
ಗಿಣಿಗೇರಾ : ಬೇಟಿ ಬಚಾವ್ ಬೇಟಿ ಪಡವೋ ಕಾರ್ಯಕ್ರಮ
ಲಿಂಗ ಸಮಾನತೆ, ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಪೋಷಣೆ ನಮ್ಮೆಲ್ಲರ ಹೊಣೆ : ಶಿವಶರಣಪ್ಪ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 8- ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕೊಪ್ಪಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕೊಪ್ಪಳ ಶಿಶು ಅಭಿವೃದ್ಧಿ ಯೋಜನೆ ಇವರ ಸಹಯೋಗದಲ್ಲಿ ಬೇಟಿ ಬಚಾವ್ ಬೇಟಿ ಪಡವೋ ಕಾರ್ಯಕ್ರಮ ಗಿಣಿಗೇರಾ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಶರಣಪ್ಪ ಗದ್ದಿ ಕಾರ್ಯಕ್ರಮದ ಕುರಿತು ಮಾತನಾಡಿ, ಲಿಂಗ ಸಮಾನತೆ, ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಪೋಷಣೆ ನಮ್ಮೆಲ್ಲರ ಹೊಣೆ, ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವುದು, ಹೆಣ್ಣು ಮಕ್ಕಳನ್ನು ಬಾಲ್ಯವಿವಾಹದಿಂದ ರಕ್ಷಣೆ, ಲಿಂಗ ಬ್ರೂಣಹತ್ಯೆ ತಡೆಗಟ್ಟುವುದು ಹಾಗೂ ಮಕ್ಕಳ ರಕ್ಷಣೆ ಪೋಷಕರ ಜವಬ್ದಾರಿಯಾಗಿದೆ. ಇಲಾಖೆಯ ಯೋಜನೆಗಳಾದ ಪಿ.ಎಂ.ಎA.ವಿ.ವೈ, ಗ್ರಹಲಕ್ಷ್ಮಿ, ಸ್ತ್ರೀ-ಶಕ್ತಿ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆಗಳ ಅನುಕೂಲ ಪಡೆಯುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಾಲವಿಕಾಸ ಸಮಿತಿ ಅಧ್ಯಕರಾದ ಶ್ರೀದೇವಿ, ಎಸ್.ಡಿಎಂಸಿ ಉಪಾಧ್ಯಕ್ಷರಾದ ಲಕ್ಷ್ಮಿ ಗೊಡೆಕಾರ್, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಮಕ್ಕಳು, ಕಿಶೋರಿಯರು, ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಹಾಗೂ ಮಕ್ಕಳ ಪೋಷಕರು ಭಾಗವಹಿಸಿದ್ದರು.
ಗಿಣಿಗೇರಾ ವಲಯ ಮೇಲ್ವಿಚಾರಕಿಯರಾದ ಗಾಯತ್ರಿ ಯವರು ಕಾರ್ಯಕ್ರಮವನ್ನು ನಿರೂಪಿಸಿದರು.