
ಮಕ್ಕಳಲ್ಲಿ ಉತ್ತಮಸಂಸ್ಕೃತಿ, ಮಾನವೀಯ ಮೌಲ್ಯಗಳನ್ನು ತುಂಬುವ ಕೆಲಸ ಆಗಬೇಕು : ಶಾಸಕ ದೊಡ್ಡನಗೌಡ ಪಾಟೀಲ
ಕರುನಾಡ ಬೆಳಗು ಸುದ್ದಿ
ಕುಷ್ಟಗಿ, 11- ಶಿಕ್ಷಕರು ತಪ್ಪು ಮಾಡಿದರೆ ವಿದ್ಯಾರ್ಥಿಗಳ ಭವಿಷ್ಯವೇ ಡೋಲಾಯಮಾನವಾಗಲಿದ್ದು ಮಕ್ಕಳಲ್ಲಿ ಆಟ ಪಾಠ, ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕೃತಿ, ಮಾನವೀಯ ಮೌಲ್ಯಗಳನ್ನು ತುಂಬುವ ಕೆಲಸ ಶಿಕ್ಷಕ ವೃಂದದವರಿಂದ ಆಗಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ೧೩೬ನೇ ಜನ್ಮದಿನಾಚರಣೆ ಪ್ರಯುಕ್ತ ಕುಷ್ಟಗಿ ತಾಲೂಕ ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಸ್ಥಳೀಯ ಕ್ರೈಸ್ತ ದ ಕಿಂಗ್ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಉದ್ಘಾಟಕರಾಗಿ ಮಾತನಾಡಿದ ಅವರು ಶಿಕ್ಷಣ ಮತ್ತು ಶಿಕ್ಷಕ ಎಂಬುವ ಪದಗಳಿಗೆ ಬಹಳ ಪಾವಿತ್ರತೆ ಇರುವ ಹುದ್ದೆ. ಶಿಕ್ಷಕ ತಪ್ಪು ಮಾಡಿದರೆ ಮಕ್ಕಳ ಭವಿಷ್ಯವೇ ಡೋಲಾಯಮಾನ ಆಗುತ್ತದೆ. ನಿಮ್ಮ ವೃತ್ತಿಯ ಬಗ್ಗೆ ನಿಮಗೆ ಗೌರವವಿಟ್ಟು ಕೆಲಸ ಮಾಡಿ. ಸಂಬಳಕ್ಕೆ ಮಾತ್ರ ಸೀಮಿತವಾಗುವ ಶಿಕ್ಷಕರಾಗಬಾರದು. ಮಕ್ಕಳಲ್ಲಿ ಸಂಸ್ಕೃತಿ, ಉತ್ತಮ ಮಾನವೀಯ ಮೌಲ್ಯವನ್ನು ತುಂಬುವ ಕೆಲಸ ಶಿಕ್ಷಕರು ಮಾಡಬೇಕು. ಶಿಕ್ಷಕರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಕ್ಕಳು ಸಹ ಇಂದು ಮೊಬೈಲ್ ಗೆ ದಾಸರಾಗುತ್ತಿದ್ದಾರೆ. ಇದರ ಬಗ್ಗೆ ಶಿಕ್ಷಕರು ಗಮನಹರಿಸಿ ಮಕ್ಕಳಲ್ಲಿ ಉತ್ತಮ ಶಿಕ್ಷಣ ಪ್ರೇಮವನ್ನು ಮೂಡಿಸಬೇಕು.
ನಾನು ಶಾಸಕನಾದ ಮೇಲೆ ಶಿಕ್ಷಣ ಕ್ಷೇತ್ರಕ್ಕೆ ಈ ಬಾರಿ ೪೪ ಕೋಟಿ ಅನುದಾನ ಕೊಡುವ ಕೆಲಸ ಮಾಡಿದ್ದೇನೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಉನ್ನತ ಮಟ್ಟಕ್ಕೇರಿಸಲು ಹಾಗೂ ಪ್ರೌಢ ಶಾಲೆಗಳನ್ನು ಹಾಗೂ ವಿವಿಧ ಕಾಲೇಜುಗಳನ್ನು ನಮ್ಮ ಕ್ಷೇತ್ರಕ್ಕೆ ತರುವ ಮೂಲಕ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದರು.
ಫ್ರೋ.ಎಂ.ಕೃಷ್ಣೇಗೌಡ್ರ ಮಾತನಾಡಿ ನಮ್ಮ ದೇಶದಲ್ಲಿ ಶಿಕ್ಷಕರಿಗೆ ಹೆಚ್ಚಿನ ಗೌರವ ಇದೆ. ಪಾಶ್ಚಾತ್ಯ ದೇಶದಲ್ಲಿ ಶಿಕ್ಷರನ್ನು ಗೌರವಿಸೋಲ್ಲ. ಶಿಕ್ಷಕರ ಸ್ಥಾನ ತುಂಬಾ ದೊಡ್ಡದು. ನಮ್ಮಭವಿಷ್ಯದ ಪ್ರಜೆಗಳನ್ನು ತಯಾರು ಮಾಡುವುದು ನಮ್ಮ ಶಾಲೆಯ ಶಿಕ್ಷಕರು. ಶಿಕ್ಷಕರು ತಮ್ಮ ವೃತ್ತಿಗೆ ಚ್ಯುತಿ ಬಾರದಂತೆ ಆಧುನಿಕ ಜಗತ್ತಿನಲ್ಲಿ ಬೇಕಾದ ಶಿಕ್ಷಣನ್ನು ಮಕ್ಕಳಿಗೆ ನೀಡುವುದರ ಜೊತೆ ನಮ್ಮನಾಡಿನ ಸಂಸ್ಕೃತಿಯನ್ನು ಕಲಿಸಬೇಕು ಎಂದರು.
