9

ಗಂಗಾವತಿ : ಪೂರ್ತಿ ಪ್ರಮಾಣದ ಜಿಲ್ಲಾ ನ್ಯಾಯಾಲಯ ಘೋಷಣೆ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 19- ಗಂಗಾವತಿ ಕಾರಟಗಿ ಮತ್ತು ಕನಕಗಿರಿ ತಾಲೂಕಿನ ಕಕ್ಷಿಧಾರಿಗೆ ಅನುಕೂಲವಾಗಲೆಂದು ಅ.೧೦ ರಂದು ಹೈಕೋರ್ಟಿನ ಶಿಫಾರಸ್ಸಿನ ಮೇರೆಗೆ ರಾಜ್ಯ ಸರ್ಕಾರ ಗಂಗಾವತಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ವಿಶೇಷ ಪ್ರಕರಣಗಳೊಂದಿಗೆ ಪೂರ್ತಿ ಪ್ರಮಾಣದ ಜಿಲ್ಲಾ ನ್ಯಾಯಾಲಯವಾಗಿ ಘೋಷಿಸಿದ್ದು ಇರುತ್ತದೆ ಗಂಗಾವತಿ ಪೂರ್ಣ ಪ್ರಮಾಣದ ನ್ಯಾಯಾಲಯ ಗಂಗಾವತಿ ವಕೀಲರ ಸಂಘದಿAದ ಸಭೆಯಲ್ಲಿ ಒಮ್ಮತದ ತಿರ್ಮಾನ ಹೊರಡಿಸಲಾಗಿದೆ.

ವಕೀಲರ ಸಂಘದ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ಪ್ರಧಾನ ಕಾರ್ಯದರ್ಶಿ ಹೆಚ್.ಎಂ.ಮ0ಜುನಾಥ ಮಾತನಾಡಿ ದಿನಾಂಕ ೧೬ ರಂದು ಕೊಪ್ಪಳ ಜಿಲ್ಲಾ ವಕೀಲರ ಸಂಘ ಸದರಿ ವಿಷಯವನ್ನು ವಿರೋಧಿಸಿ ಹೋರಾಟ ನಡೆಸಲು ನಿರ್ಣಯ ಕೈಕೊಂಡು ಅಂದು ಕೋರ್ಟ್ ಕಲಾಪದಿಂದ ದೂರ ಉಳಿದು ಪ್ರತಿಭಟಿಸಿದರು.

ಇದರ ಬಗ್ಗೆ ನಮ್ಮ ಸಂಘದಲ್ಲಿ ತುರ್ತು ಸಭೆಯನ್ನು ಕರೆದಿದ್ದು, ಸದರಿ ಸಭೆಯಲ್ಲಿ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಕ್ರಮವನ್ನು ಗಂಗಾವತಿ ವಕೀಲರ ಸಂಘವು ತೀವ್ರವಾಗಿ ಖಂಡಿಸುತ್ತವೆ ನಿರ್ಣಯ ಕೈಗೊಂಡಿದ್ದವೆ.
ಕೊಪ್ಪಳ ಜಿಲ್ಲಾ ವಕೀಲರ ಸಂಘವು ಪ್ರತಿ ಹಂತದಲ್ಲೂ ಗಂಗಾವತಿ ವಕೀಲರ ಸಂಘಕ್ಕೆ ಅಸಹಕಾರ ಮಾಡುತ್ತಿದ್ದು, ಇದೇ ರೀತಿ ಅಸಹಕಾರ ಮುಂದುವರಿಸಿದರೆ ಮುಂದೆ ಒಂದು ದಿನ ಬೇರೆ ಜಿಲ್ಲಾ ಜೊತೆ ಸೇರುವ ಅಥವಾ ಪ್ರತ್ಯೇಕ ಜಿಲ್ಲೆಗಾಗಿ ಹೋರಾಟ ಮಾಡಬೇಕಾಗುತ್ತದೆ.

ಮುಂದಿನ ದಿನಮಾನಗಳಲ್ಲಿ ಕೊಪ್ಪಳ ವಕೀಲರ ಸಂಘದಿ0ದ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಚುನಾವಣೆಗೆ ಸ್ಪರ್ಧಿಸಿದರೆ ಅಂತವರಿಗೆ ಗಂಗಾವತಿ ವಕೀಲರ ಸಂಘದಿ0ದ ಬೆಂಬಲ ಸೂಚಿಸುವುದಿಲ್ಲ.

