೊಳ್ಳಲಾಯಿತು.
ಶಾಂತಿ ಸಭೆ ಉದ್ದೇಶಿಸಿ ಕುಕನೂರು ಪೊಲೀಸ್ ಠಾಣೆಯ ಪಿಎಸ್ಐ ಗುರುರಾಜ್ ಟಿ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹಬ್ಬ ಆಚರಿಸುವ ಸಂದರ್ಭದಲ್ಲಿ ಡಿಜೆ ಹಚ್ಚುವ ಪದ್ಧತಿ ಬೆಳೆದು ಬರುತ್ತಿದೆ. ಡಿಜೆ ಶಬ್ದಕ್ಕೆ ಸಮಾಜದ ಸ್ವಾಸ್ಥ್ಯವೇ ಅದೇಗೆಡುತ್ತಿದೆ. ವೃದ್ಧರು, ರೋಗಿಗಳು, ಮತ್ತು ಚಿಕ್ಕ ಚಿಕ್ಕ ಮಕ್ಕಳಿಗೆ ಡಿಜೆ ಸೌಂಡ್ ಮಾರಣಾಂತಿಕವಾಗಿ ಪರಿಣಮಿಸುತ್ತಿದೆ. ಅದಕ್ಕಾಗಿ ಡಿಜೆ ಹಚ್ಚಲು ಪರವನಿಗೆ ನೀಡುವುದಿಲ್ಲ. ನಾಡಿನಲ್ಲಿ ಸಾಕಷ್ಟು ಜಾನಪದ ಕಲಾ ತಂಡಗಳು ಇದ್ದು ಸಂಘ ಸಂಸ್ಥೆಗಳು ಅವರಿಂದ ಕಾರ್ಯಕ್ರಮ ಹಮ್ಮಿಕೊಂಡರೆ ಅವರು ಬದುಕುತ್ತಾರೆ ಎಂದರು.
ಹಬ್ಬ ಆಚರಣೆ ನೆಪದಲ್ಲಿ ಸಮಾಜದ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಗಣೇಶ್ ಮಹಾಮಂಡಲ ರಚಿಸುವುದರ ಮೂಲಕ ಅದರಡಿಯಲ್ಲಿ ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಸಂಘ ಸಂಸ್ಥೆಗಳು ಮುಂದಾಗಬೇಕು ಆದಷ್ಟು ಬೇಗ ಗಣೇಶ ಮೂರ್ತಿಗಳನ್ನು 11 ದಿನದೊಳಗೆ ವಿಸರ್ಜಿಸಿದರೆ ಜನರಿಗೆ ಮತ್ತು ಪೊಲೀಸರಿಗೂ ಅನುಕೂಲವಾಗುತ್ತದೆ. ಯುವ ಜನತೆ ಇದರ ಬಗ್ಗೆ ಚಿಂತನೆ ನಡೆಸಬೇಕು ಮತ್ತು ಸರಿಯಾದ ಸಮಯಕ್ಕೆ ಮೆರವಣಿಗೆಗಳನ್ನು ಶುರು ಮಾಡಿ ರಾತ್ರಿ 10 ಕ್ಕೆ ಮುಗಿಸುವುದು ಕಡ್ಡಾಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಪಂ ಮಾಜಿ ಅಧ್ಯಕ್ಷ ಮಲ್ಲಿಯಪ್ಪ ಅಣ್ಣಿಗೇರಿ, ಪಪಂ ಉಪಾಧ್ಯಕ್ಷ ಪ್ರಶಾಂತ್ ಆರ್ ಬೆರಳಿನ,ಪಪಂ ಸದಸ್ಯ ನೂರು ಅಹ್ಮದ್ ಗುಡಿ ಹಿಂದಲ್, ಹಮಾಲರ ಸಂಘದ ಅಧ್ಯಕ್ಷ ನಿಂಗಪ್ಪ ಗೂರ್ಲೆಕೊಪ್ಪ, ಇನ್ನೂ ಅನೇಕ ಗುರು ಹಿರಿಯರು, ಹಾಗೂ ಯುವಕರು ಪಾಲ್ಗೊಂಡಿದ್ದರು.