ಶ್ರೀ ಗವಿಸಿದ್ಧೇಶ್ವರ ಜಾತ್ರೆ
ಗವಿ ಶ್ರೀ ಕ್ರೀಡಾ ಉತ್ಸವ -2025 ರಾಜ್ಯಮಟ್ಟದ ಮಾದರಿಯಲ್ಲಿ ಆಯೋಜಿಸಲು ನಿರ್ಣಯ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 07- ನಗರದ ಪ್ರಸಿದ್ಧ ಶ್ರೀ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಗವಿ ಶ್ರೀ ಕ್ರೀಡಾ ಉತ್ಸವ -2025ದಲ್ಲಿ ವಿವಿಧ ಕ್ರೀಡಾ ಕೂಟ ಆಯೋಜಿಸಲಿದ್ದು ಯಶಸ್ವಿಗೆ ಶ್ರಮಿಸುವಂತೆ ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ಅವರು ನಗರಾಭಿವೃದ್ಧಿ ಪ್ರಧಿಕಾರದಲ್ಲಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಹಾಗೂ ಜಿಲ್ಲಾ ಸ್ಟಿಲ್ ಕಾರ್ಖಾನೆಗಳ ಒಕ್ಕುಟದ ಸಹೋಗದಲ್ಲಿ ಜರುಗಿದ ಕ್ರೀಡಾಕೂಟದ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರೆ ಶಿಸ್ತು ಹಾಗೂ ಅರ್ಥಪೂರ್ಣ ವಾಗಿ ಜರುಗುವ ಜಾತ್ರೆಯಾಗಿದೆ , ಅದರಲ್ಲಿ ಎಲ್ಲಾ ಕ್ರೀಡಾ ಪಟುಗಳು ಭಾಗವಹಿಸ ಬೇಕು ಹಾಗೂ ಯುವಕರು ಉತ್ಸಾಹದಿಂದ ಪಾಲ್ಗೊಂಡ ಯಶಸ್ವಿಗೋಳಿಸ ಬೇಕು ಎಂದು ಸೂಚಿಸಿದರು.
ಮೈಸೂರು ದಸರ ಮಾದರಿಯಲ್ಲೆ ಬರುವ ದಿನಗಳಲ್ಲಿ ಕ್ರೀಡಾ ಕೂಟ ಆಯೋಜನೆ ಆಗಬೇಕು ಸ್ಥಳಿಯ ಹಾಗೂ ರಾಜ್ಯಮಟ್ಟದ ಕ್ರೀಡಾಪಟುಗಳು ಇದರಲ್ಲಿ ಭಾಗವಹಿಸುವಂತೆ ಮಾದರಿಯಾಗಬೇಕು ಎಂದರು.
ಸಭೆಯಲ್ಲಿ ಉಪಸ್ಥಿತಿರಿದ್ದ ನಗರಾಭಿವೃದ್ಧಿ ಪ್ರಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಮಾತನಾಡಿ ಗವಿಶ್ರೀ ಕ್ರೀಡಾ ಉತ್ಸವದಲ್ಲಿ ಈ ಭಾರಿ ಕುಸ್ತಿ , ವಾಲಿಬಾಲ್, ವಿಕಲಚೇತನರ ವಾಲಿಬಾಲ್, ಕಬ್ಬಡ್ಡಿ ,ಮ್ಯಾರಥಾನ್, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್, ಶೆಟಲ್ ಬ್ಯಾಡ್ಮಿಂಟನ್, ಚಿತ್ರಕಲೆ, ರಂಗೋಲಿ, ಮಲ್ಲಕಂಬ , ಛದ್ಮವೇಷ ,ಗಾಳಿಪಟ,ಸಂಗ್ರಾಣಿ ಕಲ್ಲು ಎತ್ತುವದು, ಹಗ್ಗ ಜಗ್ಗಾಟ , ದೇಹದಾರ್ಢ್ಯತೆ ,ಎತ್ತಿನ ಬಂಡಿ ಸ್ಪರ್ದೆ, ಎತ್ತಿನ ಬಂಡಿ ಜಗ್ಗುವುದು ಹಾಗೂ ಕ್ರಿಕೇಟ್ ಎಲ್ಲಾ ಕ್ರೀಡೆಗಳನ್ನು ಆಯೋಜಿಸಲು ನಿರ್ಣಯಿಸಲಾಗಿದೆ ಎಂದರು.
ಈ ಸಂಧರ್ಭದಲ್ಲಿ ಗವಿಶ್ರೀ ಉತ್ಸವದ ಲೋಗೋವನ್ನು ಅಂತಿಮಗೋಳಿಸಲಾಯಿತು ಹಾಗೂ ಪ್ರತಿ ಕ್ರೀಡೆಗಳಿಗೆ ಸಮಿತಿ ರಚಿಸಿ ಶಿಸ್ತು ಬದ್ದವಾಗಿ ಕ್ರೀಡಾಕೂಟ ಆಯೋಜಿಸಲೂ ನೊರ್ಣಯಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ , ಮಾಜಿ ಸಂಸದ ಸಂಗಣ್ಣ ಕರಡಿ, ಜೆಡಿಎಸ್ ಮುಖಂಡ ಸಿ ವಿ ಚಂದ್ರಶೇಖರ , ಸ್ಟಿಲ್ ಕಾರ್ಖಾನೆಯ ಮುಖ್ಯಸ್ಥರು ಇದ್ದರು.