
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾ ಸಭೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 20- ಪಿಕೆಪಿಎಸ್ಸೆಸ್ಸ್ ಸಂಘದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಲು ಎರಡು ಜನ ಪಿಗ್ನಿ ಏಜೆಂಟರನ್ನು ನೇಮಕ ಮಾಡಿ ಸಂಘದ ಶ್ರಯೋಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ರೈತರು ಒತ್ತಾಯಿಸಿದರು.
ತಾಲೂಕಿನ ಬೇವೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಮಹಾಸಭೆ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಾಗೇಶ ತುಂಬ್ರಿ ಮಾಹಾ ವಾರ್ಷಿಕ ವರದಿ ವಾಚಿಸಿ, ಕಳೆದ ವರ್ಷದ ಅವಧಿಯಲ್ಲಿ ೧,೨೨,೨೦೩ ರೂ. ಸಂಘದ ಲಾಭ, ೪,೦೪,೬೭,೯೪೦ ರೂ.ಕೋಟಿ ಸಂಘದಲ್ಲಿ ಉತ್ತಮ ಆದಾಯ ಮೂಲಕ ಎಲ್ಲರೂ ಸಹಕರಿಸಬೇಕಿದೆ. ಸಂಘದ ಸದಸ್ಯರು ಆರ್ಥಿಕ ಸ್ವಾತಂತ್ರ್ಯಕ್ಕಾಗಿ ರೈತರಿಗೆ ಸಾಲಗಳನ್ನು ಸಕಾಲಕ್ಕೆ ಮಂಜೂರು ಮಾಡುವ ಮೂಲಕ ಆರ್ಥಿಕ ಅಭಿವೃದ್ಧಿ ಸ್ವಾವಲಂಬನೆಗೆ ನೆರವಾಗಿದೆ. ಸಂಘದಿಂದ ರೈತರಿಗೆ ಗೊಬ್ಬರ ವಿತರಿಸಲಾಗುವುದು. ಸಂಘದ ಏಳ್ಗೆಗಾಗಿ ಶ್ರಮಿಸಲಾಗುವುದು ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ ನಾಗರಾಜ ಹಳ್ಳಿ ಮಾತನಾಡಿ, ಕಳೆದ ೪ ದಶಕಗಳಿಂದ ಗ್ರಾಮದಲ್ಲಿ ಸಹಕಾರ ಸಂಘ ಕಾರ್ಯ ನಿರ್ವಹಿಸಲಾಗಿದೆ. ವ್ಯಾಪ್ತಿಯ ನಾನಾ ಗ್ರಾಮಗಳಲ್ಲಿ ರೈತ ಸದಸ್ಯರಿಗೆ ಸಾಲ ಸೌಲಭ್ಯ, ವ್ಯವಹಾರ ನಡೆಸಲು ಸಹಕಾರಿ ಸಂಘ ನೆರವಾಗಿ ಕೆಲಸ ಮಾಡಲಾಗಿದೆ. ಪ್ರತಿಯೊಬ್ಬರೂ ಸಂಘದ ಸವಲತ್ತು ಸದ್ಬಳಿಕೆ ಮಾಡಿಕೊಳ್ಳಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂದಮ್ಮ ಬಳಿಗಾರ್, ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಮಂಜುಳಾ ಬಳಿಗಾರ್, ನಿರ್ದೇಶಕರಾದ ಮಲ್ಲಪ್ಪ ಕರಡಿ, ಮಲ್ಲಪ್ಪ ಕೋನನಗೌಡ್ರ. ಹನುಮಗೌಡ ಹಳ್ಳಿ, ಕಲ್ಲಪ್ಪ ಹಡಪದ, ರೂಪಾ ಕಮ್ಮಾರ, ರಂಜಾನಬಿ ಮಾಬುಸಾಬ್ ಗೋರ್ಲೆಕೊಪ್ಪ, ಮುಖಂಡರಾದ ಯಮನಪ್ಪ ಗಡ್ಡದ, ದುಂಡಪ್ಪ ಕೊಳಜಿ,ತೋಟಪ್ಪ, ಸಿದ್ದಪ್ಪ ತುಪ್ಪದ್, ಬುಡ್ಡಪ್ಪ ಹಳ್ಳಿ, ಬಸಣ್ಣ ಚಿತ್ತವಾಡಗಿ, ಸಿದ್ದಣ್ಣ ಬಡಿಗೇರ್ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.