ಮಾಜಿ ಶಾಸಕ ಹಾಗೂ ಮುನಿರಾಬಾದ ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ ಮಾತನಾಡಿ ಶಿಕ್ಷಕರು ತಮ್ಮ ಸ್ಥಾನಮಾನವನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಬೇಕು. ಶಿಕ್ಷಕರ ಪಾತ್ರ ಎಲ್ಲರ ಬದುಕಿನಲ್ಲೂ ಬಹಳ ಮುಖ್ಯ. ನಮ್ಮನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪುಗೊಳ್ಳಲು ಅವರ ಮಾರ್ಗದರ್ಶನವೇ ಕಾರಣ. ನಮ್ಮ ಕಾಲದಲ್ಲಿ ಶಿಕ್ಷಣಕ್ಕೆ ಬಹಳ ಅನುಕೂಲ ಇರಲಿಲ್ಲ. ಈಗ ಲ್ಯಾಪಟಾಪ್ ಕಂಪ್ಯೂಟರ್, ಸ್ಮಾರ್ಟ ಕ್ಲಾಸ್ ಡಿಜಿಟಲ್ ಶಿಕ್ಷಣ ಈಗಿನ ಮಕ್ಕಳಿಗೆ ಸಿಗುತ್ತಿದೆ. ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಲು ಶಿಕ್ಷಕರು ಮುಂದಾಗಬೇಕೆಂದು ಹೇಳಿದರು.
ಬಿಇಓ ಸುರೇಂದ್ರ ಕಾಂಬಳೆ ಮಾತನಾಡಿ ಎಲ್ಲಾ ಶಿಕ್ಷಕರು ಪ್ರಾಮಾಣಿಕವಾಗಿ ಶಿಕ್ಷಣ ನೀಡುತ್ತಿದ್ದು ನಮ್ಮ ತಾಲೂಕ ಉತ್ತಮ ಸಾಧನೆಯಲ್ಲಿ ಸಾಗುತ್ತಿದೆ. ಸರಕಾರದ ಆಶಯದಂತೆ ಎಲ್ಲಾ ಯೋಜನೆಗಳು ಸಹ ಜಾರಿಗೊಳಿಸುವಲ್ಲಿ ನಮ್ಮ ಶಿಕ್ಷಕರು ಶ್ರಮಿಸುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪುರಸ್ಕೃತರು ಸಹ ನಮ್ಮ ತಾಲೂಕಿನ ಶಿಕ್ಷಕರು ಪಡೆದಿದ್ದಾರೆ. ಗುಣಾತ್ಮಕ ಶಿಕ್ಷಣ ನೀಡುವಲ್ಲಿ ನಮ್ಮ ತಾಲೂಕಿನ ಶಿಕ್ಷಕರು ಮುಂದಿದ್ದಾರೆ ಎಂದರು.
ಜಿ.ಪಂ ಉಪಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ, ಪ್ರೊ. ಎಮ್ ಕೃಷ್ಣೆಗೌಡ, ಬಿ.ಇ.ಓ ಸುರೇಂದ್ರ ಕಾಂಬಳೆ, ತಾಪಂ ಇ.ಓ ಪಂಪಪತಿ ಹಿರೇಮಠ, ತಾಲೂಕ ನೌಕರರ ಸಂಘದ ಅಧ್ಯಕ್ಷ ಬಾಲಾಜಿ ಬಳಿಗಾರ, ಎಮ್ ಸರಸ್ವತಿ, ಸೋಮನಗೌಡ ಪಾಟೀಲ, ಜಗದೀಶ ಮೆಣೆದಾಳ, ಹೈದರಲಿ ಜಾಲಿಹಾಳ, ಶಾಕೀರಬಾಬಾ ಶಿವಪ್ಪ ವಾಗಮೋರೆ, ಗವಿಸಿದ್ದಪ್ಪ ನಾಗಲೀಕರ, ಶೇಖರ ಮೇಟಿ, ಜಗದೀಶ ಸೂಡಿ, ಸಿದ್ರಾಮಪ್ಪ ಅಮರಾವತಿ, ಗುರಪ್ಪ ಕುರಿ, ಶರಣಪ್ಪ ಕೆ, ದಾವಲಸಾಬ ವಾಲೀಕರ , ಜೀವನಸಾಬ ಬಿನ್ನಾಳ, ಶರಣಪ್ಪ ತೆಮ್ಮಿನಾಳ, ರೇವರೆಂಡ್ ಫಾದರ್ ಜಾನ್ ಪೀಟರ, ಮಹಾದೇವಪ್ಪ ಗೊಣ್ಣಗರ, ನೀಲನಗೌಡ ಹೊಸಗೌಡ್ರ , ಮಲ್ಲಪ್ಪ ಕುದರಿ, ನಿಂಗನಗೌಡ ಪಾಟೀಲ, ಸುಭಾನಸಾಬ ನದಾಫ್, ಶ್ರೀಧರ ದೇಸಾಯಿ, ಯಮನಪ್ಪ ಚೂರಿ, ಶಿವಶಂಕರ ಸೇರಿದಂತೆ ಮತ್ತಿತರರು ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಮಲ್ಲಯ್ಯ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಶಿಕ್ಷಕರಿಂದ ವಿಶೇಷ ನೃತ್ಯದೊಂದಿಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರವನ್ನು ಅದ್ಧೂರಿ ಮೆರವಣಿಗೆ ಮಾಡಲಾಯಿತು.