4

ಸಿರುಗುಪ್ಪ ನಗರಸಭೆಯ ಸರ್ವ ಸದಸ್ಯರ ಸಾಮಾನ್ಯ ಸಭೆ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 20- ನಗರಸಭೆ ಸಭಾಭವನದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ನಗರಸಭಾ ಸರ್ವ ಸದಸ್ಯರು ಪಕ್ಷಭೇದ ಮರೆತು ಅಧಿಕಾರಿಗಳಿಗೆ ಪ್ರಶ್ನಿಸಿದ ಘಟನೆ ನಡೆಯಿತು.

ಸಭೆಗೆ ಅಧಿಕಾರಿಗಳು ಹಿಂದಿನ ಸಭೆಯ ನಡಾವಳಿಗೆ ಒಪ್ಪಿಗೆ ನೀಡುವಂತೆ ಓದಿ ತಿಳಿಸಿದಾಗ ಸದಸ್ಯರೆಲ್ಲರೂ ಆಕ್ಷೇಪ ವ್ಯಕ್ತಪಡಿಸಿ ಹಿಂದಿನ ಸಭೆಯಲ್ಲಿ ಕೈಗೊಂಡ ನಡವಳಿ ಪ್ರತಿ ಕೊಡದ ಹೊರತು ಒಪ್ಪಿಗೆ ಸೂಚಿಸುವುದಿಲ್ಲ ಎಂದು ಎಲ್ಲಾ ಸದಸ್ಯರು ಪಟ್ಟು ಹಿಡಿದರು ನಗರಸಭಾ ಪೌರಾಯುಕ್ತ ಎಚ್‌ಎನ್ ಗುರುಪ್ರಸಾದ್ ಅವರು ಸದಸ್ಯರ ಮಾತಿಗೆ ಮುಂದಿನ ಸಭೆಯಲ್ಲಿ ನಡಾವಳಿ ಪ್ರತಿಯನ್ನು ಎಲ್ಲರಿಗೂ ತಲುಪಿಸಲಾಗುವುದು ಎಂದ ಮೇಲೆ ಸಭೆ ಮುಂದುವರೆಯಿತು.

ನಗರಸಭೆಯ ೫ನೇ ವಿಭಾಗದ ಸದಸ್ಯ ಮಲ್ಲಿಕಾರ್ಜುನ ಮಾತನಾಡಿ, ವಾಹನ ಡೀಸೆಲ್ ಅದು ಹೇಗೆ ಹೆಚ್ಚಾಗಿದೆ ನೀವು ಅತಿ ಹೆಚ್ಚು ಲೆಕ್ಕ ತೋರಿಸುತ್ತಿದ್ದೀರಿ ಎಂದು ಆರೋಪ ಮಾಡಿದರು ಹಿರಿಯ ಆರೋಗ್ಯ ನಿರೀಕ್ಷಕ ರಂಗಸ್ವಾಮಿ ಮಲ್ಲಿಕಾರ್ಜುನ ಅವರ ವಿಷಯಕ್ಕೆ ಉತ್ತರಿಸಿ ವಾಹನ ಮೇಲಿನ ಮೈಲೇಜ್ ಅಷ್ಟೇ ಬರೋದು ಯಾವುದು ಹೆಚ್ಚು ಇಲ್ಲ ಎಂದು ಸಭೆಗೆ ತಿಳಿಸಿದರು.

ಸೆಪ್ಟಿಕ್ ಟ್ಯಾಂಕ್ ೪೭ ಲಕ್ಷ ರೂ. ಖರೀದಿ ಮಾಡಿದ ಟ್ಯಾಂಕರ್ ಬಗ್ಗೆ ಸರಿಯಾಗಿ ಕಾರ್ಯ ನಿರ್ವಹಿಸದೆ ಅಧಿಕಾರಿಗಳ ನಿರ್ಲಕ್ಷದಿಂದ ಕೆಟ್ಟು ನಿಂತಿದೆ ಈ ಟ್ಯಾಂಕರ್‌ನ ಖರೀದಿಯಲ್ಲಿ ಲೋಪ ಎಸಿಗಿದೆ ಎಂದು ಆರೋಪಿಸಿದರು ಪೌರಾಯುಕ್ತರು ಅದಕ್ಕೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದರು.