ಕೊಪ್ಪಳ ಜಿಲ್ಲಾ ವಕೀಲರ ಸಂಘ ಎಂಬ ಹೆಸರನ್ನು ಬಳಸಿಕೊಂಡು ಅಖಂಡ ಗಂಗಾವತಿ ವಕೀಲರ ಸಂಘಕ್ಕೆ ಅನ್ಯಾಯ ಮಾಡುತ್ತಿದ್ದು, ಇದನ್ನು ಸಹ ಸಂಘವು ತೀವ್ರವಾಗಿ ಖಂಡಿಸುತ್ತದೆ.

ಅಣ್ಣ-ತಮ್ಮ0ದಿರ0ತೆ ಇದ್ದ ನಾವೆಲ್ಲ ಈ ರೀತಿ ಪ್ರತಿಭಟನೆ ಮಾಡಿ ಮುಜ್ಗರಕ್ಕೆ ಈಡು ಮಾಡಿ ಕೊಟ್ಟಿರುವ ಕೊಪ್ಪಳ ವಕೀಲರ ಸಂಘದ ನಡೆಯನ್ನು ತೀವ್ರವಾಗಿ ಖಂಡಿಸುತ್ತೇದೆ. ಸದ್ರಿ ವಿಷಯವನ್ನು ಇಲ್ಲಿಗೆ ಬಿಡದೆ ಮುಂದುವರಸಿಕೊAಡ ಹೋದಲ್ಲಿ ಗಂಗಾವತಿ ವಕೀಲರ ಸಂಘ ಯಾವುದೇ ರೀತಿಯ ಹೋರಾಟಕ್ಕೂ ಸಿದ್ದರಾಗಿರುತ್ತವೆ ಎಂದು ನಿರ್ಣಯಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ಉಪಾಧ್ಯಕ್ಷ ಪರಸಪ್ಪ ನಾಯಕ್, ಪ್ರಧಾನ ಕಾರ್ಯದರ್ಶಿ ಎಚ್.ಎಂ.ಮ0ಜುನಾಥ, ಹಿರಿಯ ವಕೀಲ ಹೆಚ್.ಬಸನಗೌಡ, ಎಚ್.ಪ್ರಭಾಕರ್, ಎಸ್.ಎಸ್.ಪಟ್ಟಣಶೆಟ್ಟಿ, ಎಂ.ಪ0ಪನಗೌಡ, ಡಿ.ಎ.ಹಾಲಸಮುದ್ರ, ನಾಗನಗೌಡ ಪಾಟೀಲ್, ಶರದ್ ದಂಡಿನ್, ಕೆ.ಕೃಷ್ಣಪ್ಪ, ಕೆ.ಅನಂತರಾವ್, ಮಹೇಶ್ ಕುಲಕರ್ಣಿ, ಶರಣಗೌಡ ಮಾಲಿ ಪಾಟೀಲ್, ಪ್ರಕಾಶ್ ಕುಸುಬಿ, ನಜಿರ್ ಹುಸೇನ್, ತ್ರಿಲೋಚನ್, ಶಿವಪ್ಪ ಯಲ್ಬುರ್ಗಿ, ನಾಗರಾಜ್ ಬೂದಿ, ಮಹೇಶ್ ತಳ್ವಾರ್, ಪ್ರಲ್ಹಾದ ನವಲಿ, ಸಲೀಂ ಪಾಷಾ, ಹನುಮೇಶ ಅಯೋಧ್ಯಾ, ಅಕ್ಕಮಹಾದೇವಿ, ಸೌಭಾಗ್ಯ ಲಕ್ಷ್ಮಿ, ರಾಜೇಶ್ವರಿ, ರೋಜಾ, ಶರಣಮ್ಮ, ಅರುಣ ಅಯೋಧ್ಯಾ, ವಿರೇಶ ಕಮಲಾಪೂರ, ಶರಣಪ್ಪ ಕಂದಕೂರ, ಎ.ಜೆ.ರಂಗನಾಥ, ಭಿಮಸೇನ ದೋಟಿಹಾಳ ಅನೇಕ ವಕೀಲರುಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!