ಪಾರ್ಶ್ವವಾಯು ಸಂಭವಿಸಿದ ಒಂದು ಗಂಟೆಯ ಒಳಗಾಗಿ ಚಿಕಿತ್ಸೆ ಪದೆಯಿರಿ : ಡಾ.ಆನಂದ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 30- ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಬೋಧಕ ಆಸ್ಪತ್ರೆ ಕೊಪ್ಪಳ ಇವರ ಸಹಯೋಗದಲ್ಲಿ ವಿಶ್ವ ಪಾರ್ಶ್ವವಾಯು ದಿನಾಚರಣೆಯ ಕಾರ್ಯಕ್ರಮವು ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆಯಿತು.
ಜಿಲ್ಲಾ ಭೋದಕ ಆಸ್ಪತ್ರೆ ವೈದ್ಯ ಡಾ.ಆನಂದ್ ಚೌಹಾಣ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ, ಮೆದುಳಿನ ಆರೋಗ್ಯವು ಅತ್ಯಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ ಅಲ್ಲದೆ ಪಾರ್ಶ್ವವಾಯು ತಲೆನೋವು ಮರೆವಿನ ಕಾಯಿಲೆ ಏನೋ ಅನೇಕ ರೀತಿಯ ನರರೋಗದ ಸಮಸ್ಯೆಗಳ ಬಗ್ಗೆ ಯಾವ ರೀತಿಯಾಗಿ ವೈದ್ಯಕೀಯ ತುರ್ತು ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಜಾಗೃತಿ ಮೂಡಿಸಿದರು ಪಾರ್ಶ್ವವಾಯು ಸಂಭವಿಸಿದ ಒಂದು ಗಂಟೆಯ ಒಳಗಾಗಿ ಜಿಲ್ಲಾಸ್ಪತ್ರೆ ಅಥವಾ ಹತ್ತಿರದ ಆಸ್ಪತ್ರೆಗಳಿಗೆ ತುರ್ತಾಗಿ ಹೋಗಿ ಚಿಕಿತ್ಸೆಯನ್ನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಆರೋಗ್ಯ ಮತ್ತು ಶಿಕ್ಷಣಾಧಿಕಾರಿ ಶಿವಾನಂದ್ ಮಾತನಾಡಿ ಇತ್ತೀಚಿನ ದಿನಮಾನಗಳಲ್ಲಿ ಮೆದುಳಿನ ಆರೋಗ್ಯವು ತನ್ನದೇ ಆಗಿರುವಂತಹ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುತ್ತದೆ ಅಲ್ಲದೆ ಇತ್ತೀಚಿನ ಜನಗಳಲ್ಲಿ ಪಾರ್ಶ್ವವಾಯು ಒಂದು ಅಪಾಯಕಾರಿ ಆದಂತಹ ಮೆದುಳಿನ ಅನಾರೋಗ್ಯವಾಗಿ ಕಾಡುತ್ತಿದೆ ಜನರು ಇದರ ಬಗ್ಗೆ ನಿರ್ಲಕ್ಷ ತೋರದೆ ಸೂಕ್ತ ಸಮಯದಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು ತಮ್ಮ ಅಮೂಲ್ಯವಾದ ಜೀವನವನ್ನು ಉಳಿಸಿಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಇನ್ನೀತರರು ಉಪಸ್ಥಿತರಿದ್ದರು.