ಸಿರುಗುಪ್ಪ ನಗರದಲ್ಲಿ ರಸ್ತೆ ಅಗಲೀಕರಣ ಆಗಬೇಕಾಗಿದೆ ರಸ್ತೆ ಪಕ್ಕದಲ್ಲಿ ಡಬ್ಬೆ ಅಂಗಡಿಗಳು ರಸ್ತೆಗೆ ಬಂದಿವೆ ಇದರಿಂದ ರಸ್ತೆಯಲ್ಲಿ ಅಪಘಾತ ಹೆಚ್ಚುತ್ತಿದೆ ಸಿರುಗುಪ್ಪ ನಗರವು ಆರೋಗ್ಯ ಇಲಾಖೆ ಸ್ವಚ್ಛತೆ ವಿದ್ಯುತ್ ಕುಡಿಯುವ ನೀರಿನ ಸಮಸ್ಯೆ ಎಲ್ಲಾ ಸಮಸ್ಯೆಗಳಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ನಮ್ಮ ಸಿರುಗುಪ್ಪ ತಾಲೂಕು ಪ್ರಥಮ ಸ್ಥಾನ ಪಡೆದಿದೆ ಎಂದು ಸದಸ್ಯ ಮುರಳಿ ಮೋಹನ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆಯಿಂದ ಯಾವುದೇ ಟೆಂಡರ್ ನೀಡದೆ ಮೋಟಾರ್ ಹಾಗೂ ಲ್ಯಾಪ್‌ಟಾಪ್ ಮತ್ತು ಇನ್ನಿತರ ಕಾಮಗಾರಿಯನ್ನು ಚಾಲನೆ ನೀಡುವುದು ಎಷ್ಟು ಸರಿ ಎಂದು ಸದಸ್ಯ ಡಿ.ಮಂಜುನಾಥ ಅವರು ಆರೋಪ ಮಾಡಿದರು.

ನಗರದಲ್ಲಿ ಡೆಂಗ್ಯು ಪ್ರಕರಣಗಳು ಹೆಚ್ಚುತ್ತಿವೆ ಇದರ ಬಗ್ಗೆ ಇಲ್ಲಿಯವರೆಗೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಕುಡಿಯುವ ನೀರಿನ ಪೈಪ್‌ಲೈನ್ ಸಂಬಂದಿಸಿದಂತೆ ಸಿರುಗುಪ್ಪ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಇದರ ಬಗ್ಗೆ ಸ್ವಲ್ಪಾದರೂ ಗಮನ ಹರಿಸಬೇಕು ಎಂದು ನಗರಸಭೆ ಸದಸ್ಯ ಚಿದಾನಂದ ರಾಯುಡು ಅವರು ಸಭೆಯಲ್ಲಿ ತಿಳಿಸಿದರು. ಈ ಬಗ್ಗೆ ಪೌರಾಯುಕ್ತರು ಭರವಸೆ ನೀಡಿದರು.

ನಗರಸಭೆಯ ಎಇಇ ಗಂಗಾಧರಗೌಡ ಮಾತನಾಡಿದರು, ನಗರಸಭೆ ಅಧ್ಯಕ್ಷ ರೇಣುಕಮ್ಮ ಅವರು ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷ ಯಶೋಧ, ನಗರಸಭಾ ಎಲ್ಲಾ ಸದಸ್ಯರು, ನಾಮ ನಿರ್ದೇಶನ ಸದಸ್ಯರು, ಸಾಕ್ಷರತಾ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ, ಸೇರಿದಂತೆ ನಗರಸಭೆಯ ಸಿಬ್ಬಂದಿ ವರ್ಗದವರು ಇದ್ದರು.

Leave a Reply

Your email address will not be published. Required fields are marked *

error: Content is protected !!