ಕ್ರೀಡೆಯಿಂದ ಮಾನಸಿಕ ಸದೃಢತೆ ಉತ್ತಮ ಆರೋಗ್ಯ ಸಾಧ್ಯ : ಕೋಟ್ಟೂರು ಶ್ರೀಗಳು
ಕರುನಾಡ ಬೆಳಗು ಸುದ್ದಿ
ಗಂಗಾವತಿ, 4- ಕ್ರೀಡೆಯಿಂದ ಮಾನಸಿಕ ಸದೃಢತೆ ಉತ್ತಮ ಆರೋಗ್ಯ ಸಾಧ್ಯ ಎಂದು ಕಲ್ಮಠದ ಪಿಠಾಧಿಪತಿ,ಕೋಟ್ಟೋರೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಕೋಟ್ಟೂರು ಶ್ರೀಗಳು ಹೇಳಿದರು.
ಅವರು ನಗರದ ಕೋಟ್ಟೂರೇಶ್ವರ ಕಾಲೇಜಿನಲ್ಲಿ ಜರುಗಿದ ಕೇಂದ್ರ ವಲಯ ಮಟ್ಟದ ಕ್ರೀಡಾಕೂಟದ ಕ್ರಿಡಾ ಜ್ಯೋತಿ ಬೆಳಗಿಸಿ ಮಾತನಾಡಿ ಪಠ್ಯದೋಂದಿಗೆ ಪಠ್ಯೇತರ ಚಟುವಟಿಕೆ ಮುಖ್ಯವಾಗಿ ಬೇಕು. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಸೋಲು ಗೆಲುವು ಸಹಜವಾಗಿರುತ್ತದೆ ಎಂದರು.
ಈ ಸಂಧರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಶರಣೆಗೌಡ ಮಾಲಿಪಾಟೀಲ್, ಉಪಾಧ್ಯಕ್ಷ ಚನ್ನಬಸಯ್ಯ ಸ್ವಾಮಿ, ಸಹ ಕಾರ್ಯದರ್ಶಿ ಊ. ಒ. ಮಂಜುನಾಥ ವಕೀಲರು, ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.